ಭಾರತದ ವಿರುದ್ಧ ಕ್ರಿಕೆಟ್ ಶಿಶುಗಳಿಗೆ ಐತಿಹಾಸಿಕ ಜಯ – ಐರ್ಲೆಂಡ್ ವಿರುದ್ಧ ಮಂಡಿಯೂರಿದ ಟೀಮ್ ಇಂಡಿಯಾ

ಭಾರತದ ವಿರುದ್ಧ ಕ್ರಿಕೆಟ್ ಶಿಶುಗಳಿಗೆ ಐತಿಹಾಸಿಕ ಜಯ – ಐರ್ಲೆಂಡ್ ವಿರುದ್ಧ ಮಂಡಿಯೂರಿದ ಟೀಮ್ ಇಂಡಿಯಾ

ಭಾರತ ಮತ್ತು ಐರ್ಲೆಂಡ್ ಕ್ರಿಕೆಟ್ ಪಂದ್ಯದ ಫಲಿತಾಂಶ ಕೋಟಿ ಕೋಟಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ನಿಜಕ್ಕೂ ಆಘಾತ ನೀಡಿದೆ. ಯಾವ ತಂಡವೂ ದುರ್ಬಲ ಅಲ್ಲ ಅನ್ನೋದನ್ನು ಈ ಪಂದ್ಯ ತೋರಿಸಿಕೊಟ್ಟಿದೆ. ಕ್ರಿಕೆಟ್ ಶಿಶು ಐರ್ಲೆಂಡ್, ವಿಶ್ವ ಕ್ರಿಕೆಟ್‌ನ ಬಲಿಷ್ಠ ತಂಡ ಭಾರತವನ್ನು ಸೋಲಿಸಿ ಐತಿಹಾಸಿಕ ಜಯ ದಾಖಲಿಸಿದೆ.

ಇದನ್ನೂ ಓದಿ:ಟೀಂ ಇಂಡಿಯಾಗೆ DO Or DIE –  AUS ವಿರುದ್ಧ ಗೆದ್ರಷ್ಟೇ ಸೆಮೀಸ್ ಟಿಕೆಟ್

ಭಾರತ ಹಾಗೂ ಐರ್ಲೆಂಡ್ ನಡುವಿನ ಪಂದ್ಯದಲ್ಲಿ ಕ್ರಿಕೆಟ್ ಅಭಿಮಾನಿಗಳು ಅಂದುಕೊಂಡಿದ್ದೇ ಒಂದು. ಆಗಿದ್ದೇ ಇನ್ನೊಂದು. ಟೀಂ ಇಂಡಿಯಾದ ಸೊಕ್ಕು ಮುರಿದ  ಕ್ರಿಕೆಟ್ ಶಿಶು ಎಂದೇ ಕರೆಸಿಕೊಳ್ಳುವ ಐರ್ಲೆಂಡ್ ಗೆದ್ದು ಬೀಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್, ಅಗ್ರ ಮೂವರು ಬ್ಯಾಟ್ಸ್‌ಮನ್​ಗಳು ಬೇಗನೆ ಕಳೆದುಕೊಂಡಿತು. ನಂತರ ಐರ್ಲೆಂಡ್ ತಂಡದ ನಾಯಕನಾಗಿ ಮೊಟ್ಟ ಮೊದಲ ಪಂದ್ಯದಲ್ಲೇ ಮಿಂಚಿದ ಲೋರ್ಕನ್ ಟಕರ್ ಕೇವಲ 35 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಆರನೇ ಕ್ರಮಾಂಕದಲ್ಲಿ ಬಂದ ಗ್ಯಾರೆತ್ ಡೆಲಾನಿ ಕೂಡ 49 ರನ್​ ಹೊಡೆದರು. ತಂಡ 183 ರನ್​ಗಳಿಸುವಲ್ಲಿ ಯಶಸ್ವಿಯಾಯಿತು.

