ಲಕ್ಷ್ಮೀ ದೇವಿ ನಿಮ್ಮ ಮನೆಯಲ್ಲಿ ನೆಲಸಬೇಕಾ? – ಈ ತಪ್ಪುಗಳನ್ನ ಯಾವತ್ತು ಮಾಡಬೇಡಿ

ಲಕ್ಷ್ಮೀ ದೇವಿ ಐಶ್ವರ್ಯ, ಸಮೃದ್ಧಿ ಮತ್ತು ಸೌಭಾಗ್ಯದ ಅಧಿದೇವತೆ. ನಾವು ಭಕ್ತಿಯಿಂದ ಶಿಸ್ತಿನಿಂದ ಇದ್ದರೇ ಲಕ್ಷ್ಮೀ ಕೇಳಿದ್ದನ್ನೆಲ್ಲಾ ಕೊಡುತ್ತಾಳೆ. ಆದ್ರೆ ನಾವು ಮಾಡುವ ದಿನ ತಪ್ಪುಗಳಿಂದ ಲಕ್ಷ್ಮೀ ಕೊಪಕೊಂಡು ನಮಗೆ ಕಷ್ಟವನ್ನ ನೀಡುತ್ತಾಳೆ. ಹೀಗಾಗಿ ಜೀವನದಲ್ಲಿ ಸ್ವಚ್ಛತೆ, ಶಿಸ್ತು ಮತ್ತು ಕೆಲವು ಸಂಪ್ರದಾಯಗಳನ್ನು ಪಾಲಿಸುವುದು ಮುಖ್ಯ. ಹೀಗಾಗಿ ನೀವು ಯಾವತ್ತು ಈ ತಪ್ಪುಗಳನ್ನ ಮಾಡಬೇಡಿ.
- ಮನೆಯಲ್ಲಿ ನೀರು ಅನಗತ್ಯವಾಗಿ ವ್ಯರ್ಥವಾಗುವುದು ಅಥವಾ ಟ್ಯಾಪ್‌ಗಳಿಂದ ನಿರಂತರವಾಗಿ ನೀರು ಸೋರುವುದು ಒಳ್ಳೆಯ ಸಂಕೇತವಲ್ಲ. ನೀರನ್ನು ಉಳಿಸುವುದು ಕೇವಲ ಸಂಪನ್ಮೂಲ ಸಂರಕ್ಷಣೆ ಮಾತ್ರವಲ್ಲ, ಹಣಕಾಸಿನ ಜವಾಬ್ದಾರಿ.
- ಕೆಲವು ಧಾರ್ಮಿಕ ಆಚರಣೆಗಳ ಪ್ರಕಾರ, ಗುರುವಾರ ಹಾಗೂ ಏಕಾದಶಿ ದಿನಗಳಲ್ಲಿ ಕೂದಲು ಮತ್ತು ಉಗುರು ಕತ್ತರಿಸುವುದನ್ನು ತಪ್ಪಿಸುವ ಸಂಪ್ರದಾಯವಿದೆ. ಈ ದಿನಗಳನ್ನು ವಿಷ್ಣು ಮತ್ತು ಲಕ್ಷ್ಮೀ ದೇವಿಗೆ ಸಂಬಂಧಿಸಿದ ದಿನ.
- ಬ್ರಹ್ಮ ಮುಹೂರ್ತ ಅಥವಾ ಸೂರ್ಯೋದಯಕ್ಕೂ ಮುನ್ನ ಎದ್ದೇಳುವುದು ಶುಭಕರವೆಂದು ಪರಿಗಣಿಸಲಾಗುತ್ತದೆ. ಸೂರ್ಯೋದಯದ ಬಳಿಕವೂ ಮಲಗಿರುವುದು ಆರ್ಥಿಕ ಪ್ರಗತಿಗೆ ಅನುಕೂಲಕರವಲ್ಲ ಎನ್ನಲಾಗುತ್ತದೆ.
- ನಿಂತುಹೋಗಿರುವ ಅಥವಾ ಕೆಟ್ಟುಹೋದ ಗಡಿಯಾರಗಳು ಮನೆಯಲ್ಲಿರಬಾರದು ಎನ್ನುವ ನಂಬಿಕೆ ಇದೆ.
- ಸಂಜೆಯ ನಂತರ ಹಾಲು, ಮೊಸರು, ಉಪ್ಪು, ಸಕ್ಕರೆ ಅಥವಾ ಹಣವನ್ನು ಇತರರಿಗೆ ನೀಡುವುದನ್ನು ಕೆಲವು ಸಂಪ್ರದಾಯಗಳಲ್ಲಿ ತಪ್ಪಿಸಲಾಗುತ್ತದೆ. ಇದು ಮನೆಯ ಸಮೃದ್ಧಿಗೆ ಧಕ್ಕೆ ಉಂಟುಮಾಡಬಹುದು ಎಂಬ ನಂಬಿಕೆ ಇದೆ.
- ಧೂಳು, ಕೊಳಕು ಮತ್ತು ಜೇಡರ ಬಲೆಗಳು ಮನೆಯ ಸಕಾರಾತ್ಮಕ ವಾತಾವರಣವನ್ನು ಹಾಳುಮಾಡುತ್ತವೆ ಎನ್ನುವ ನಂಬಿಕೆ ಇದೆ. ಆದ್ದರಿಂದ ಮನೆ ಸ್ವಚ್ಛವಾಗಿರುವಂತೆ ನೋಡಿಕೊಳ್ಳುವುದು ಮುಖ್ಯ.

ನೋಡಿರಿ

