ಸೂರ್ಯವಂಶಿ ಜೆರ್ಸಿ ನಂ.3 – ವೈಭವ್ ಈಗ ಟೀಂ IND ಪ್ಲೇಯರ್
ಕನ್ನಡಿಗನ ಕೈಯಿಂದ್ಲೇ ಕನಸು ನನಸು!

ಸೂರ್ಯವಂಶಿ ಜೆರ್ಸಿ ನಂ.3 – ವೈಭವ್ ಈಗ ಟೀಂ IND ಪ್ಲೇಯರ್ಕನ್ನಡಿಗನ ಕೈಯಿಂದ್ಲೇ ಕನಸು ನನಸು!

ಅಂಡರ್ 19 ತಂಡದಲ್ಲಿ ಆಡುವಾಗ್ಲೇ ವಂಡರ್ ಕಿಡ್.. ಐಪಿಎಲ್​ ಟೈಮಲ್ಲಂತೂ ಬಾಸ್ ಬೇಬಿ.. ಭಾರತ ಎ ಟೀಮ್​ನಲ್ಲೂ ಆತ ಫೈರ್ ಬ್ರ್ಯಾಂಡ್.. ಜಸ್ಟ್ 15 ವರ್ಷಕ್ಕೇ ಕ್ರಿಕೆಟ್ ಜಗತ್ತಿನ ಸೆನ್ಸೇಷನಲ್ ಸ್ಟಾರ್ ಆಗಿ ಮೆರೀತಿರೋ ವೈಭವ್ ಸೂರ್ಯವಂಶಿ ಈಗ ಭಾರತದ ಪರ ಅಖಾಡಕ್ಕಿಳಿಯೋ ಟೈಂ ಬಂದಿದೆ. ಲಕ್ಷಾಂತರ ಯುವಕರ ಕನಸಾಗಿರೋ ಟೀಂ ಇಂಡಿಯಾ ಜೆರ್ಸಿ ವೈಭವ್ ಕೈ ಸೇರಿದೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ನಮ್ಮ ಕನ್ನಡಿಗನ ಕೈಯಿಂದಲೇ ವೈಭವ್ ಕನಸು ನನಸಾಗಿದೆ. ಇನ್ನೇನಿದ್ರೂ ಭಾರತದ ಪರ ವೈಭವ್ ಯುಗ ಆರಂಭವಾಗೋದಷ್ಟೇ ಬಾಕಿ.

ಇದನ್ನೂ ಓದಿ : ಸೂರ್ಯವಂಶಿಗೆ ಸೆಂಚುರಿ TROUBLE – ಬಿಗ್ ಮ್ಯಾಚ್.. 90+ ರನ್ಸ್ ಔಟ್ ಯಾಕೆ?

ಕೇವಲ 15 ವರ್ಷಕ್ಕೇ ಟೀಂ ಇಂಡಿಯಾಗೆ ಸೆಲೆಕ್ಟ್ ಆಗಿರೋ ವೈಭವ್ ಸೂರ್ಯವಂಶಿ ಈಗ ಮೆನ್ ಇನ್ ಬ್ಲ್ಯೂ ಜೆರ್ಸಿಯಲ್ಲಿ ಟೈಂ ಕೂಡ ಹತ್ತಿರದಲ್ಲೇ ಇದೆ. ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ-20ಐ ಸರಣಿಗೆ ಭಾರತದ ಸ್ಕ್ವಾಡ್​ನಲ್ಲಿ ಸ್ಥಾನ ಪಡೆದಿರೋ ವೈಭವ್ ಇದೇ ವಾರ ಭಾರತದ ಪರ ಡೆಬ್ಯೂ ಮಾಡೋ ಅವಕಾಶವೂ ಇದೆ. ಪಂದ್ಯಕ್ಕೂ ಮುನ್ನ ಅಧಿಕೃತವಾಗಿ ಭಾರತದ ಜೆರ್ಸಿ ಮತ್ತು ಜೆರ್ಸಿ ನಂಬರ್ ವೈಭವ್ ಕೈಸೇರಿದೆ.

ವೈಭವ್ ಸೂರ್ಯವಂಶಿ ಕೈ ಸೇರಿತು ನಂಬರ್ 3 ಜೆರ್ಸಿ!

