ಧರ್ಮಸ್ಥಳ ದೇವರಿಗೆ ವಿಜಯೇಂದ್ರ ತಪ್ಪು ಕಾಣಿಕೆ – ಮಂಜುನಾಥನ ದರ್ಶನ ಪಡೆದು 1001 ರೂಪಾಯಿ ಸಲ್ಲಿಕೆ

ಕ್ರಾಸ್ ವೋಟಿಂಗ್ ವಿಚಾರದಲ್ಲಿ ಮಾತಿನ ಭರದಲ್ಲಿ ಮಂಜುನಾಥನ ಹೆಸರೇಳಿದ ಬಿಜೆಪಿ ರಾಜ್ಯಾಧ್ಯಕ್ಷ ಕೊನೆಗೂ ತಪ್ಪು ಕಾಣಿಕೆ ಹಾಕಿದ್ದಾರೆ. ಶ್ರೀ ಮಂಜುನಾಥನ ದರ್ಶನ ಮಾಡಿದ ವಿಜಯೇಂದ್ರ 1001 ರೂಪಾಯಿ ತಪ್ಪು ಕಾಣಿಕೆ ಹಾಕಿದ್ದಾರೆ.
ಇದನ್ನೂ ಓದಿ:ತೋತಾಪುರಿ ಮಾವಿಗೆ ಕೇಂದ್ರದ ಸಹಾಯಧನ – ಕರ್ನಾಟಕ ಮಾವು ಬೆಳೆಗಾರರ ಸಂಕಷ್ಟ ನೀಗುತ್ತಾ?
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಧರ್ಮಸ್ಥಳಕ್ಕೆ ಆಗಮಿಸಿದರು. ಶ್ರೀ ಮಂಜುನಾಥನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸದರು. ಇದೇ ವೇಳೆ ಬಿವೈ ವಿಜಯೇಂದ್ರ ದೇವರಿಗೆ 1001 ರೂಪಾಯಿ ತಪ್ಪಿನ ಕಾಣಿಕೆ ಸಲ್ಲಿಸಿದ್ದಾರೆ. ಆಣೆ ಪ್ರಮಾಣ ನಿರ್ಧಾರ ರದ್ದಾದ ಬೆನ್ನಲ್ಲೇ ಗುರುವಾರ ರಾತ್ರಿ ಧರ್ಮಸ್ಥಳಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಪ್ಪು ಕಾಣಿಕೆ ಸಲ್ಲಿಸಿದರು.
ವಿಜಯೇಂದ್ರ ಅವ್ರು ಹೈಕಮಾಂಡ್ ನಾಯಕರಿಗೆ ಅಡ್ಡ ಮತದಾನದ ಬಗ್ಗೆ ವರದಿ ಸಲ್ಲಿಕೆ ಮಾಡಿದ್ದಾರೆ. ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ಕೆಲ ಹಿರಿಯ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ರು. ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡಲೇ ಧರ್ಮಸ್ಥಳಕ್ಕೆ ಆಗಮಿಸಿ, ತಪ್ಪು ಕಾಣಿಕೆ ಸಲ್ಲಿಸಿದರು.
ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುmಪಿ ಬಿಜೆಪಿ ಶಾಸಕರ ಜೊತೆಗೂಡಿ ತಪ್ಪು ಕಾಣಿಕೆ ಸಲ್ಲಿಕೆ ಮಾಡಿದ್ದು, ಬಳಿಕ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಜೊತೆ ಬಿವೈ ವಿಜಯೇಂದ್ರ ಮಾತುಕತೆ ನಡೆಸಿದರು. ಧರ್ಮಸ್ಥಳದಲ್ಲಿ ಬಿಜೆಕ್ರಾಸ್ ವೋಟಿಂಗ್ ವಿಚಾರದಲ್ಲಿ ಮಾತಿನ ಭರದಲ್ಲಿ ಮಂಜುನಾಥನ ಹೆಸರೇಳಿದ ಬಿಜೆಪಿ ರಾಜ್ಯಾಧ್ಯಕ್ಷ ಕೊನೆಗೂ ತಪ್ಪು ಕಾಣಿಕೆ ಹಾಕಿದ್ದಾರೆ. ಶ್ರೀ ಮಂಜುನಾಥನ ದರ್ಶನ ಮಾಡಿದ ವಿಜಯೇಂದ್ರ 1001 ರೂಪಾಯಿ ತಪ್ಪು ಕಾಣಿಕೆ ಹಾಕಿದ್ದಾರೆ.

ನೋಡಿರಿ

