5.. 1.. 3.. 148ಕ್ಕೆ ALL OUT – ಭಾರತದ ಅಹಂಗೆ ಐರ್ಲೆಂಡ್ ಪೆಟ್ಟು
ಚಾಂಪಿಯನ್ಸ್ ಗೆ ಕ್ರಿಕೆಟ್ ಶಿಶುಗಳ ಪಾಠ

ಟಿ-20ಐ ಫಾರ್ಮೆಟ್ನಲ್ಲಿ ನಾವೇ ಬಾಸ್ ಅಂತಾ ಮೆರೀತಿದ್ದ ಭಾರತ ಈಗ ಕ್ರಿಕೆಟ್ ಶಿಶುಗಳ ಎದುರಲ್ಲೇ ಮಂಡಿಯೂರಿದೆ. ಅದು ಕೂಡ ಹೀನಾಯ ಸೋಲಿನ ಮೂಲಕ. ಐರ್ಲೆಂಡ್ ವಿರುದ್ಧದ ಮೊದಲ ಟಿ-20ಐ ಮ್ಯಾಚಲ್ಲಿ ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ಭಾರತ ಕಂಪ್ಲೀಟ್ ಸರೆಂಡರ್ ಆಗಿದೆ. ಎಕ್ಸ್ಪೀರಿಯನ್ಸ್ ಟೀಂ ಅಂತಾ ಅಖಾಡಕ್ಕಿಳಿದಿದ್ದ ಭಾರತ ಎಲ್ಲಿಯೂ ಕೂಡ ಫೈಟ್ ಕೊಡ್ಲೇ ಇಲ್ಲ.
ಇದನ್ನೂ ಓದಿ : ಭಾರತದ ವಿರುದ್ಧ ಕ್ರಿಕೆಟ್ ಶಿಶುಗಳಿಗೆ ಐತಿಹಾಸಿಕ ಜಯ – ಐರ್ಲೆಂಡ್ ವಿರುದ್ಧ ಮಂಡಿಯೂರಿದ ಟೀಮ್ ಇಂಡಿಯಾ
ಸೂರ್ಯಕುಮಾರ್ ಯಾದವ್ ಬಳಿಕ ಕ್ಯಾಪ್ಟನ್ಸಿ ವಹಿಸಿಕೊಂಡ ಶ್ರೇಯಸ್ ಅಯ್ಯರ್ ಫಸ್ಟ್ ಮ್ಯಾಚಲ್ಲೇ ಸೋಲಿನ ಮೂಲಕ ಹೊಸ ಜರ್ನಿ ಆರಂಭಿಸಿದ್ದಾರೆ. ವಿಶ್ವ ಚಾಂಪಿಯನ್ ಟೀಂ ಇಂಡಿಯಾ, ಕ್ರಿಕೆಟ್ ಶಿಶು ಐರ್ಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿದೆ. ಟಾಸ್ ಗೆದ್ದ ಭಾರತ ಫಸ್ಟ್ ಬೌಲಿಂಗ್ ಚೂಸ್ ಮಾಡಿಕೊಳ್ತು. ಬ್ಯಾಟಿಂಗ್ಗೆ ಬಂದ ಐರ್ಲೆಂಡ್ ಆರಂಭದಲ್ಲೇ ಮೂರು ವಿಕೆಟ್ ಕಳ್ಕೊಂಡಿತ್ತು. ಆದ್ರೆ ಆ ನಂತ್ರದಲ್ಲಿ ಉತ್ತಮ ಪ್ರದರ್ಶನ ನೀಡಿದೆ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 182 ರನ್ ಪೇರಿಸಿತು. ಈ ಟಾರ್ಗೆಟ್ ಬೆನ್ನಟ್ಟಿದ ಭಾರತದ ಪರ ಅಭಿಷೇಕ್ ಶರ್ಮಾ, ಶಿವಂ ದುಬೆ ಹೊರತುಪಡಿಸಿ ಯಾವುದೇ ಬ್ಯಾಟರ್ಸ್ ಕಡೆಯಿಂದಲೂ ಉತ್ತಮ ಪ್ರದರ್ಶನ ಬರ್ಲಿಲ್ಲ. ಹೀಗಾಗಿ 148ಕ್ಕೆ ಆಲೌಟ್ ಆಗೋ ಮೂಲಕ 34 ರನ್ಗಳ ಅಂತರದಲ್ಲಿ ಸೋಲೊಪ್ಪಿಕೊಂಡ್ರು.
ಭಾರತದ ಸೋಲಿಗೆ ಕಾರಣಗಳು!
ಟಾಸ್ ಗೆದ್ದ ಭಾರತ ಬೌಲಿಂಗ್ ನಲ್ಲಿ ದಾರಾಳವಾಗಿ ರನ್ಸ್
ಪ್ರಸಿದ್ಧ ಕೃಷ್ಣ ಅಂತೂ 4 ಓವರ್ ನಲ್ಲೇ 57 ರನ್ಸ್
ವಾಷಿಂಗ್ಟನ್ ಸುಂದರ್ ಒಂದು ಓವರ್ ನಲ್ಲಿ 19 ರನ್ಸ್
ಬ್ಯಾಟಿಂಗ್ ನಲ್ಲಿ ಅಭಿಷೇಕ್ ಮಾತ್ರನೇ ಬೆಸ್ಟ್ ಇನ್ನಿಂಗ್ಸ್
ಸಂಜು, ಇಶಾನ್, ಶ್ರೇಯಸ್ ಸಿಂಗಲ್ ಡಿಜಿಟ್ ಗೆ ಔಟ್
ಮಿಡಲ್ ಆರ್ಡರ್ ಬ್ಯಾಟರ್ ಗಳಿಂದ ಬಾರದ ರನ್ಸ್
ಮೂರು ಕ್ಯಾಚ್ ಗಳನ್ನು ಬಿಟ್ಟು ಫೀಲ್ಡಿಂಗ್ ನಲ್ಲೂ ಕಳಪೆ
ಬ್ಯಾಟಿಂಗ್, ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಐರ್ಲೆಂಡ್
ಹೀಗೆ ಐರ್ಲೆಂಡ್ ವಿರುದ್ಧದ ಮ್ಯಾಚಲ್ಲಿ ಭಾರತ ಎಲ್ಲಿಯೂ ಫೈಟ್ ಕೊಡ್ಲೇಇಲ್ಲ. ಕ್ರಿಕೆಟ್ ಶಿಶುಗಳು ಅವ್ರು, ಗಮಗೆಲ್ಲಿ ಫೈಟ್ ಕೊಡ್ತಾರೆ ಅನ್ನೋ ಓವರ್ ಕಾನ್ಫಿಡೆನ್ಸ್ನಲ್ಲೇ ಅಖಾಡಕ್ಕೆ ಇಳಿದಿದ್ರು. ಆದ್ರೆ ಭಾರತದ ಚಾಂಪಿಯನ್ಸ್ ಅನ್ನೋ ಅಹಂಕಾರಕ್ಕೆ ಪೆಟ್ಟು ಕೊಟ್ಟಿದ್ದಾರೆ. ಭಾರತ ಈಗ ಅಲರ್ಟ್ ಆಗಲೇಬೇಕಿದೆ. ಯಾಕಂದ್ರೆ ಜುಲೈ 1ರಿಂದ ಇದೇ ತಂಡ ಬಲಿಷ್ಠ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟಿ-20ಐ ಸರಣಿ ಆಡ್ಬೇಕಿದೆ.

ನೋಡಿರಿ