ಭಾರತದ ಫಿಲ್ಡರ್​ಗಳು 3 ಕ್ಯಾಚ್​ಗಳನ್ನು ಕೈಚೆಲ್ಲಿದ್ದರು. ಪ್ರಸಿದ್ಧ್ ಕೃಷ್ಣ 4 ಓವರ್​ಗಳಲ್ಲಿ ನೀಡಿದ್ದು 57 ರನ್. ಈ ಮೂಲಕ ದುಬಾರಿ ಬೌಲರ್ ಎನಿಸಿಕೊಂಡರು. ಕಳಪೆ ಫಿಲ್ಡಿಂಗ್​ನಿಂದಾಗಿ ವಿಕೆಟ್ ಪಡೆಯುವ ಅವಕಾಶ ಸುಮಾರು ಬಾರಿ ಕೈಚೆಲ್ಲಿಕೊಂಡರು. 184 ರನ್‌ಗಳ ಗುರಿ ಬೆನ್ನತ್ತಿದ್ದ ಐರ್ಲೆಂಡ್ ಬೌಲರ್​ಗಳ ಕರಾರುವಕ್ಕಾದ ದಾಳಿಗೆ ಟೀಮ್ ಇಂಡಿಯಾದ ಬಲಿಷ್ಠ ಬ್ಯಾಟರ್‌ಗಳು ಒಂದಂಕಿಗೆ ಸುಸ್ತಾದರು. ಅದರಲ್ಲೂ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಭಾರತೀಯ ಮೂಲದ ಜೈ ಮುಂಧ್ರಾ ಹಾಗೂ ಮ್ಯಾಥ್ಯೂ ಹಂಫ್ರೀಸ್ ಭಾರತದ ಬಲಿಷ್ಠ ಬ್ಯಾಟಿಂಗ್‌ ವಿಭಾಗವನ್ನು ಅಕ್ಷರಶಃ ಕಾಡಿದರು. ಜೈ ಮುಂಧ್ರಾ ಎರಡನೇ ಓವರ್​ನ ಮೊದಲ ಎಸೆತದಲ್ಲೇ ಸಂಜು ಸ್ಯಾಮ್ಸನ್ ವಿಕೆಟ್ ಉರುಳಿಸುವ ಮೂಲಕ ಮೊದಲ ಆಘಾತ ನೀಡಿದರು. ಆ ಬಳಿಕ ಬಂದ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್​ಗೆ ಮ್ಯಾಥ್ಯೂ ಹಂಫ್ರೀಸ್ ಪೆವಿಲಿಯನ್ ದಾರಿ ತೋರಿಸಿದರು. ಎಂದಿನಂತೆ ನಿಧಾನಗತಿಯ ಬ್ಯಾಟಿಂಗ್‌ ಮೂಲಕ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದ ತಿಲಕ್ ವರ್ಮಾ 19 ರನ್​ಗಳಿಗೆ ಸುಸ್ತಾದರೆ, ಸುಂದರ್ ಆಟ 9 ರನ್​ಗಳನ್ನು ಮೀರಿ ಹೋಗಲಿಲ್ಲ. ಶಿವಂ ದುಬೆ 25 ರನ್ ಬಾರಿಸಿದರಾದರೂ ನಿರ್ಣಾಯಕ ಹಂತದಲ್ಲಿ ವಿಕೆಟ್ ಒಪ್ಪಿಸಿದರು. ದುಬೆ ವಿಕೆಟ್ ಕಬಳಿಸಿದ ಜೈ ಮುಂಧ್ರಾ ಐರ್ಲೆಂಡ್ ಪರ ಬಿರುಗಾಳಿಯೆಬ್ಬಿಸಿದರು.

ಕೊನೆಗೂ ಟೀಮ್ ಇಂಡಿಯಾ ಆಲೌಟ್ ಆಗುವ ಮೂಲಕ ಕ್ರಿಕೆಟ್ ಶಿಶುಗಳ ಮುಂದೆ ಸೋಲೊಪ್ಪಿಕೊಂಡರು. ಈ ಸೋಲಿನಿಂದ ಟೀಮ್ ಇಂಡಿಯಾ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಂತೂ ಸತ್ಯ.

Sulekha