ದರ್ಶನ್ ಪುತ್ರ ವಿನೀಶ್ ಕಾರು ಆಪಘಾತ!? – ಘಟನೆ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೇಳಿದ್ದೇನು?

ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಪುತ್ರ ವಿನೀಶ್ ಕಾರು ಆಪಘಾತದ ಸುಳ್ಳು ಸುದ್ದಿ ಸದ್ದು ಮಾಡುತ್ತಿದ್ದು, ಇದರಿಂದ ವಿಜಯಲಕ್ಷ್ಮಿ ಕೆರಳಿ ಕೆಂಡವಾಗಿದ್ದಾರೆ. ದರ್ಶನ್ ಪುತ್ರ ವಿನೀಶ್ ಅವರ ಕಾರು ಅಪಘಾತಕ್ಕೀಡಾಗಿದ್ದು, ಕಾರನ್ನು ವಿನೀಶ್ ಅವರೇ ಚಲಾಯಿಸುತ್ತಿದ್ದರು, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಅನ್ನೋ ಸುದ್ದಿ ಹಬ್ಬಿಸಿದ್ರು. ಈ ಬಗ್ಗೆ ವಿಜಯಲಕ್ಷ್ಮಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಇಂದಿನಿಂದ ಭಾರತ ಮತ್ತು ಐರ್ಲೆಂಡ್ ನಡುವೆ T20I ಸರಣಿ ಆರಂಭ – ಸೂರ್ಯವಂಶಿ ಪಾದಾರ್ಪಣೆಗೆ ಮಳೆ ಅಡ್ಡಿ ಸಾಧ್ಯತೆ
ವಿಜಯಲಕ್ಷ್ಮಿ ಹೇಳಿದ್ದೇನು?
ಎಲ್ಲರಿಗೂ ನಮಸ್ಕಾರ, ವಿನೀಶ್‌ಗೆ ಅಪಘಾತವಾಗಿದೆ ಮತ್ತು ಆತ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂಬ ಸುದ್ದಿ ಸಂಪೂರ್ಣ ಸುಳ್ಳು ಅನ್ನೋದನ್ನ ನಾವಿಲ್ಲಿ ಸ್ಪಷ್ಟಪಡಿಸೋಕೆ ಇಷ್ಟಪಡುತ್ತೇವೆ. ವಿನೀಶ್ ಸಂಪೂರ್ಣವಾಗಿ ಆರಾಮವಾಗಿದ್ದಾನೆ, ಚೆನ್ನಾಗಿದ್ದಾನೆ. ಆತ ಗಾಡಿ ಓಡಿಸುತ್ತಿರಲಿಲ್ಲ. ಎಂದಿನಂತೆ ನಮ್ಮ ಡ್ರೈವರ್ ಗಾಡಿ ಚಲಾಯಿಸುತ್ತಿದ್ದರು.
ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಾಮಾನ್ಯ ಅನ್ನೋ ತರಹದ ಒಂದು ಸಣ್ಣ ರಸ್ತೆ ಘಟನೆ (ಮೈನರ್ ಆಕ್ಸಿಡೆಂಟ್) ನಡೆದಿದೆ ಅಷ್ಟೇ. ಘಟನೆಯಲ್ಲಿ ಭಾಗಿಯಾಗಿದ್ದ ಬೈಕ್ ಸವಾರರು ತಪ್ಪು ತಮ್ಮದೇ ಎಂದು ಒಪ್ಪಿಕೊಂಡು, ಸ್ಥಳದಲ್ಲೇ ಕ್ಷಮೆಯನ್ನೂ ಕೇಳಿದ್ದಾರೆ. ಬೈಕ್‌ನಲ್ಲಿದ್ದ ಜನರು ಸುರಕ್ಷಿತವಾಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ವಿನೀಶ್ ಕಾರಿನಿಂದ ಕೆಳಗಿಳಿದಿದ್ದರು. ಆದರೆ ದುರದೃಷ್ಟವಶಾತ್, ಆ ಕೆಲವು ಕ್ಷಣಗಳನ್ನೇ ತಪ್ಪಾಗಿ ಅರ್ಥೈಸಿ, ಇಡೀ ವಿಷಯವನ್ನು ಸಂಪೂರ್ಣವಾಗಿ ಹಾದಿ ತಪ್ಪಿಸುವ ರೀತಿಯಲ್ಲಿ ಬಿಂಬಿಸಲಾಗಿದೆ.
ಒಂದು ಕುಟುಂಬವಾಗಿ ನಾವು ಈಗಾಗಲೇ ಸಾಕಷ್ಟು ಕಷ್ಟದ ಸಮಯವನ್ನು ಎದುರಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಪರಿಶೀಲಿಸದ ಮತ್ತು ಉತ್ತೇಜನಕಾರಿ ಸುದ್ದಿಗಳ ಹರಡುವಿಕೆ ನಮ್ಮ ನೋವು ಮತ್ತು ಆತಂಕವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಯಾವುದೇ ಮಾಹಿತಿಯನ್ನು ಪಬ್ಲಿಶ್ ಅಥವಾ ಬ್ರಾಡ್‌ಕಾಸ್ಟ್ ಮಾಡುವ ಮುನ್ನ ದಯವಿಟ್ಟು ಸತ್ಯ ಏನೆಂಬುದನ್ನು ಪರಿಶೀಲಿಸಿ ಎಂದು ನಾವು ಎಲ್ಲರಲ್ಲೂ, ಮುಖ್ಯವಾಗಿ ಮಾಧ್ಯಮ ಸಂಸ್ಥೆಗಳಲ್ಲಿ ವಿನಂತಿಸಿಕೊಳ್ಳುತ್ತೇವೆ. ಇಂತಹ ಸುದ್ದಿಗಳು ಜನರಿಗೆ ಮತ್ತು ಅವರ ಕುಟುಂಬಗಳಿಗೆ ಅನಗತ್ಯವಾಗಿ ತುಂಬಾ ಮಾನಸಿಕ ಹಿಂಸೆ ನೀಡುತ್ತವೆ. ಯಾರೂ ಕೂಡ ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ ಮತ್ತು ಶೇರ್ ಮಾಡಬೇಡಿ ಅಂತಲೂ ವಿನಂತಿಸುತ್ತೇವೆ. ನಿಮ್ಮ ಬೆಂಬಲಕ್ಕೆ ಮತ್ತು ನಮ್ಮನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು ಎಂದು ವಿಜಯಲಕ್ಷ್ಮಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.

ನೋಡಿರಿ

