ENGನಲ್ಲಿ ವೈಭವ್ ಗೆ SEPARATE ರೂಲ್ಸ್ – ಟೀಂ ಇಂಡಿಯಾ ಡ್ರೆಸ್ಸಿಂಗ್ ಕೋಣೆಗಿಲ್ಲ ಎಂಟ್ರಿ
ಸೂರ್ಯವಂಶಿಗೆ ಮಾತ್ರ ಯಾಕಿಲ್ಲ ಪರ್ಮಿಷನ್?

ENGನಲ್ಲಿ ವೈಭವ್ ಗೆ SEPARATE ರೂಲ್ಸ್ – ಟೀಂ ಇಂಡಿಯಾ ಡ್ರೆಸ್ಸಿಂಗ್ ಕೋಣೆಗಿಲ್ಲ ಎಂಟ್ರಿಸೂರ್ಯವಂಶಿಗೆ ಮಾತ್ರ ಯಾಕಿಲ್ಲ ಪರ್ಮಿಷನ್?

ಕ್ರಿಕೆಟ್ ಲೋಕದ ಸೆನ್ಸೇಷನಲ್ ಸ್ಟಾರ್ ವೈಭವ್ ಸೂರ್ಯವಂಶಿ ಟೀಂ ಇಂಡಿಯಾ ಪರ ಡೆಬ್ಯೂಗಾಗಿ ಎಲ್ರೂ ಕಾಯ್ತಾ ಇದ್ದಾರೆ. ಐರ್ಲೆಂಡ್ ವಿರುದ್ಧದ ಸರಣಿ ಮೂಲಕ ಸೀನಿಯರ್ಸ್ ತಂಡಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಬಹುದು. ಆದ್ರೆ ವಿಷ್ಯ ಏನಂದ್ರೆ ಸೂರ್ಯವಂಶಿ ಭಾರತದ ಪರ ಪದಾರ್ಪಣೆ ಮಾಡಿದ್ರೂ ಟೀಂ ಇಂಡಿಯಾ ಆಟಗಾರರ ಡ್ರೆಸ್ಸಿಂಗ್ ಕೋಣೆಗೆ ಪರ್ಮಿಷನ್ ಸಿಗಲ್ಲ.

ಇದನ್ನೂ ಓದಿ : ಪಾಂಡ್ಯ-ಜೈಸ್ವಾಲ್ Swap Deal – KKR ಕ್ಯಾಪ್ಟನ್ ಆಗ್ತಾರಾ ಸೂರ್ಯ?

ಜೂನ್ 26 ಮತ್ತು ಜೂನ್ 28ರಂದು ಐರ್ಲೆಂಡ್ ವಿರುದ್ಧದ 2 ಪಂದ್ಯಗಳ ಟಿ-20ಐ ಸರಣಿ ಬಳಿಕ ಟೀಂ ಇಂಡಿಯಾ ಆಟಗಾರರು ಜುಲೈ 1ರಿಂದ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ-20ಐ ಸರಣಿ ಆಡಲಿದ್ದಾರೆ. ಈ ಎರಡೂ ಸರಣಿಗಳಲ್ಲೂ ಎಲ್ಲರ ಕಣ್ಣು ವೈಭವ್ ಸೂರ್ಯವಂಶಿ ಮೇಲೆಯೇ ಇರಲಿದೆ. ಈಗಾಗಲೇ ಕಾಲಿಟ್ಟಲ್ಲೆಲ್ಲಾ ಚರಿತ್ರೆ ಬರೆದಿರೋ ಸೂರ್ಯವಂಶಿಗೆ ಅಸಲಿ ಟಾಸ್ಕ್ ಕೂಡ ಇಲ್ಲಿಂದಲೇ ಸ್ಟಾರ್ಟ್ ಆಗುತ್ತೆ. ಕ್ರಿಕೆಟ್ ಲೋಕದಲ್ಲಿ ಅಸಲಿ ಜರ್ನಿಗೆ ಸಜ್ಜಾಗಿರೋ ವೈಭವ್​ಗೆ ಭಾರತದ ಪರ ಆಡಿದ್ರೂ ಡ್ರೆಸ್ಸಿಂಗ್ ರೂಮ್​ಗೆ ಕಾಲಿಡುವಂತಿಲ್ಲ.

ಭಾರತದ ಪರ ಆಡಿದ್ರೂ ಸೂರ್ಯವಂಶಿಗೆ ಪ್ರತ್ಯೇಕ ಡ್ರೆಸ್ಸಿಂಗ್ ರೂಂ!

