ಮಹೇಶ್ಬಾಬುಗೆ 100 ಟೇಕ್ ಹೇಳಿದ ರೌಜಮೌಳಿ – ಮರುದಿನವೂ ಅದೇ ಶಾಟ್.. ಅದೇ ರಿಪೀಟ್
ವಾರಣಾಸಿ ಸಿನಿಮಾ ನಿರ್ದೇಶಕ ರಾಜಮೌಳಿ ಕರ್ತವ್ಯಬದ್ಧತೆ ಹೇಗಿದೆ ಗೊತ್ತಾ?

ದಕ್ಷಿಣಭಾರತದ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ಸಿನಿಮಾ ಅಂದರೆ ಅದರ ತೂಕವೇ ಬೇರೆ. ಇದೀಗ ರಾಜಮೌಳಿ ವಾರಣಾಸಿ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಈ ಸಿನಿಮಾ ಶೂಟಿಂಗ್ನಲ್ಲಿ ನಡೆದ ಸ್ವಾರಸ್ಯಕರ ಘಟನೆಯನ್ನು ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ವಿವರಿಸಿದ್ದಾರೆ.
ಇದನ್ನೂ ಓದಿ:61 ವರ್ಷದ ಆಮೀರ್ ಖಾನ್ ಮೂರನೇ ಮದುವೆ – ಬಾಲಿವುಡ್ ನಟನ ಜೊತೆ ಗೌರಿ ಕಲ್ಯಾಣ
ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ವಾರಣಾಸಿ ಸಿನಿಮಾಗಾಗಿ ಅವಿರತ ಶ್ರಮವಹಿಸುತ್ತಿದ್ದಾರೆ. ಇದಕ್ಕೆ ಸರಿಯಾಗಿ ರಾಜಮೌಳಿಯವರ ಕಠಿಣ ಕೆಲಸದ ಶೈಲಿಯನ್ನು ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ವಿವರಿಸಿದ್ದಾರೆ. ಒಂದು ನಿರ್ದಿಷ್ಟ ಶಾಟ್ಗಾಗಿ ಇಡೀ ದಿನ ಶೂಟಿಂಗ್ ನಡೆಸಿ, 100 ಟೇಕ್ಗಳನ್ನು ತೆಗೆದುಕೊಂಡ ವಿಚಾರವನ್ನು ಹೇಳಿದ್ದಾರೆ. ಈ ಸಿನಿಮಾದಲ್ಲಿ ಮಹೇಶ್ ಬಾಬು ನಾಯಕನಾಗಿ ನಟಿಸಿದರೆ, ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಖಳನಾಯಕನಾಗಿ ನಟಿಸುತ್ತಿದ್ದಾರೆ.. ‘ನಾನು ಸುಳ್ಳು ಹೇಳುತ್ತಿಲ್ಲ. ಚಿತ್ರದ ಒಂದು ನಿರ್ದಿಷ್ಟ ಶಾಟ್ಗಾಗಿ ನಾನು ಮತ್ತು ಮಹೇಶ್ ಬಾಬು ಬೆಳಗ್ಗೆಯೇ ಶೂಟಿಂಗ್ ಆರಂಭಿಸಿದ್ದೆವು. ಅದು ಬಹುಶಃ 94 ಅಥವಾ 97ನೇ ಟೇಕ್ ಇರಬಹುದು. ರಾಜಮೌಳಿ ಅವರಿಗೆ ಆ ಶಾಟ್ ಸರಿಯಾಗಿ ಮೂಡಿಬರದ ಕಾರಣ ನಮಗೆ ಮಧ್ಯಾಹ್ನ ಊಟದ ಬ್ರೇಕ್ ಸಿಕ್ಕಿತು. ನಾವು ಕೇವಲ ಎರಡು ತುತ್ತು ಅನ್ನ ತಿಂದಿದ್ದೆವೋ ಇಲ್ಲವೋ ಅಷ್ಟರಲ್ಲಿ ರಾಜಮೌಳಿ ಮತ್ತೆ ನಮ್ಮನ್ನು ಸೆಟ್ಗೆ ಕರೆದರು. ಆ ಒಂದು ಶಾಟ್ಗಾಗಿ ಶೂಟಿಂಗ್ ಸಂಜೆ 7 ಗಂಟೆಯವರೆಗೂ ಮುಂದುವರಿಯಿತು’ ಎಂದು ಪೃಥ್ವಿರಾಜ್ ಹೇಳಿದ್ದಾರೆ. ಅಷ್ಟೊಂದು ಟೇಕ್ಗಳನ್ನು ತೆಗೆದುಕೊಂಡ ನಂತರವೂ ರಾಜಮೌಳಿ ಅವರಿಗೆ ಆ ದೃಶ್ಯ ತೃಪ್ತಿ ನೀಡಲಿಲ್ಲ. ಹೀಗಾಗಿ, ಮೊದಲು ಪ್ಯಾಕಪ್ ಎಂದರು. ಮರುದಿನವೂ ಸೆಟ್ಗೆ ಬಂದು ಅದೇ ದೃಶ್ಯವನ್ನು ಮತ್ತೆ ಶೂಟ್ ಮಾಡುವಂತೆ ಇಬ್ಬರು ನಟರಿಗೆ ನಿರ್ದೇಶಕರು ಸೂಚಿಸಿದ್ದರು. ರಾಜಮೌಳಿ ಅವರ ಈ ಕಠಿಣ ಪರಿಶ್ರಮವನ್ನು ಕಂಡು ನಾನು ಬೆರಗಾದೆ ಎಂದು ಪೃಥ್ವಿರಾಜ್ ಸುಕುಮಾರನ್ ವಿವರಿಸಿದ್ದಾರೆ.
ರಾಜಮೌಳಿ ಅವರ ಕೆಲಸದ ಸಮಯದ ಬಗ್ಗೆಯೂ ಪೃಥ್ವಿರಾಜ್ ಮಾತನಾಡಿದ್ದಾರೆ. ‘ನಮಗೆ ಬೆಳಗ್ಗೆ 7 ಗಂಟೆಗೆ ಶೂಟಿಂಗ್ ಇದ್ದರೆ ರಾಜಮೌಳಿ ಅದಕ್ಕೂ ಮುನ್ನವೇ ಸೆಟ್ಗೆ ಬಂದಿರುತ್ತಾರೆ. ಅವರು ಬೆಳಿಗ್ಗೆ 5.15ಕ್ಕೆಲ್ಲಾ ಬಂದು ತಮ್ಮ ಅಸಿಸ್ಟೆಂಟ್ಗಳ ಜೊತೆ ರಿಹರ್ಸಲ್ ಮಾಡಿರುತ್ತಾರೆ. ಕ್ಯಾಮೆರಾ ಸೆಟಪ್ ಮತ್ತು ಪ್ಲಾನಿಂಗ್ ಮುಗಿಸಿರುತ್ತಾರೆ. ಶೂಟಿಂಗ್ ಮುಗಿಸಿ ಕೊನೆಯಲ್ಲಿ ಸೆಟ್ನಿಂದ ಹೊರಡುವ ವ್ಯಕ್ತಿಯೂ ಅವರೇ ಆಗಿರುತ್ತಾರೆ. ಅವರ ಸಿನಿಮಾದಲ್ಲಿ ಲಂಚ್ ಬ್ರೇಕ್ ಕೇವಲ 20 ನಿಮಿಷ ಇರುತ್ತದೆ ಎಂದು ಪೃಥ್ವಿರಾಜ್ ತಿಳಿಸಿದ್ದಾರೆ.
ವಾರಣಾಸಿ ಸಿನಿಮಾದಲ್ಲಿ ಮಹೇಶ್ ಬಾಬು ರುದ್ರ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಮಂದಾಕಿನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ಪೃಥ್ವಿರಾಜ್ ಸುಕುಮಾರನ್ ಈ ಚಿತ್ರದಲ್ಲಿ ಕುಂಭ ಎಂಬ ವಿಲನ್ ಪಾತ್ರವನ್ನು ಮಾಡುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದ್ದು, ರೌಜಮೌಳಿಯವರ ಕರ್ತವ್ಯಬದ್ಧತೆಯನ್ನು ಕೊಂಡಾಡಿದ್ದಾರೆ ಪೃಥ್ವಿರಾಜ್ ಸುಕುಮಾರನ್.

ನೋಡಿರಿ

