ಪ್ಲೇಯಿಂಗ್ 11ನಿಂದ ವೈಭವ್ OUT – ಐರ್ಲೆಂಡ್ ವಿರುದ್ಧ ಅಭಿ-ಸಂಜು ಓಪನರ್ಸ್
ಸೂರ್ಯವಂಶಿಗೆ SUNDAY ಚಾನ್ಸ್ ಸಿಗುತ್ತಾ?

ಜಸ್ಟ್ 15 ವರ್ಷ ಅನ್ನೋ ವಂಡರ್ ಒಂದ್ಕಡೆ.. ವರ್ಲ್ಡ್ ಕ್ಲಾಸ್ ಬೌಲರ್ಗಳನ್ನೂ ಬಿಟ್ಟಿಲ್ಲ ಅನ್ನೋ ಕ್ಯೂರಿಯಸ್ ಇನ್ನೊಂದ್ಕಡೆ. ಕಾಲಿಟ್ಟಲ್ಲೆಲ್ಲಾ ಚರಿತ್ರೆಯನ್ನೆ ಬರೆದು ಕ್ರಿಕೆಟ್ ಲೋಕದಲ್ಲಿ ತನ್ನದೇ ಹೆಜ್ಜೆಗುರುತು ಮೂಡಿಸಿ ಹೊರಟಿರೋ ಬಾಸ್ ಬೇಬಿ ವೈಭವ್ ಸೂರ್ಯವಂಶಿಯವ್ರ ಡೆಬ್ಯೂಗಾಗಿ ಇಡೀ ಜಗತ್ತೇ ಕಣ್ಣರಳಿ ನೋಡ್ತಿತ್ತು. ಬಟ್ ಐರ್ಲೆಂಡ್ ವಿರುದ್ಧದ ಫಸ್ಟ್ ಮ್ಯಾಚ್ನಲ್ಲಿ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಕ್ಕಿಲ್ಲ.
ಇದನ್ನೂ ಓದಿ : ಟೀಂ ಇಂಡಿಯಾಗೆ DO Or DIE – AUS ವಿರುದ್ಧ ಗೆದ್ರಷ್ಟೇ ಸೆಮೀಸ್ ಟಿಕೆಟ್
ಭಾರತ ಮತ್ತು ಐರ್ಲೆಂಡ್ ನಡುವಿನ ಟಿ-20ಐ ಸರಣಿ ಸ್ಟಾರ್ಟ್ ಆಗಿದೆ. ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ಮೊದಲ ಟಿ-20ಐ ಪಂದ್ಯ ನಡೆಯುತ್ತಿದೆ. ಈ ಸರಣಿ ಭಾರತಕ್ಕೆ ಹೊಸ ಕ್ಯಾಪ್ಟನ್ ಅನ್ನೋದ್ರ ಜೊತೆಗೆ ಯುನಿವರ್ಸಲ್ ಬಾಸ್ ಬೇಬಿ ಅಂತಾನೇ ಸದ್ದು ಮಾಡ್ತಿರೋ ವೈಭವ್ ಸೂರ್ಯವಂಶಿ ಅವ್ರ ಡೆಬ್ಯೂ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿತ್ತು. ಅದೂ ಅಲ್ದೇ ಐರ್ಲೆಂಡ್ನಲ್ಲಿ ಈ ಪಂದ್ಯದ ಟಿಕೆಟ್ಸ್ಗಾಗಿ ಡಿಮ್ಯಾಂಡ್ ಕೂಡ ಜಾಸ್ತಿಯಾಗಿ ವೀಕ್ಷಕರ ಸೀಟ್ಗಳ ಸಂಖ್ಯೆಯನ್ನೂ ಹೆಚ್ಚಳ ಮಾಡಲಾಗಿತ್ತು. ಶುಕ್ರವಾರ ಸಂಜೆ 6ಕ್ಕೆ ಸ್ಟಾರ್ಟ್ ಆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತದ ನಾಯಕ ಶ್ರೇಯಸ್ ಅಯ್ಯರ್ ಫಸ್ಟ್ ಬೌಲಿಂಗ್ ಮಾಡ್ತೀವಿ ಅಂತಾ ಚೂಸ್ ಮಾಡಿಕೊಂಡ್ರು. ಬಟ್ ಈ ಮ್ಯಾಚಲ್ಲಿ ಸೂರ್ಯವಂಶಿಗೆ ಆಡುವ 11ರ ಬಳಗದಲ್ಲಿ ಅವಕಾಶ ಕೊಟ್ಟಿಲ್ಲ. ಮೊದಲ ಪಂದ್ಯದಲ್ಲಿ ಌಸ್ ಯೂಶುಯಲ್ ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅಭಿಷೇಕ್ ಮತ್ತು ಸಂಜು ಸ್ಯಾಮ್ಸನ್ ಇನ್ನಿಂಗ್ಸ್ ಓಪನ್ ಮಾಡಿದ್ರೆ ನಂಬರ್ 3ನಲ್ಲಿ ಇಶಾನ್ ಕಿಶನ್, ನಂಬರ್ 4ನಲ್ಲಿ ಶ್ರೇಯಸ್ ಅಯ್ಯರ್, ಫೈವ್ನಲ್ಲಿ ತಿಲಕ್ ವರ್ಮಾ ಆಡ್ತಾರೆ. ಆಲ್ ರೌಂಡರ್ ಕೋಟಾದಲ್ಲಿ ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಸೆಲೆಕ್ಟ್ ಆಗಿದ್ದಾರೆ. ಹರ್ಷಿತ್ ರಾಣಾ, ಅರ್ಶದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ ಬೌಲಿಂಗ್ ಸ್ವ್ಯಾಡ್ನಲ್ಲಿದ್ದಾರೆ. ಇಂಟ್ರೆಸ್ಟಿಂಗ್ ಈ ಮ್ಯಾಚಲ್ಲಿ ಮೂವರು ಯಂಗ್ ಸ್ಟರ್ಸ್ಗೆ ಡೆಬ್ಯೂ ಅವಕಾಶ ಸಿಕ್ಕಿಲ್ಲ. ಪ್ರಿನ್ಸ್ ಯಾದವ್, ಸೂರ್ಯಾನ್ಶ್ ಶೆಡ್ಗೆ ಹಾಗೇ ಸೂರ್ಯವಂಶಿಗೆ ಆಡಲು ಅವಕಾಶ ನೀಡಿಲ್ಲ. ಬಹುಶಃ ಭಾನುವಾರದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿಯನ್ನ ಆಡಿಸೋ ಚಾನ್ಸ್ ಇದೆ.