ಭಾರತ ಅಷ್ಟೇ ಅಲ್ಲ ಇಡೀ ಕ್ರಿಕೆಟ್ ಜಗತ್ತೇ ವೈಭವ್ ಸೂರ್ಯವಂಶಿಯ ಆರ್ಭಟ ನೋಡೋಕೆ ಕಾಯ್ತಾ ಇದೆ.   ಇದೇ ಶುಕ್ರವಾರ ಐರ್ಲೆಂಡ್ ವಿರುದ್ಧ ಭಾರತದ ಟಿ-20ಐ ಸರಣಿ ಆರಂಭವಾಗಲಿದ್ದು ಈ ಪಂದ್ಯದಲ್ಲಿ ಸೂರ್ಯವಂಶಿ ಮೈದಾನಕ್ಕಿಳಿಯೋದು ಪಕ್ಕಾ ಆದಂತಿದೆ. ಭಾರತ ತಂಡದ ಅಧಿಕೃತ ಜೆರ್ಸಿ ಹಾಗೂ ಜೆರ್ಸಿ ನಂಬರ್ ವೈಭವ್ ಸೂರ್ಯವಂಶಿ ಕೈಸೇರಿದೆ. ಬಿಸಿಸಿಐ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಟೀಮ್ ಮ್ಯಾನೇಜ್ಮೆಂಟ್ ವೈಭವ್ ಸೂರ್ಯವಂಶಿಗೆ ಭಾರತ ಟಿ20ಐ ತಂಡದ ಜೆರ್ಸಿಯನ್ನು ನೀಡಿದೆ. ಬಿಸಿಸಿಐನಿಂದ ಸರ್ಪ್ರೈಸ್ ಬಾಕ್ಸ್‌ನಲ್ಲಿ ತಮ್ಮ ‘ಪ್ಲೇಯರ್ ನಂಬರ್ 532’ ಮತ್ತು ‘ಜೆರ್ಸಿ ನಂಬರ್ 3’ ಇರುವ ನೀಲಿ ಜೆರ್ಸಿಯನ್ನು ಪಡೆದಿದ್ದಾರೆ. ಈಮೂಲಕ ಟೀಮ್ ಇಂಡಿಯಾದಲ್ಲಿ ‘ಪ್ಲೇಯರ್ ನಂಬರ್ 532’  ಎಂಬ ಅಧಿಕೃತ ಸ್ಥಾನ ಸಿಕ್ಕಿದೆ. ಇನ್ನು ಮೈದಾನದಲ್ಲಿ ಅವರು 03 ಸಂಖ್ಯೆಯ ಜೆರ್ಸಿ ಧರಿಸಿ ಅಬ್ಬರಿಸಲಿದ್ದಾರೆ. ಜೆರ್ಸಿಯ ಹಿಂಭಾಗದಲ್ಲಿ ಅವರ ಹೆಸರನ್ನೂ ಪ್ರಿಂಟ್ ಮಾಡಲಾಗಿದೆ. ಟೀಮ್ ಇಂಡಿಯಾ ಜೆರ್ಸಿ ಕೈಸೇರುತ್ತಿದ್ದಂತೆ ಖುಷಿಯಲ್ಲಿ ತೇಲಾಡಿದ ವೈಭವ್ ಅಕ್ಷರಶಃ ಭಾವುಕರಾಗಿದ್ರು. ತಮ್ಮ ಮನದಾಳದ ಮಾತುಗಳನ್ನೂ ಹಂಚಿಕೊಂಡಿದ್ದಾರೆ. ಪದಗಳಲ್ಲಿ ಇದನ್ನು ಎಕ್ಸ್​ಪ್ಲೇನ್ ಮಾಡೋಕೆ ಆಗಲ್ಲ. ನಾನು ಮೊದಲ ದಿನ ಬ್ಯಾಟ್ ಹಿಡಿದು ಅಭ್ಯಾಸಕ್ಕೆ ಕ್ರಿಕೆಟ್ ಮೈದಾನಕ್ಕೆ ಹೋಗಲು ಆರಂಭಿಸಿದ ಕಾರಣ ಇಂದು ನೆರವೇರಿದೆ. ನನ್ನ ಫೀಲಿಂಗ್ಸ್ ಹೇಗಿದೆ ಅನ್ನೋದನ್ನ ಹೇಳಿಕೊಳ್ಳೋಕೂ ಆಗ್ತಿಲ್ಲ. ಟೀ-ಶರ್ಟ್ ನೋಡಿದ ಕ್ಷಣದಿಂದಲೇ ನಗು ನಿಲ್ಲಲಿಲ್ಲ. ಕೆಲವೊಮ್ಮೆ ನಿಮ್ಮ ಇಮ್ಯಾಜಿನ್​ನೂ ಮೀರಿದ ಸಂಗತಿಗಳು ನಡೆದಾಗ ಹೇಗೆ ರಿಯಾಕ್ಟ್ ಮಾಡಬೇಕು ಗೊತ್ತಾಗಲ್ಲ. ಈಗ ನನಗೆ ಆ ಅನುಭವ ಆಗಿದೆ ಎಂದಿದ್ದಾರೆ.  ಈ ಮೂಲಕ ಭಾರತದ ಜೆರ್ಸಿ ತೊಟ್ಟು ಆರ್ಭಟಿಸೋಕೆ ರೆಡಿಯಾಗಿದ್ದಾರೆ. ಇಲ್ಲಿ ಇನ್ನೊಂದು ವಿಚಾರ ಏನಂದ್ರೆ ವೈಭವ್ ಸೂರ್ಯವಂಶಿಗೆ ಕನಸಿನ ಜೆರ್ಸಿ ನೀಡಿದ್ದು ನಮ್ಮ ಕನ್ನಡಿಗ ರಾಘವೇಂದ್ರ ದಿವಗಿ..

