ವಿಜಯ್ – ತ್ರಿಶಾ ಬ್ರೇಕಪ್? – ದಳಪತಿ INSTA Unfollow – CM ಆದ ಮೇಲೆ ನಡೆದಿದ್ದೇನು?

ದಳಪತಿ ವಿಜಯ್ ಲವ್ ತ್ರಿಷಾ.. ಇದು ನಿನ್ನೆ ಮೊನ್ನೆಯ ಸುದ್ದಿಯಲ್ಲ. ಸಾಕಷ್ಟು ವರ್ಷಗಳಿಂದ ಇವರಿಬ್ಬರ ನಡುವೆ ಲವ್ ಇದೆ ಎನ್ನಲಾಗ್ತಿದೆ. ಇವರಿಬ್ಬರು 2004ರಲ್ಲಿ ತೆೆರೆಕಂಡ ಗಿಲ್ಲಿ ಸಿನಿಮಾದಲ್ಲಿ ಜೋಡಿಯಾಗಿ ಮಿಂಚಿದ್ರು. ಅಲ್ಲಿದ ಇವರಿಬ್ಬರ ನಡುವೆ ಲವ್ ಇದೆ ಎನ್ನಲಾಗ್ತಿದೆ. ಇವರಿಬ್ಬರು ಕೂಡ ಎಲ್ಲೋ ತಮ್ಮ ಪ್ರೀತಿ ಬಗ್ಗೆ, ತಮ್ಮ ಸಂಬಂಧದ ಬಗ್ಗೆ ಕೂಡ ಬಾಯಿಬಿಟ್ಟು ಹೇಳಿಲ್ಲ ವಿಜಯ್ ಡಿವೋರ್ಸ್‌ಗೆ ತ್ರಿಶಾ ಕಾರಣ ಅನ್ನೋ ವಿಷ್ಯ ಗುಟ್ಟಾಗಿ ಉಳಿದಿಲ್ಲ. ಆದ್ರೆ ಈಗ ಹೊಸ ವಿಷ್ಯ ಏನಪ್ಪ ಅಂದ್ರೆ ವಿಜಯ್ ತ್ರಿಷಾ ಲವ್ ಬ್ರೇಕಪ್ ಆಗಿದೆ..
ದಳಪತಿ ವಿಜಯ್ ಜೊತೆ ತ್ರಿಷಾ ಬ್ರೇಕಪ್ ಅನ್ನೋದೇ ಈಗ ಸದ್ಯಕ್ಕಿರೋ ಬ್ರೇಕಿಂಗ್ ನ್ಯೂಸ್. ಹೌದು ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗ ಜೋರಾದ ಚರ್ಚೆ ನಡೆಯುತ್ತಿದೆ. ಅಂದಹಾಗೇ ವಿಜಯ್ ಹಾಗೂ ತ್ರಿಶಾ ಆತ್ಮೀಯ ಸ್ನೇಹಿತರು, ಹಲವು ವರ್ಷಗಳಿಂದ ತಮಿಳು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದು, ಈ ಜೋಡಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಆದ್ರೆ ಇತ್ತಿಚ್ಚಿಗೆ ವಿಜಯ್ ಅವರ ಮಾಜಿ ಪತ್ನಿ ಸಂಗೀತಾ ಅವರು ಡಿವೋರ್ಸ್ ಅರ್ಜಿಯಲ್ಲಿ ನಟಿಯೊಬ್ಬರ ಕಾರಣಕ್ಕೆ ತಮ್ಮ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎಂದೂ ಉಲ್ಲೇಖಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಆಡಿಕೊಳ್ಳುವವರ ಬಾಯಿ ಮುಚ್ಚಿಸುವುದಕ್ಕೆಂದೇ ತ್ರಿಶಾ ಜೊತೆ ವಿಜಯ್ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದರು. ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವಾಗ ಕೂಡ ಜೊತೆಗೆ ಇದ್ದರು. ಆದ್ರೆ ಈಗ ಇಬ್ಬರ ನಡುವೆ ಬ್ರೇಕಪ್ ಆಗಿದೆ ಅನ್ನೋ ಸುದ್ದಿ ಹರಡಿದೆ.
ಇದನ್ನೂ ಓದಿ: ಗರ್ಭಿಣಿ ಸಮಂತಾರನ್ನು ಸತ್ಕರಿಸಿದ ಚಿರಂಜೀವಿ – ಮೆಗಾಸ್ಟಾರ್ ಮನೆಯಲ್ಲಿ ನಟಿಗೆ ವಿಶೇಷ ಉಡುಗೊರೆ
ವಿಜಯ್‌ಗೆ ಬರ್ತ್‌ಡೇ ವಿಶ್ ಮಾಡದ ತ್ರಿಶಾ
ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನಟಿ ತ್ರಿಶಾ ಅವರು ವಿಜಯ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ ಎಂದು ಹೇಳಲಾಗಿದೆ. ವಿಜಯ್ ಅವರ ಹುಟ್ಟುಹಬ್ಬಕ್ಕೂ ತ್ರಿಶಾ ಅವರು ಶುಭಾಶಯ ಕೋರಲಿಲ್ಲ. ಇದರ ಬೆನ್ನಲ್ಲೇ ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯ್ ಅಕೌಂಟ್ ಅನ್‌ಫಾಲೋ ಮಾಡಿದ್ದಾರೆ. ವಿಷ್ಯ ಗೊತ್ತಾಗುತ್ತಿದ್ದಂತೆ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಹಾಗೂ ತ್ರಿಶಾ ನಡುವೆ ಬ್ರೇಕಪ್ ಆಗಿದೆ ಎನ್ನುವಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
ತ್ರಿಶಾ ದೂರವಾಗಿರುವುದಕ್ಕೆ ಕಾರಣವೇನು?
ತ್ರಿಶಾ ದೂರವಾಗಿರುವುದಕ್ಕೆ ಯಾಕೆ ಅನ್ನೋ ಚರ್ಚೆ ಶುರುವಾಗಿದೆ. ಕಳೆದ ಕೆಲವು ದಿನಗಳಿಂದ, ವಿಜಯ್ ತಮ್ಮ ಪತ್ನಿ ಸಂಗೀತಾ ಅವರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮತ್ತೆ ಕುಟುಂಬ ಜೀವನದತ್ತ ಗಮನ ಹರಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ವಿಜಯ್ ತನ್ನ ಪತ್ನಿಯೊಂದಿಗೆ ಮತ್ತೆ ಒಂದಾದ ಕಾರಣ, ಅವರ ವೈಯಕ್ತಿಕ ಜೀವನ ಮತ್ತು ರಾಜಕೀಯ ವೃತ್ತಿಜೀವನಕ್ಕೆ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ತ್ರಿಷಾ ವಿಜಯ್ ಅವರಿಂದ ದೂರವಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ತ್ರಿಶಾ ದೂರ ಆಗಿದ್ದಕ್ಕೆ ಫ್ಯಾನ್ಸ್‌ಗೆ ಖುಷಿ
ಇನ್ನು ತ್ರಿಶಾ ಮತ್ತು ವಿಜಯ್ ದೂರ ಆಗುತ್ತಿದ್ದಾರೆ ಅನ್ನೋ ಸುದ್ದಿ ಸಿಗುತ್ತಿದ್ದಂತೆ ವಿಜಯ್ ಫ್ಯಾನ್ಲ್ ಫುಲ್ ಹ್ಯಾಪಿಯಾಗಿದ್ದಾರೆ. ನಟಿ ತ್ರಿಶಾ ಅವರಿಗೆ ಈಗಾಲಾದರೂ ಬುದ್ಧಿ ಬಂತಲ್ಲ ಎಂದು ಹೇಳುತ್ತಿದ್ದಾರೆ. ವಿಜಯ್ ಅವರು ರಾಜಕೀಯವಾಗಿ ಬಲಾಢ್ಯರಾಗುತ್ತಿದ್ದರೂ ಸಹ ತ್ರಿಶಾ ಅವರೊಂದಿಗಿನ ಆತ್ಮೀಯತೆಯ ಕಾರಣಕ್ಕೆ ಟೀಕೆಗೆ ಗುರಿಯಾಗಿದ್ರು. ಅಲ್ಲದೆ ರಾಜಕೀಯವಾಗಿಯೂ ಇದು ಹಿನ್ನಡೆಗೆ ಕಾರಣವಾಗಿತ್ತು. ಇದೀಗ ಇಬ್ಬರೂ ದೂರವಾಗುತ್ತಿದ್ದಾರೆ ಎನ್ನುವ ವಿಷಯವು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

ನೋಡಿರಿ

