ಟೀಂ ಇಂಡಿಯಾಗೆ DO Or DIE –  AUS ವಿರುದ್ಧ ಗೆದ್ರಷ್ಟೇ ಸೆಮೀಸ್ ಟಿಕೆಟ್
ಕ್ಯಾಚ್ ಬಿಟ್ಟು ವಿಶ್ವಕಪ್ ನೂ ಕಳ್ಕೊಳ್ತಾರಾ?

ಟೀಂ ಇಂಡಿಯಾಗೆ DO Or DIE –  AUS ವಿರುದ್ಧ ಗೆದ್ರಷ್ಟೇ ಸೆಮೀಸ್ ಟಿಕೆಟ್ಕ್ಯಾಚ್ ಬಿಟ್ಟು ವಿಶ್ವಕಪ್ ನೂ ಕಳ್ಕೊಳ್ತಾರಾ?

ಮಹಿಳಾ ಟಿ-20 ವಿಶ್ವಕಪ್​​ ಟೂರ್ನಿ ಈಗ ರಣರೋಚಕ ಘಟ್ಟದಲ್ಲಿದೆ. ಎ ಗ್ರೂಪ್​ನಲ್ಲಿ ಆಸ್ಟ್ರೇಲಿಯಾ ಮಹಿಳಾ ಪಡೆ ಒಂದೂ ಪಂದ್ಯ ಸೋಲದೆ ಆಲ್ರೆಡಿ ಸೆಮೀಸ್ ಟಿಕೆಟ್ ಗಿಟ್ಟಿಸಿಕೊಂಡಿದೆ. ಇತ್ತ ಬಿ ಗ್ರೂಪ್​ನಲ್ಲಿ ಇಂಗ್ಲೆಂಡ್ ಟೀಂ ಕೂಡ  ನಾಲ್ಕಕ್ಕೆ ನಾಲ್ಕೂ ಮ್ಯಾಚ್ ಗೆದ್ದಿದೆ. ಆದ್ರೆ ಗ್ರೂಪ್ ಎನಲ್ಲಿರೋ ಭಾರತ ನಾಲ್ಕರಲ್ಲಿ ಮೂರು ಪಂದ್ಯಗಳನ್ನ ಗೆದ್ದಿದೆಯಾದ್ರೂ ಸೆಮಿಫೈನಲ್ ಟಿಕೆಟ್ ಇನ್ನೂ ಕನ್ಫರ್ಮ್ ಆಗಿಲ್ಲ. ಅತ್ತ ಸೌತ್ ಆಫ್ರಿಕಾ ಕೂಡ ಟಫ್ ಫೈಟ್ ಕೊಡ್ತಿದೆ. ವಿಷ್ಯ ಅಂದ್ರೆ ಭಾರತ ಮಹಿಳಾ ತಂಡದ ಸೋಲು ಗೆಲುವಿಗಿಂದ ಜಾಸ್ತಿ ಅವ್ರ ನೆಗ್ಲಿಜೆನ್ಸ್ ಬಗ್ಗೆ ಚರ್ಚೆಯಾಗ್ತಿದೆ.

ಇದನ್ನೂ ಓದಿ : DSP ಹುದ್ದೆಗೇರಿದ ಬೆನ್ನಲ್ಲೇ ಆಕಾಶ್‌ದೀಪ್ ಮದುವೆ – ಹಸೆಮಣೆ ಏರಿದ ಟೀಮ್ ಇಂಡಿಯಾ ಕ್ರಿಕೆಟರ್

ಮ್ಯಾಂಚೆಸ್ಟರ್‌ನಲ್ಲಿ ಗುರುವಾರ ನಡೆದ ಭಾರತ ಹಾಗೇ ಬಾಂಗ್ಲಾದೇಶ ಮಹಿಳಾ ತಂಡಗಳು ನಡುವಿನ ಮ್ಯಾಚಲ್ಲಿ ಭಾರತ ಗೆದ್ದಿದೆ. ಈ ಗೆಲುವಿನ ಮೂಲಕ ಸೆಮಿಫೈನಲ್ ರೇಸ್​ನಲ್ಲಿ ಉಳ್ಕೊಂಡಿದೆ. . ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ ತಂಡ 20 ಓವರ್​ಗಳಲ್ಲಿ 8 ವಿಕೆಟ್​ಗಳ ನಷ್ಟಕ್ಕೆ 136 ರನ್ ಕಲೆಹಾಕಿತು. ಸೋ ಈ ಟಾರ್ಗೆಟ್ ಬೆನ್ನಟ್ಟಿದ ಭಾರತ 17ನೇ ಓವರ್​ನಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ ವಿನ್ ಕೂಡ ಆಯ್ತು. ಈ ಸೋಲಿನೊಂದಿಗೆ ಬಾಂಗ್ಲಾದೇಶದ ನೆಕ್ಸ್​ಟ್ ಜರ್ನಿ ಆಲ್ಮೋಸ್ಟ್ ಮುಗಿದಿದೆ. ಭಾರತಕ್ಕೆ ಚಾನ್ಸ್ ಇದೆಯಾದ್ರೂ ಅಷ್ಟು ಈಸಿ ಕೂಡ ಇಲ್ಲ. ಯಾಕಂದ್ರೆ ಭಾರತೀಯ ಆಟಗಾರ್ತಿಯರ ನಿರ್ಲಕ್ಷ್ಯ ಬಟಾಬಯಲಾಗಿದೆ.