ಜುಲೈ 1 ರಿಂದ ಚೆಸ್ಟರ್-ಲೆ-ಸ್ಟ್ರೀಟ್, ಮ್ಯಾಂಚೆಸ್ಟರ್, ನಾಟಿಂಗ್ಹ್ಯಾಮ್, ಬ್ರಿಸ್ಟಲ್ ಮತ್ತು ಸೌತಾಂಪ್ಟನ್ ಹೀಗೆ ಐದು ಮೈದಾನಗಳಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಐದು ಟಿ-20ಐ ಪಂದ್ಯಗಳನ್ನ ಆಡಲಿದೆ. ಈ ಸರಣಿಗಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ  ಸೂರ್ಯವಂಶಿಗಾಗಿಯೇ ಸ್ಪೆಷಲ್ ಪ್ರಿಪರೇಷನ್​ಗಳನ್ನ ಮಾಡಿಕೊಳ್ತಿದೆ. ಯಾಕಂದ್ರೆ ಐಸಿಸಿ ನಿಯಮಗಳ ಪ್ರಕಾರ, ಭಾರತದ T20I ತಂಡದ ಭಾಗವಾಗಿರುವ ಸೂರ್ಯವಂಶಿ ಈ ಎಲ್ಲಾ ಸ್ಥಳಗಳಲ್ಲಿ ಪ್ರತ್ಯೇಕ ಡ್ರೆಸ್ಸಿಂಗ್ ರೂಮ್ ನಲ್ಲಿ ಇರಬೇಕಾಗುತ್ತೆ.

ಸೂರ್ಯವಂಶಿಗೆ ಸಪರೇಟ್ ರೂಲ್ಸ್!

1989 ರಲ್ಲಿ ಕರಾಚಿಯಲ್ಲಿ ಸಚಿನ್ ಪಾಕಿಸ್ತಾನ ವಿರುದ್ಧ ತಮ್ಮ ಚೊಚ್ಚಲ ಪಂದ್ಯ

ಸೂರ್ಯವಂಶಿ 15 ವರ್ಷ ವಯಸ್ಸಿನಲ್ಲಿ ಭಾರತದ ಅತ್ಯಂತ ಕಿರಿಯ ಆಟಗಾರ

1996 ರಲ್ಲಿ ಪಾಕಿಸ್ತಾನದ ಹಸನ್ ರಜಾ 14 ನೇ ವಯಸ್ಸಿನಲ್ಲಿ ಏಕದಿನ ಪಂದ್ಯ

ಅತ್ಯಂತ ಕಿರಿಯ ಅಂತರರಾಷ್ಟ್ರೀಯ ಕ್ರಿಕೆಟಿಗ ಎಂಬ ದಾಖಲೆ ಅವ್ರ ಹೆಸರಿನಲ್ಲಿ

ಇಂಗ್ಲೆಂಡ್‌ ನಲ್ಲಿ ನಡೆಯುವ ಐದು ಪಂದ್ಯಗಳ ಸರಣಿಗೆ ಶಿಷ್ಟಾಚಾರಗಳು ಕೂಡ ಅಪ್ಲೈ

ಐಸಿಸಿ ಮತ್ತು ಇಸಿಬಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕ್ರಿಕೆಟಿಗರಿಗೆ ರೂಲ್ಸ್

ವಯಸ್ಕರು ಬಟ್ಟೆ ಬದಲಾಯಿಸುವ ಕೊಠಡಿಗಳನ್ನು ಬಳಸುವುದನ್ನು ನಿಷೇಧಿಸಿವೆ

ಸೂರ್ಯವಂಶಿ ಎಲ್ಲಾ 5 ಸ್ಥಳಗಳಲ್ಲಿ ತನ್ನದೇ ಆದ ಸ್ಪೆಷಲ್ ರೂಂ ವ್ಯವಸ್ಥೆ

ಡ್ರೆಸ್ಸಿಂಗ್ ಕೋಣೆಗೆ ಪ್ರವೇಶಿಸಲು ಮತ್ತು ತಂಡದ ಮಾತುಕತೆಗಳಿಗೆ ಅವಕಾಸ

ಪಂದ್ಯದ ಮೊದಲು ಮತ್ತು ನಂತರ ಆ ಕೋಣೆಯಲ್ಲಿ ಇರಲು ಅವಕಾಶವಿರುವುದಿಲ್ಲ

ಮ್ಯಾಕ್ಸ್ ಡೌಮನ್ 16 ವರ್ಷ ವಯಸ್ಸಿನವರೆಗೆ ಪ್ರತ್ಯೇಕ ಡ್ರೆಸ್ಸಿಂಗ್ ಕೋಣೆ

Shantha Kumari

Leave a Reply

Your email address will not be published. Required fields are marked *