ಸೂರ್ಯವಂಶಿ ಹೆಜ್ಜೆಗುರುತು!
- ಭಾರತ ಪರ ಅಂತರರಾಷ್ಟ್ರೀಯ ಪಂದ್ಯ ಆಡಿದ ಅತ್ಯಂತ ಕಿರಿಯ ಆಟಗಾರ
- ಪುರುಷರ ಟಿ20ಐನಲ್ಲಿ ಐಸಿಸಿ ಪೂರ್ಣ ಸದಸ್ಯ ರಾಷ್ಟ್ರದ ಪರ ಆಡಿದ ಅತ್ಯಂತ ಕಿರಿಯ
- ಐರ್ಲೆಂಡ್ನಲ್ಲಿ ಪುರುಷರ ಅಂತರರಾಷ್ಟ್ರೀಯ ಪಂದ್ಯ ಆಡಿದ ಅತ್ಯಂತ ಕಿರಿಯ ಕ್ರಿಕೆಟಿಗ
ಹೀಗೆ ಸೂರ್ಯವಂಶಿ ಐರ್ಲೆಂಡ್ ವಿರುದ್ಧದ 2ನೇ ಟಿ-20ಐ ಪಂದ್ಯದಲ್ಲಿ ಆಡಿದ್ರೆ ಇನ್ಮುಂದಿನ ಪ್ರತೀ ಪಂದ್ಯವೂ ಹೈವೋಲ್ಟೇಜ್ ಮ್ಯಾಚ್ ಆಗಲಿದೆ. ಅಭಿಷೇಕ್ ಶರ್ಮಾ ಸೆಟ್ ಮಾಡಿದ್ದ ಪವರ್ ಹಿಟ್ಟರ್ ಅನ್ನೋ ಟ್ರೇಡ್ ಮಾರ್ಕ್ನ ಸೂರ್ಯವಂಶಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯೋದು ಪಕ್ಕಾ. ಬಹುಶಃ ಫಸ್ಟ್ ಮ್ಯಾಚಲ್ಲಿ ಆಡಿಸದೇ ಇರೋದು ಕೊನೇ ಮೂಮೆಂಟ್ ತೀರ್ಮಾನ ಇರ್ಬೋದು. ಯಾಕಂದ್ರೆ ಐರ್ಲೆಂಡ್ ವಿರುದ್ಧದ ಟಿ-20ಐ ಸರಣಿ ಆರಂಭಕ್ಕೂ ಮುನ್ನ ವೈಭವ್ ಸೂರ್ಯವಂಶಿ ಅವರ ಪೋಸ್ಟ್ವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವೈಭವ್ ಸೂರ್ಯವಂಶಿಯವ್ರೇ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಭಾರತದ ಪರ ಪಾದಾರ್ಪಣೆ ಮಾಡುವ ಬಗ್ಗೆ ಕೇವಲ ಎರಡು ಮಾತುಗಳಲ್ಲಿ ಸುಳಿವು ನೀಡಿದ್ರು. ಸೂರ್ಯವಂಶಿ ಬ್ಲೂ ಜೆರ್ಸಿಯಲ್ಲಿರುವ ಫೋಟೋ ಜೊತೆಗೆ “ನ್ಯೂ ಚಾಪ್ಟರ್” ಎಂದು ಬರೆದಿರುವ ಪೋಸ್ಟ್ ಹಂಚಿಕೊಂಡಿದ್ರು. ಬಟ್ ಬ್ಯಾಡ್ಲಕ್ ಪ್ಲೇಯಿಂಗ್ 11ಗೆ ಸೆಲೆಕ್ಟ್ ಆಗಿಲ್ಲ.

ನೋಡಿರಿ