ಬಾಂಗ್ಲಾ ವಿರುದ್ಧ ಗೆದ್ರೂ ಕ್ಯಾಚ್ ಬಿಟ್ಟು ಕೆಟ್ಟ ದಾಖಲೆ ಬರೆದ ಭಾರತ!

ಬಾಂಗ್ಲಾದೇಶ ವಿರುದ್ಧದ ಮ್ಯಾಚ್​ನಲ್ಲಿ ನಿನ್ನೆ ಭಾರತ ಗೆದ್ರೂ ಕಳಪೆ ಫೀಲ್ಡಿಂಗ್​ನಲ್ಲಿ ವರ್ಸ್ಟ್​​ ರೆಕಾರ್ಡ್ ಮಾಡಿದೆ.   ನಿರ್ಣಾಯಕ ಪಂದ್ಯದಲ್ಲೂ ಕ್ಯಾಚ್​ಗಳನ್ನ ಕೈಚೆಲ್ಲಿದ್ರು,. ಅದ್​ರಲ್ಲೂ ಮಹಿಳಾ ಟಿ 20 ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಪಂದ್ಯದ ಮೊದಲ ಐದು ಓವರ್‌ಗಳಲ್ಲಿ ನಾಲ್ಕು ಕ್ಯಾಚ್‌ಗಳನ್ನು ಕೈಬಿಟ್ಟ ಮೊದಲ ತಂಡವಾಗಿದೆ. ಪವರ್‌ಪ್ಲೇನಲ್ಲಿ ತಂಡವೊಂದು ನಾಲ್ಕು ಕ್ಯಾಚ್‌ಗಳನ್ನು ಕೈಬಿಟ್ಟಿದ್ದು ಇದು ಎರಡನೇ ಬಾರಿ, ಆದರೆ ಭಾರತ ಕೇವಲ 17 ಎಸೆತಗಳಲ್ಲಿ 4 ಕ್ಯಾಚ್ ಬಿಟ್ಟಿದೆ. ಅದ್ರಲ್ಲೂ ಈಸಿ ಕ್ಯಾಚ್​ಗಳನ್ನ ಕೈಚೆಲ್ಲಿದ್ದು ಮಾಜಿ ಕ್ರಿಕೆಟಿಗರ ಆಕ್ರೋಶಕ್ಕೂ ಕಾರಣವಾಗಿತ್ತು. ಟಿ-20 ವಿಶ್ವಕಪ್​ನಲ್ಲೂ ಇಷ್ಟೊಂದು ಕೇರ್​ಲೆಸ್ ಆಗಿದ್ರೆ ಮ್ಯಾಚ್​ನೂ ಬಿಟ್ಟುಕೊಡ್ಬೇಕಾಗುತ್ತೆ ಅಂತಾ ಆಕ್ರೋಶ ಹೊರ ಹಾಕಿದ್ರು. ಅದೂ ಅಲ್ದೇ ಭಾರತ ಇದೇ ಆವೃತ್ತಿಯಲ್ಲಿ ಕಳೆದ ನಾಲ್ಕು ಪಂದ್ಯಗಳಲ್ಲೇ ಟೋಟಲ್ಲಾಗಗಿ 10 ಕ್ಯಾಚ್​ಗಳನ್ನ ಕೈಚೆಲ್ಲಿದ್ದಾರೆ. ಈ ಅಂಕಿ ಅಂಶಗಳೇ ಭಾರತದ ಫೀಲ್ಡಿಂಗ್ ಎಷ್ಟು ವೀಕ್ ಆಗಿದೆ ಅನ್ನೋದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಅದೂ ಅಲ್ದೇ ಭಾರತಕ್ಕೆ ಈಗ ಅಸಲಿ ಟಾಸ್ಕ್ ಶುರುವಾಗಿದೆ.

ಬಲಿಷ್ಠ ಆಸ್ಟ್ರೇಲಿಯಾವನ್ನು ಬಗ್ಗು ಬಡಿದ್ರಷ್ಟೇ ಭಾರತಕ್ಕೆ ಸೆಮೀಸ್!