ಬಿಸಿಸಿಐ ಶೇರ್ ಮಾಡಿರುವ ವಿಡಿಯೋದಲ್ಲಿ ಬಿಸಿಸಿಐ ಲೋಗೋ ಇರುವ ವಿಶೇಷ ಕಿಟ್ ಬಾಕ್ಸ್ ಅನ್ನು ಹೋಟೆಲ್ ಸಿಬ್ಬಂದಿ ಟ್ರಾಲಿಯ ಮೂಲಕ ವೈಭವ್ ಅವರ ರೂಮ್‌ಗೆ ತಲುಪಿಸುತ್ತಾರೆ. ಟೀಮ್‌ ಇಂಡಿಯಾದಲ್ಲಿ ಥ್ರೋಡೌನ್ ಸ್ಪೆಷಲಿಸ್ಟ್ ಆಗಿರುವ ನಮ್ಮ ಕರ್ನಾಟಕದ ಉತ್ತರ ಕನ್ನಡದ ಕುಮಟಾ ಮೂಲದ ರಾಘವೇಂದ್ರ ದಿವಗಿ ಅವ್ರು ವೈಭವ್‌ ಸೂರ್ಯವಂಶಿ ಅವರ ರೂಮ್‌ಗೆ ಜೆರ್ಸಿ ಇದ್ದ ಬಾಕ್ಸ್‌ಅನ್ನು ತಲುಪಿಸಿದ್ದಾರೆ. ಈ ವೇಳೆ ಸೂರ್ಯವಂಶಿ ರಘು ಅವ್ರ ಆಶೀರ್ವಾದ ಪಡೆಯುತ್ತಾರೆ. ನಂತ್ರ ಈ ಬಾಕ್ಸ್ ಅನ್ನು ತೆರೆದಿದ್ದು ಅವರ ಕನಸು ನನಸಾದ ಗಳಿಗೆಯಲ್ಲಿ ಸಂಭ್ರಮಿಸಿದ್ದಾರೆ. ಅಸಲಿಗೆ ವೈಭವ್​ಗೆ ನಿಜವಾದ ಚಾಲೆಂಜ್ ಕೂಡ ಇಲ್ಲಿಂದಲೇ ಆರಂಭ ಆಗಲಿದೆ.

ವೈಭವ್ ಸೂರ್ಯವಂಶಿಗೆ ಇನ್ಮುಂದೆ ಅಸಲಿ ಪ್ರಯಾಣ!

