ಶನಿವಾರ ಏಕರೂಪದ ಶಾಲಾ ಅವಧಿ ಜಾರಿ – ಕರ್ನಾಟಕ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

ಶನಿವಾರ ಏಕರೂಪದ ಶಾಲಾ ಅವಧಿ ಜಾರಿ – ಕರ್ನಾಟಕ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

ಶನಿವಾರ ಶಾಲೆಯ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಜಾರಿಗೊಳಿಸಿದೆ. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ ಶನಿವಾರದ ಅವಧಿಯನ್ನು ಏಕರೂಪಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ. ಇನ್ಮುಂದೆ ಶನಿವಾರದ ತರಗತಿಗಳು ಬೆಳಗ್ಗೆ 8:30 ರಿಂದ ಮಧ್ಯಾಹ್ನ 12:30 ರವರೆಗೆ ಮಾತ್ರ ನಡೆಯಲಿವೆ.

ಇದನ್ನೂ ಓದಿ:ತೋತಾಪುರಿ ಮಾವಿಗೆ ಕೇಂದ್ರದ ಸಹಾಯಧನ – ಕರ್ನಾಟಕ ಮಾವು ಬೆಳೆಗಾರರ ಸಂಕಷ್ಟ ನೀಗುತ್ತಾ?

ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಶನಿವಾರದ ಶಾಲಾ ಅವಧಿಯನ್ನು ಏಕರೂಪಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ. ಇನ್ಮುಂದೆ ರಾಜ್ಯಾದ್ಯಂತ ಎಲ್ಲಾ ಶಾಲೆಗಳಿಗೂ ಅನ್ವಯವಾಗುವಂತೆ ಶನಿವಾರ ಬೆಳಗ್ಗೆ 8:30 ರಿಂದ ಮಧ್ಯಾಹ್ನ 12:30 ರವರೆಗೆ ಒಟ್ಟು 4 ಗಂಟೆಗಳ ಕಾಲ ಮಾತ್ರ ತರಗತಿಗಳನ್ನು ನಡೆಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದುವರೆಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಶನಿವಾರದ ಶಾಲಾ ಅವಧಿ ಪ್ರದೇಶವಾರು ವಿಭಿನ್ನವಾಗಿತ್ತು. ಕೆಲವು ಕಡೆಗಳಲ್ಲಿ ಬೆಳಗ್ಗೆ 7:30 ರಿಂದ 11:30ರವರೆಗೆ ತರಗತಿಗಳು ನಡೆದರೆ, ಇನ್ನು ಕೆಲವು ಶಾಲೆಗಳಲ್ಲಿ ಬೆಳಗ್ಗೆ 8:00 ರಿಂದ ಮಧ್ಯಾಹ್ನ 12:00 ಗಂಟೆಯವರೆಗೆ ಸಮಯ ನಿಗದಿಪಡಿಸಲಾಗಿತ್ತು. ಇದೀಗ ಶನಿವಾರದ ಶಾಲಾ ಅವಧಿ ಏಕರೂಪವಾಗಲಿದೆ.

ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಕಡ್ಡಾಯವಾಗಿ ಹೊಸ ಸಮಯವನ್ನೇ ಪಾಲಿಸಬೇಕು ಎಂದು ಆದೇಶಿಸಿದೆ. ರಾಜ್ಯ ಸರ್ಕಾರವು ಈಗಾಗಲೇ ಕಡ್ಡಾಯಗೊಳಿಸಿರುವ ಶಿಕ್ಷಕರ ಆನ್‌ಲೈನ್ ಹಾಜರಾತಿ ವ್ಯವಸ್ಥೆಯನ್ನು ಸಕಾಲದಲ್ಲಿ ಅಪ್‌ಡೇಟ್ ಮಾಡಲು ಈ ಏಕರೂಪದ ಸಮಯ ಸಹಕಾರಿಯಾಗಲಿದೆ. ಇಡೀ ರಾಜ್ಯದಲ್ಲಿ ಒಂದೇ ಸಮಯದಲ್ಲಿ ಶಾಲೆ ಆರಂಭವಾಗುವುದರಿಂದ ಶಿಕ್ಷಕರು ಯಾವುದೇ ಗೊಂದಲವಿಲ್ಲದೆ ನಿಖರವಾಗಿ ಆನ್‌ಲೈನ್ ಹಾಜರಾತಿ ದಾಖಲಿಸಲು ಸಾಧ್ಯವಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.ರಾಜ್ಯದ ಪ್ರತಿಯೊಂದು ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ ಮಂಡಳಿಗಳು ಈ ಹೊಸ ಆದೇಶವನ್ನು ತಕ್ಷಣದಿಂದಲೇ ಜಾರಿಗೆ ತರಬೇಕು ಮತ್ತು ಶನಿವಾರ ಬೆಳಗ್ಗೆ 8:30 ರಿಂದ 12:30 ರ ಸಮಯವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಇಲಾಖೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

Sulekha

Leave a Reply

Your email address will not be published. Required fields are marked *