ಟಿ20 ವಿಶ್ವಕಪ್ ಸೆಮೀಸ್‌ಗೆ ಟೀಮ್ ಇಂಡಿಯಾ ಎಂಟ್ರಿ – ಬಾಂಗ್ಲಾ ಬೆನ್ನು ಮುರಿದ ಭಾರತದ ವನಿತೆಯರು

2026ರ ಮಹಿಳಾ ಟಿ20 ವಿಶ್ವಕಪ್‌ನ ನಿರ್ಣಾಯಕ ಪಂದ್ಯದಲ್ಲಿ ಭಾರತದ ವನಿತೆಯರು ಗೆಲುವು ಸಾಧಿಸಿದ್ದಾರೆ. ಬಾಂಗ್ಲಾದೇಶವನ್ನು ಸೋಲಿಸಿ ಸೆಮಿಫೈನಲ್ ಗೆ ಎಂಟ್ರಿಕೊಟ್ಟಿದ್ದಾರೆ.
ಇದನ್ನೂ ಓದಿ:ಶ್ರೇಯಸ್ ಗೆ ಕ್ಯಾಪ್ಟನ್ಸಿ CHALLENGE – T-20I ಟ್ರೇಡ್ ಮಾರ್ಕ್ ಉಳಿಸ್ತಾರಾ?
ಮ್ಯಾಂಚೆಸ್ಟರ್‌ನಲ್ಲಿ ನಡೆದ 23ನೇ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯ ಉಭಯ ತಂಡಗಳಿಗೂ ನಿರ್ಣಾಯಕವಾಗಿತ್ತು. ಗೆಲ್ಲಲೇಬೇಕಾದ ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶವನ್ನು ಬಗ್ಗುಬಡಿದಿದೆ. ಈ ಮೂಲಕ ಸೆಮೀಸ್ ಗೆ ಎಂಟ್ರಿಕೊಟ್ಟಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ 20 ಓವರ್‌ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 136 ರನ್ ಕಲೆಹಾಕಿತು.
ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕೇವಲ 5 ಬ್ಯಾಟರ್ಗಳು ಮಾತ್ರ ಎರಡಂಕಿ ತಲುಪಿದ್ದು ಬಿಟ್ಟರೆ ಮತ್ಯಾರ ಬ್ಯಾಟಿಂಗ್ ಸೌಂಡ್ ಮಾಡಲೇ ಇಲ್ಲ. ಬಾಂಗ್ಲಾದೇಶ ಪರ ಜುವೈರಿಯಾ ಫಿರ್ದೌಸ್ ಅತ್ಯಧಿಕ 33 ರನ್‌ಗಳ ಇನ್ನಿಂಗ್ಸ್ ಆಡಿದರೆ, ನಾಯಕಿ ನಿಗರ್ ಸುಲ್ತಾನ 27 ಎಸೆತಗಳಲ್ಲಿ 32 ರನ್ ಗಳಿಸಿದರು. ಶೋಭನಾ ಕೂಡ 22 ರನ್‌ಗಳ ಕಾಣಿಕೆ ನೀಡಿದರು. ಈ ಮೂವರು ಈ ರನ್ ಹೊಡೆಯಲು ಕಾರಣ ಭಾರತದ ಕಳಪೆ ಫಿಲ್ಡಿಂಗ್. ಈ ಪಂದ್ಯದಲ್ಲಿ ಬಾಂಗ್ಲಾ ತಂಡ 100 ರನ್‌ಗಳ ಗಡಿ ದಾಟಲು ಟೀಂ ಇಂಡಿಯಾದ ಕಳಪೆ ಫಿಲ್ಡಿಂಗ್ ಪ್ರಮುಖ ಕಾರಣವಾಯಿತು. ಎಂದಿನಂತೆ ಈ ಪಂದ್ಯದಲ್ಲೂ ಟೀಂ ಇಂಡಿಯಾ ಆಟಗಾರ್ತಿಯರು 4 ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದರು. ಹೀಗಾಗಿ ಬಾಂಗ್ಲಾ ತಂಡ 136 ರನ್ ಕಲೆಹಾಕಿತು. ಇಲ್ಲದಿದ್ದರೆ ತಂಡದ ಸ್ಕೋರ್ 100 ರ ಗಡಿ ಕೂಡ ದಾಟುತ್ತಿರಲಿಲ್ಲ.
137 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 17ನೇ ಓವರ್‌ನಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು ಜಯದ ನಗೆಬೀರಿತು. ಭಾರತದ ಪರ ಸ್ಮೃತಿ ಮಂಧಾನ ಬೇಗನೇ ಔಟಾದರು. ಆದರೆ ಶೆಫಾಲಿ ವರ್ಮಾ ಬೌಂಡರಿಗಳ ಮಳೆ ಸುರಿಸಿ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ 9 ನೇ ಓವರ್‌ನಲ್ಲಿ ಶೆಫಾಲಿ 53 ರನ್‌ಗಳಿಗೆ ಔಟಾದರು. ಶೆಫಾಲಿ ಔಟಾಗುತ್ತಿದ್ದಂತೆ ಭಾರತದ ಇನ್ನಿಂಗ್ಸ್ ಇದ್ದಕ್ಕಿದ್ದಂತೆ ಕುಸಿಯಿತು. ಪರಿಣಾಮವಾಗಿ 98 ರ ಹೊತ್ತಿಗೆ ತಂಡವು ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಜೆಮಿಮಾ ಮತ್ತು ಕ್ಯಾಪ್ಯನ್ ಹರ್ಮನ್ ಪ್ರೀತ್ ಕೌರ್ ನಡುವೆ ರನ್ ಕದಿಯಲು ಗೊಂದಲ ಎರಡು ಮೂರು ಬಾರಿ ಕಾಣಿಸಿತು. ಕೊನೆಗೂ ಟೀಂ ಇಂಡಿಯಾ 16.5 ಓವರ್‌ಗಳಲ್ಲಿ ಗುರಿ ಸಾಧಿಸಿತು. ಈ ಮೂಲಕ ವಿಶ್ವಕಪ್‌ನ ಸೆಮೆಫೈನಲ್‌ಗೆ ಎಂಟ್ರಿಕೊಟ್ಟಿದೆ ಟೀಂ ಇಂಡಿಯಾ.

ನೋಡಿರಿ