ವೈಭವ್ ಸೂರ್ಯವಂಶಿ ಈಗಾಗಲೇ ಸಾಕಷ್ಟು ಮಾದರಿಗಳಲ್ಲಿ ಸಿಡಿಲಬ್ಬರದ ಪ್ರದರ್ಶನ ನೀಡಿದ್ರೂ ಅಸಲಿ ಟಾಸ್ಕ್ ಇಲ್ಲಿಂದ ಸ್ಟಾರ್ಟ್ ಆಗುತ್ತೆ. 13 ವರ್ಷ ವಯಸ್ಸಿನಲ್ಲೇ ಬಿಹಾರ ರಾಜ್ಯ ತಂಡಕ್ಕೆ ಆಯ್ಕೆಯಾಗಿ 14 ವರ್ಷಕ್ಕೇ ಐಪಿಎಲ್​ಗೂ ಸೆಲೆಕ್ಟ್ ಆಗಿದ್ದ ಸಿಡಿಲಮರಿ ಈಗ 15 ವರ್ಷಕ್ಕೇ ಭಾರತದ ಪರವೂ ಆಡೋಕೆ ರೆಡಿಯಾಗಿದ್ದಾರೆ. ಹೀಗೆ ಆರಂಭದಲ್ಲಿ ಯಶಸ್ಸು ಸಿಕ್ಕ ಸಾಕಷ್ಟು ಆಟಗಾರರು ಮುಂದೆ ಐದಾರು ವರ್ಷಗಳಲ್ಲೇ ಹೇಳ ಹೆಸರಿಲ್ಲದಂತಾಗಿದ್ದಾರೆ. ಹೀಗಾಗಿ ಸೂರ್ಯವಂಶಿಯನ್ನ ಸರಿದಾರಿಯಲ್ಲಿ ಅವರ ತಂದೆಯೇ ನಡೆಸಬೇಕು ಅಂತಾ ಕೆಲ ಮಾಜಿ ಆಟಗಾರರೂ ಸಲಹೆ ನೀಡಿದ್ದಾರೆ. ಯಾಕಂದ್ರೆ ಪೃಥ್ವಿಶಾ, ವಿನೋದ್ ಕಾಂಬ್ಳೆ ಇವ್ರೆಲ್ಲಾ ಯಶಸ್ಸಿನ ಅಲೆಯಲ್ಲಿ ಆಟವನ್ನೇ ಮರೆತು ಆಮೇಲೆ ಪಶ್ಚಾತ್ತಾಪ ಪಟ್ಟವರು. ಪೃಥ್ವಿಶಾ ಅಂತೂ ಟೆಸ್ಟ್ ಕ್ರಿಕೆಟ್‌ನಲ್ಲಿ ಪದಾರ್ಪಣೆಯಲ್ಲಿಯೇ ಶತಕ ಹೊಡೆದಿದ್ರು. ಆದ್ರೆ ಯಶಸ್ಸಿನ ಅಮಲು ತಲೆಗೇರಿ ಎಲ್ಲವನ್ನೂ ಕಳ್ಕೊಂಡ್ರು. ಈಗ ಐಪಿಎಲ್​ನಲ್ಲೂ ಅವಕಾಶಗಳೇ ಇಲ್ಲ. ಆದ್ರೆ ಅವ್ರ ಜೊತೆಯಲ್ಲೇ ಬಂದ ಯಶಸ್ವಿ ಜೈಸ್ವಾಲ್, ಗಿಲ್ ಇವ್ರೆಲ್ಲಾ ಭಾರತ ತಂಡದಲ್ಲಿ ಈಗ ಸ್ಟಾರ್ ಪ್ಲೇಯರ್ಸ್. ಹೀಗಾಗಿ ಒಂದು ಸಲ ದಾರಿ ತಪ್ಪಿದ್ರೂ ವಾಪಸ್ ಅವಕಾಶ ಪಡೆಯೋದು ತುಂಬಾ ಕಷ್ಟ ಇದೆ. ಸೋ ಇಲ್ಲಿ ಅದ್ಭುತ ಪ್ರದರ್ಶನವೇ ಇರಲಿ ಅಥವಾ ಒಂದೆರಡು ಫೇಲ್ಯೂರ್​ಗಳೇ ಇರಲಿ ಸಮಚಿತ್ತದಿಂದ ಮುನ್ನಡೆಯಬೇಕಿದೆ. ಸೂರ್ಯವಂಶಿಗೆ ಈಗ ಇರೋ ಸವಾಲೂ ಕೂಡ ಇದೆ. ಆದ್ರೆ ಸೂರ್ಯವಂಶಿಯ ವರ್ತನೆ ನೋಡಿದವ್ರಿಗೆ ಆತನಲ್ಲಿ ಪ್ರತಿಭೆಯ ಜೊತೆ ಸಂಸ್ಕಾರವೂ ಇದೆ ಅನ್ನೋದನ್ನ ಸಾಬೀತು ಮಾಡಿದ್ದಾನೆ. ಹಿರಿಯರಿಗೆ ಗೌರವ ಕೊಡೋದನ್ನೂ ಕಲಿತಿದ್ದಾನೆ. ಹೀಗಾಗಿ ಕ್ರಿಕೆಟ್ ಲೋಕದಲ್ಲಿ ಮುಂದೊಂದು ದಿನ ದಿಗ್ಗಜರ ಸಾಲಿನಲ್ಲಿ ನಿಲ್ಲೋ ಎಲ್ಲಾ ಸಾಮರ್ಥ್ಯಗಳೂ ಆತನಲ್ಲಿದೆ.

Shantha Kumari

Leave a Reply

Your email address will not be published. Required fields are marked *