ಭಾರತ ಈಗ ಟಿ-20 ವಿಶ್ವಕಪ್​ನಲ್ಲಿ ನಾಕೌಟ್ ರೇಸ್​ಗೆ ಸೆಲೆಕ್ಟ್ ಆಗ್ಬೇಕು ಅಂದ್ರೆ ಕೊನೇ ಪಂದ್ಯ ಆಸ್ಟ್ರೇಲಿಯಾ ವಿರುದ್ಧ ಶತಾಯ ಗತಾಯ ಗೆಲ್ಲಲೇಬೇಕು. ಆದ್ರೆ ಆಸಿಸ್ ಪಡೆಯನ್ನ ಸೋಲಿಸೋದು ಅಷ್ಟು ಸುಲಭ ಇಲ್ಲ. ಗ್ರೂಪ್ ಸ್ಟೇಜ್​ನಲ್ಲಿ ನಾಲ್ಕಕ್ಕೆ ನಾಲ್ಕೂ ಮ್ಯಾಚ್​ ಗೆದ್ದು ಟೇಬಲ್ ಟಾಪರ್ ಆಗಿದ್ದಾರೆ. ಸೆಮೀಸ್​ಗೂ ಕಾಲಿಟ್ಟಾಗಿದೆ. ಹೀಗಾಗಿ ಹರ್ಮನ್‌ಪ್ರೀತ್ ಪಡೆ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಲೀಗ್ ಹಂತದ ಪಂದ್ಯದಲ್ಲಿ ಪ್ರೆಶರ್ ಗೇಮ್ ಆಡ್ಬೇಕಾಗುತ್ತೆ. ಹಾಗೇನಾದ್ರೂ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಸೋತರೆ, ದಕ್ಷಿಣ ಆಫ್ರಿಕಾ ತಂಡ ತಂಡವೂ ತನ್ನ ಮುಂದಿನ ಮ್ಯಾಚ್​ನಲ್ಲಿ ಸೋಲಲಿ ಅಂತಾ ಬೇಡಿಕೊಳ್ಬೇಕಾಗುತ್ತೆ. ಪ್ರಸ್ತುತ ಆಸೀಸ್ ಪಡೆ 8 ಅಂಕಗಳು ಮತ್ತು +4.724 ರನ್​ ರೇಟ್ ಅನ್ನು ಹೊಂದಿದೆ. ಭಾರತ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರಲ್ಲಿ ಗೆದ್ದರೆ, ಒಂದರಲ್ಲಿ ಸೋಲನ್ನು ಎದುರಿಸಿದೆ. ಇದರೊಂದಿಗೆ ಭಾರತ 6 ಅಂಕ ಮತ್ತು +2.268 ರನ್ ರೇಟ್​​ ಹೊಂದಿದ್ದು, ಗ್ರೂಪ್ ‘ಎ’ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಮೂರರಲ್ಲಿ 2 ಗೆಲುವು, 1 ಸೋಲನ್ನು ಕಂಡಿದ್ದು, 4 ಅಂಕ ಮತ್ತು -0.546 ರನ್ ರೇಟ್ ಹೊಂದಿದೆ. ಸೋ ಸೌತ್ ಆಫ್ರಿಕಾಗೆ ಕಂಪೇರ್ ಮಾಡಿದ್ರೆ ನೆಟ್ ರನ್ ರೇಟ್ ಚೆನ್ನಾಗಿರೋದ್ರಿಂದ ಭಾರತಕ್ಕೆ ಅಡ್ವಾಂಟೇಜಸ್ ಜಾಸ್ತಿ ಇದೆ. ಆದ್ರೆ ತಂಡದಲ್ಲಿನ ಕೆಲ ಸವಾಲುಗಳನ್ನೂ ಗೆಲ್ಲಬೇಕಾಗಿದೆ.

ಭಾರತದ ಜರ್ನಿ ಸುಲಭವಿಲ್ಲ!

6 ಸಲ ಟ್ರೋಫಿ ಗೆದ್ದಿರೋ ಆಸ್ಟ್ರೇಲಿಯಾ ವಿರುದ್ಧ ಲೀಗ್ ಕೊನೇ ಮ್ಯಾಚ್

ಭಾರತ ಗೆದ್ದಿರೋ ಮೂರು ಪಂದ್ಯಗಳು ಕೂಡ ವೀಕ್ ತಂಡಗಳ ಎದುರು

ಲೀಗ್ ಹಂತದಲ್ಲೇ ಸೌತ್ ಆಫ್ರಿಕಾ ವಿರುದ್ಧದ ಪಂದ್ಯ ಸೋತಿರುವ ಭಾರತ

ಬಾಂಗ್ಲಾ ವಿರುದ್ಧ ಗೆದ್ದು ಸೆಮೀಸ್ ಟಿಕೆಟ್ ಆಸೆಯಲ್ಲಿರೋ ಸೌತ್ ಆಫ್ರಿಕಾ

ಭಾರತಕ್ಕೆ ಅವಕಾಶ ಇದ್ರೂ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲೇಬೇಕಾದ ಒತ್ತಡ

ನಾಕೌಟ್ ಸುತ್ತುಗಳಲ್ಲಿ ಕಳಪೆ ಫೀಲ್ಡಿಂಗ್, ರನ್ ಓಡುವಾಗಲೂ ಗೊಂದಲ

Shantha Kumari