ಫಿಫಾ ವಿಶ್ವಕಪ್‌ನಲ್ಲಿ ಮೆಸ್ಸಿ ಚರಿತ್ರೆ – ಗೋಲ್ಡನ್ ಬೂಟ್ ಈ ಸಲ ಮೆಸ್ಸಿಗೆ ಫಿಕ್ಸ್..

ಫಿಫಾ ವಿಶ್ವಕಪ್‌ನಲ್ಲಿ ಮೆಸ್ಸಿ ಚರಿತ್ರೆ  – ಗೋಲ್ಡನ್ ಬೂಟ್ ಈ ಸಲ ಮೆಸ್ಸಿಗೆ ಫಿಕ್ಸ್..

ಫುಟ್ಬಾಲ್ ಮಾಂತ್ರಿಕ ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ಫಿಪಾ ವಿಶ್ವಕಪ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಇದರ ಜೊತೆಗೆ ಗೋಲ್ಡನ್ ಬೂಟ್ ಪಡೆಯಲು ಮೆಸ್ಸಿ ಕಾತರರಾಗಿದ್ದಾರೆ.

ಇದನ್ನೂ ಓದಿ:ಲಿಯೋನೆಲ್ ಮೆಸ್ಸಿ ಹ್ಯಾಟ್ರಿಕ್ ಗೋಲು – ವಿಶ್ವ ದಾಖಲೆ ಸರಿಗಟ್ಟಿದ ಕಾಲ್ಚೆಂಡಿನ ಮಾಂತ್ರಿಕ ಮೆಸ್ಸಿ

ಅರ್ಜೆಂಟೀನಾ ಲೆಜೆಂಡರಿ ಪ್ಲೇಯರ್ ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಸಾರ್ವಕಾಲಿಕ ಪ್ರಮುಖ ಗೋಲ್ ಸ್ಕೋರರ್ ಆಗಿದ್ದಾರೆ. ಫಿಫಾ ವಿಶ್ವಕಪ್ ಪಂದ್ಯಾವಳಿಯ ಗ್ರೂಪ್ ಜೆ ಪಂದ್ಯದ ಸಮಯದಲ್ಲಿ ಆಸ್ಟ್ರಿಯಾ ವಿರುದ್ಧದ ಪಂದ್ಯದಲ್ಲಿ ಮೆಸ್ಸಿ ಈ ಸಾಧನೆ ಮಾಡಿದ್ದಾರೆ. ಮೆಸ್ಸಿ ಆಸ್ಟ್ರಿಯಾ ವಿರುದ್ಧದ ಪಂದ್ಯದಲ್ಲಿ ಎರಡು ಗೋಲುಗಳನ್ನು ಗಳಿಸುವ ಮೂಲಕ ಚರಿತ್ರೆ ಸೃಷ್ಟಿಸಿದರು.

ಮಂಗಳವಾರ ಮುಂಜಾನೆ ಡಲ್ಲಾಸ್‌ನಲ್ಲಿ ನಡೆದ ಪಂದ್ಯದಲ್ಲಿ, ಹಾಲಿ ಚಾಂಪಿಯನ್ ಅರ್ಜೆಂಟೀನಾ ಆಸ್ಟ್ರಿಯಾವನ್ನು 2-0 ಗೋಲುಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ, ಅರ್ಜೆಂಟೀನಾ ನಾಕೌಟ್ ಹಂತಕ್ಕೆ ಅರ್ಹತೆ ಪಡೆಯಿತು. ಈ ಪಂದ್ಯದ ಹೈಲೆಟ್ಸ್ ಅಂದರೆ ಲಿಯೋನೆಲ್ ಮೆಸ್ಸಿ. ಫುಟ್ಬಾಲ್ ಮಾಂತ್ರಿಕ ಎರಡು ಗೋಲುಗಳನ್ನು ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಪಂದ್ಯದ 9ನೇ ನಿಮಿಷದಲ್ಲಿ ಅರ್ಜೆಂಟೀನಾಗೆ ಪೆನಾಲ್ಟಿ ನೀಡಲಾಯಿತು. ಆದರೆ, ಇಲ್ಲಿ ಗೋಲ್ ಮಾಡಲು ಯತ್ನಿಸಿದ ಮೆಸ್ಸಿಯ ಗುರಿ ತಪ್ಪಿತ್ತು. ನಂತರ 38ನೇ ನಿಮಿಷದಲ್ಲಿ, ಮೆಸ್ಸಿ ಫಕುಂಡೋ ಮೆಡಿನಾ ಅವರ ಕ್ರಾಸ್ ಅನ್ನು ಅದ್ಭುತವಾಗಿ ಗೋಲಾಗಿ ಪರಿವರ್ತಿಸಿದರು. ಈ ಗೋಲಿನೊಂದಿಗೆ ಅವರು ವಿಶ್ವ ದಾಖಲೆ ನಿರ್ಮಿಸಿದರು. ಈ ಮೂಲಕ 17 ಗೋಲು ಗಳಿಸಿ ಮೆಸ್ಸಿ ಮಾಜಿ ಜರ್ಮನ್ ಆಟಗಾರ ಮಿರೋಸ್ಲಾವ್ ಕ್ಲೋಸ್ ಅವರ ದಾಖಲೆ ಮುರಿದರು. ಮಿರೋಸ್ಲಾವ್ ಕ್ಲೋಸ್ ಅವರು 16 ಗೋಲುಗಳ ದಾಖಲೆ ಹೊಂದಿದ್ದರು.

ಪಂದ್ಯದ ಸಮಯ 90+5 ನೇ ನಿಮಿಷದಲ್ಲಿ ಮೆಸ್ಸಿ ಚರಿತ್ರೆ ಬರೆದರು. ಅಂದರೆ, ಮೆಸ್ಸಿ ಎಂಜೊ ಫೆರ್ನಾಂಡಿಸ್ ನೀಡಿದ ಪಾಸ್ ಅನ್ನು ಗೋಲಾಗಿ ಪರಿವರ್ತಿಸಿದರು, ಅರ್ಜೆಂಟೀನಾಕ್ಕೆ ಜಯ ತಂದುಕೊಟ್ಟರು. ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಐದು ಗೋಲುಗಳೊಂದಿಗೆ, ಮೆಸ್ಸಿ ಗೋಲ್ಡನ್ ಬೂಟ್‌ಗಾಗಿ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ.

Sulekha

Leave a Reply

Your email address will not be published. Required fields are marked *