LSG ಯಿಂದ DCಗೆ ಹೋದ ಪಂತ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ABD

LSG ಯಿಂದ DCಗೆ ಹೋದ ಪಂತ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ABD

27 ಕೋಟಿಗೆ ಎಲ್‌ಎಸ್‌ಜಿಗೆ ಹೋಗಿದ್ದ ರಿಷಭ್ ಪಂತ್ ಈಗ ಡೆಲ್ಲಿಗೆ ವಾಪಸ್ ಆಗಿದ್ದಾರೆ. ಮುಂಬರುವ 2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಿಷಭ್‌ ಪಂತ್‌  ಆಡಲಿದ್ದಾರೆ.  2025 ಹಾಗೂ 2026ರ ಐಪಿಎಲ್‌ ಟೂರ್ನಿಯಲ್ಲಿ LSG  ಪರ ಆಡಿದ ಬಳಿಕ ಇದೀಗ ಡೆಲ್ಲಿ ಕ್ಯಾಪಿಟಲ್ಸ್‌ಗೆ ಟ್ರೇಡ್‌ ಡೀಲ್‌ ಮೂಲಕ ಮರಳಿದ್ದಾರೆ. 12 ಕೋಟಿ ಕಮ್ಮಿ ಬೆಲೆಗೆ  ಡೆಲ್ಲಿ ಫ್ರಾಂಚೈಸಿಗೆ ಮರಳಿದ್ದಾರೆ. ಈ ಬಗ್ಗೆ ದಕ್ಷಿಣ ಆಫ್ರಿಕಾ ದಿಗ್ಗಜ ಎಬಿ ಡಿ ವಿಲಿಯರ್ಸ್‌   ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ ಕಿಚ್ ಸುದೀಪ್ ಕ್ಯಾರವನ್ – 6.5 ಕೋಟಿ ಕ್ಯಾರವನ್ ವಿಶೇಷತೆಯೇನು ಗೊತ್ತಾ?

ಭಾರತದ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿರುವ ಬಗ್ಗೆ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿ  ಮಾತನಾಡಿದ್ದಾರೆ.  ಈ ಬೆಳವಣಿಗೆ ನನಗೆ ಅಚ್ಚರಿಯೇನೂ ಅಲ್ಲ. ಕಳೆದ ಋತುವಿನಲ್ಲಿ ತಂಡದ ಪ್ರದರ್ಶನವನ್ನು ನೋಡಿದರೆ ಮತ್ತು ಪಂತ್ ಅವರ ಪಂದ್ಯಗಳ ನಂತರದ ಕೆಲವು ಸಂದರ್ಶನಗಳನ್ನು ಗಮನಿಸಿದರೆ, ಅವರು ನಿರಾಶೆಗೊಂಡಿರುವ ಸೂಚನೆಗಳು ಆಗಲೇ ಕಂಡುಬಂದಿದ್ದವು. ಆದ್ದರಿಂದ ಅವರು ಮತ್ತೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿದ್ದಾರೆ  ಎಂದು ತಿಳಿಸಿದ್ದಾರೆ.

 ರಿಷಭ್ ಪಂತ್ ಅವರಿಗೆ ಲಖನೌ ಸೂಪರ್ ಜಯಂಟ್ಸ್‌ (ಎಲ್‌ಎಸ್‌ಜಿ) ಪರ ಕಳೆದ ಎರಡು ಐಪಿಎಲ್ ಋತುಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ತಂದುಕೊಡಲಿಲ್ಲ. ನಾಯಕತ್ವ ಮತ್ತು ಬ್ಯಾಟಿಂಗ್ ಎರಡರಲ್ಲೂ ಅವರು ಸಂಕಷ್ಟ ಅನುಭವಿಸಿದರು. 2025ರ ಐಪಿಎಲ್‌ ಟೂರ್ನಿಯಲ್ಲಿ ಪಂತ್ 13 ಇನಿಂಗ್ಸ್‌ಗಳಲ್ಲಿ ಕೇವಲ 269 ರನ್ ಗಳಿಸಿದರು. ಎಲ್‌ಎಸ್‌ಜಿ ಪ್ಲೇಆಫಫ್ಸ್‌ ಸ್ಪರ್ಧೆಯಿಂದ ಹೊರಬಿದ್ದ ಬಳಿಕ ಅವರು ಶತಕ ಸಿಡಿಸಿದ್ದರು. 2026ರ ಋತುವಿನಲ್ಲಿ 312 ರನ್ ಗಳಿಸಿದರೂ, ಒಂದೇ ಒಂದು ಅರ್ಧಶತಕ ಮಾತ್ರ ದಾಖಲಿಸಲು ಸಾಧ್ಯವಾಯಿತು .

Kishor KV

Leave a Reply

Your email address will not be published. Required fields are marked *