ಸೂರ್ಯವಂಶಿ DEBUT ಫೀವರ್ – ಐರ್ಲೆಂಡ್ ಬೇಟೆಗೆ ಯಂಗ್ ಸ್ಟರ್ಸ್ ರೆಡಿ
T-20Iನಲ್ಲಿ ಇನ್ಮುಂದೆ ಹೊಸ ಜಮಾನ!

ಸೂರ್ಯವಂಶಿ DEBUT ಫೀವರ್ – ಐರ್ಲೆಂಡ್ ಬೇಟೆಗೆ ಯಂಗ್ ಸ್ಟರ್ಸ್ ರೆಡಿT-20Iನಲ್ಲಿ ಇನ್ಮುಂದೆ ಹೊಸ ಜಮಾನ!

ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ಭಾರತ ಟಿ-20ಐ ತಂಡದ ಹೊಸ ಯುಗಾರಂಭಕ್ಕೆ ಕೌಂಟ್​ಡೌನ್ ಸ್ಟಾರ್ಟ್ ಆಗಿದೆ. ಇವತ್ತು ಭಾರತ ಮತ್ತು ಐರ್ಲೆಂಡ್ ತಂಡಗಳು ಮುಖಾಮುಖಿ ಆಗಲಿದೆ. ಟಿ-20 ವಿಶ್ವಕಪ್ ಬಳಿಕ ಮೊದಲ ಬಾರಿಗೆ ಭಾರತ ಟಿ-20ಐ ಮ್ಯಾಚ್ ಆಡಲಿದ್ದು ಈ ಪಂದ್ಯ ಹಲವು ಕಾರಣಗಳಿಂದ ವಿಶೇಷವಾಗಲಿದೆ. ಹಾಗೇ ಮೂವರು ಯಂಗ್​ಸ್ಟರ್ಸ್ ಭಾರತದ ಪರ ಡೆಬ್ಯೂ ಮಾಡೋ ಐತಿಹಾಸಿಕ ಗಳಿಗೆಗೂ ಸಾಕ್ಷಿಯಾಗಲಿದೆ.

ಇದನ್ನೂ ಓದಿ : ಸೂರ್ಯವಂಶಿ ವಯಸ್ಸು 15 ಅಲ್ಲ 22 – RO-KO ಅಲ್ಲ KL ಟಫ್ ಬ್ಯಾಟ್ಸಮನ್

ಐರ್ಲೆಂಡ್​ನ ಬೆಲ್‌ಫಾಸ್ಟ್‌ ಮೈದಾನದಲ್ಲಿ ಇವತ್ತು ಭಾರತ ಮತ್ತು ಐರ್ಲೆಂಡ್ ತಂಡಗಳು ಸರಣಿಯ ಮೊದಲ ಟಿ-20ಐ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಈ ಸರಣಿಯಲ್ಲಿ ಮೂವರು ಆಟಗಾರರು ಭಾರತದ ಪರವಾಗಿ T20I ಡೆಬ್ಯೂ ಮಾಡುವ ಸಾಧ್ಯತೆ ಇದೆ.

ಕನಸು ನನಸಾಗುವ ಸುದಿನ!

  1. 15 ವರ್ಷದ ಸೆನ್ಸೇಷನಲ್ ಸ್ಟಾರ್ ವೈಭವ್ ಸೂರ್ಯವಂಶಿ ಡೆಬ್ಯೂ ನಿರೀಕ್ಷೆ
  2. ಫಾಸ್ಟ್ ಬೌಲರ್ ಪ್ರಿನ್ಸ್ ಯಾದವ್ ಬೌಲಿಂಗ್ ಬೇಟೆಗೆ ಅಖಾಡಕ್ಕಿಳಿಯೋ ಚಾನ್ಸ್
  3. 23 ವರ್ಷದ ಆಲ್ ರೌಂಡರ್ ಸೂರ್ಯಾನ್ಶ್ ಶೆಡ್ಗೆಗೆ ಒಲಿಯುತ್ತಾ ಭಾರತದ ಕ್ಯಾಪ್?

ಇನ್ನು ಪಂದ್ಯಕ್ಕೆ ಕೆಲವೇ ಕೆಲ ಗಂಟೆಗಳು ಇರುವಾಗ ಪಂದ್ಯ ಆರಂಭದ ಸಮಯದಲ್ಲೂ ಬದಲಾವಣೆ ಮಾಡಲಾಗಿದೆ. ಮಹಿಳಾ T20 ವಿಶ್ವಕಪ್ ಕಾರಣದಿಂದ ಪಂದ್ಯಗಳ ಆರಂಭಿಕ ಸಮಯವನ್ನು ಸಂಜೆ 7 ರಿಂದ 6 ಗಂಟೆಗೆ ಬದಲಾಯಿಸಲಾಗಿದೆ. ಜೂನ್ 26 ಮತ್ತು 28 ರಂದು ಪಂದ್ಯಗಳು ನಡೆಯಲಿದ್ದು ಪಂದ್ಯಗಳು 6 ಗಂಟೆಗೆ ಸ್ಟಾರ್ಟ್ ಆಗಲಿವೆ. ಮೊದಲ 7ಗಂಟೆಗೆ ಆರಂಭ ಅಂದಿದ್ರೂ ಕೂಡ ಟಿ-20 ವಿಶ್ವಕಪ್ ಪಂದ್ಯಗಳ ಜೊತೆ ಕ್ಲಾಶ್ ಆಗೋದ್ರಿಂದ ಸಮಯ ಬದಲಾವಣೆ ಮಾಡಲಾಗಿದೆ. ಒಟ್ನಲ್ಲಿ ಭಾರತ-ಐರ್ಲೆಂಡ್ ಸರಣಿಗಾಗಿ ಕೋಟಿ ಕೋಟಿ ಫ್ಯಾನ್ಸ್ ಕಾಯ್ತಿದ್ದಾರೆ. ಟಿ-20ಐ ಪವರ್ ಶೋಗಾಗಿ ಫುಲ್ ಎಕ್ಸೈಟ್ ಆಗಿದ್ದಾರೆ.

Shantha Kumari

Leave a Reply

Your email address will not be published. Required fields are marked *