61 ವರ್ಷದ ಆಮೀರ್‌ ಖಾನ್ ಮೂರನೇ ಮದುವೆ – ಬಾಲಿವುಡ್ ನಟನ ಜೊತೆ ಗೌರಿ ಕಲ್ಯಾಣ

61 ವರ್ಷದ ಆಮೀರ್‌ ಖಾನ್ ಮೂರನೇ ಮದುವೆ – ಬಾಲಿವುಡ್ ನಟನ ಜೊತೆ ಗೌರಿ ಕಲ್ಯಾಣ

ಬಾಲಿವುಡ್ ಅಂಗಳದಲ್ಲಿ ಮತ್ತೊಂದು ಮದುವೆ ಸುದ್ದಿ ಹೊರಬಿದ್ದಿದೆ. ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್’ ಆಮಿರ್ ಖಾನ್ ಅವರು ತಮ್ಮ ಮದುವೆಯ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಜೂಲೈ 5ಕ್ಕೆ ಆಮೀರ್‌ಖಾನ್ ಜೊತೆ ಗೌರಿ ಕಲ್ಯಾಣ ನಡೆಯಲಿದೆ.

ಇದನ್ನೂ ಓದಿ:ಗರ್ಭಿಣಿ ಸಮಂತಾರನ್ನು ಸತ್ಕರಿಸಿದ ಚಿರಂಜೀವಿ – ಮೆಗಾಸ್ಟಾರ್ ಮನೆಯಲ್ಲಿ ನಟಿಗೆ ವಿಶೇಷ ಉಡುಗೊರೆ

ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಅವರಿಗೆ ಈಗ 61ರ ಹರೆಯ. ಇದೀಗ ಆಮೀರ್‌ಖಾನ್ ತಮ್ಮ ಮೂರನೇ ಮದುವೆಗೆ ಸಿದ್ಧತೆ ನಡೆಸಿದ್ದಾರೆ. ಜುಲೈ 5ರಂದು ಅವರು ಗೌರಿ ಸ್ಪ್ರಾಟ್ ಅವರೊಂದಿಗೆ ವಿವಾಹವಾಗಲಿದ್ದಾರೆ. ತಮ್ಮ ವಿವಾಹದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಮೀರ್‌ಖಾನ್, ಯಾವುದೇ ಅದ್ಧೂರಿ ಸಮಾರಂಭವನ್ನು ಆಯೋಜಿಸುತ್ತಿಲ್ಲ ಎಂದು ಹೇಳಿದ್ದಾರೆ. ಈ ಮದುವೆಯು ಅತ್ಯಂತ ಸರಳ ಹಾಗೂ ಖಾಸಗಿಯಾಗಿ ನಡೆಯಲಿದೆ. ಮನೆಯಲ್ಲಿಯೇ ಕುಟುಂಬದ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಸರಳವಾಗಿ ನೋಂದಾಯಿತ ವಿವಾಹ ಮಾಡಿಕೊಳ್ಳುತ್ತಿರುವುದಾಗಿ ಆಮಿರ್ ಖಾನ್ ತಿಳಿಸಿದ್ದಾರೆ. ಕೇವಲ ಎರಡೂ ಕುಟುಂಬದ ಸದಸ್ಯರು ಮತ್ತು ತೀರಾ ಹತ್ತಿರದ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರೆ ಎಂದು ಆಮೀರ್‌ಖಾನ್ ತಿಳಿಸಿದ್ದಾರೆ.

ಆಮೀರ್‌ಖಾನ್ ಈ ಹಿಂದೆ ರೀನಾ ದತ್ತಾ ಅವರನ್ನು ವಿವಾಹವಾಗಿದ್ದರು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ನಂತರ ಅವರು ಚಲನಚಿತ್ರ ನಿರ್ಮಾಪಕಿ ಕಿರಣ್ ರಾವ್ ಅವರನ್ನು ಮದುವೆಯಾಗಿದ್ದರು ಮತ್ತು ಅವರಿಗೆ ಒಬ್ಬ ಮಗನಿದ್ದಾನೆ. ಕೆಲವು ವರ್ಷಗಳ ಹಿಂದೆ ಕಿರಣ್ ರಾವ್ ಮತ್ತು ಆಮಿರ್ ಖಾನ್ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದಿದ್ದರು. ಆದಾಗ್ಯೂ, ಇಬ್ಬರು ಮಾಜಿ ಪತ್ನಿಯರೊಂದಿಗೆ ಆಮಿರ್ ಇಂದಿಗೂ ಉತ್ತಮ ಸ್ನೇಹ ಮತ್ತು ಗೌರವಯುತ ಸಂಬಂಧವನ್ನು ಮುಂದುವರಿಸಿದ್ದಾರೆ. ಈಗ ಗೌರಿ ಸ್ಪ್ರಾಟ್ ಅವರೊಂದಿಗೆ ಮೂರನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

Sulekha

Leave a Reply

Your email address will not be published. Required fields are marked *