T-20 ವಿಶ್ವಕಪ್ ನಿಂದ PAK ಔಟ್ – 1 ಸೋಲು ಭಾರತಕ್ಕೆ ಬರೆ ಎಳೆಯುತ್ತಾ?
IND ಸೆಮೀಸ್ ಲೆಕ್ಕಾಚಾರ ಹೇಗಿದೆ?

ಮಹಿಳಾ ಟಿ-20 ವಿಶ್ವಕಪ್ ಅಖಾಡ ರಂಗೇರಿದೆ. ಆಲ್ರೆಡಿ ಸೆಮೀಸ್ ಲೆಕ್ಕಾಚಾರಗಳು ಸ್ಟಾರ್ಟ್ ಆಗಿದ್ದು, ಒಂದಷ್ಟು ತಂಡಗಳು ಟೂರ್ನಿಯಿಂದಲೇ ಹೊರಬಿದ್ದಿವೆ. ಮತ್ತೊಂದಷ್ಟು ತಂಡಗಳಲ್ಲಿ ಸೋಲು ಗೆಲುವಿನ ಕ್ಯಾಲ್ಕುಲೇಷನ್ ನಡೀತಿದೆ. ಇಂಟ್ರೆಸ್ಟಿಂಗ್ ಅಂದ್ರೆ ಪಾಕಿಸ್ತಾನ ತಂಡ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯೋ ಮೊದ್ಲೇ ಗೇಟ್ಪಾಸ್ ಸಿಕ್ಕಿದೆ. ಇತ್ತ ಭಾರತದ ಒಂದು ಸೋಲು ದೊಡ್ಡ ಆಘಾತವನ್ನೇ ನೀಡಿದೆ.
ಇದನ್ನೂ ಓದಿ : ಇಂಗ್ಲೆಂಡ್ನ ಕೌಂಟಿ ಚಾಂಪಿಯನ್ಶಿಪ್ ನಲ್ಲಿ ಮಾನವ್ ಅಬ್ಬರ – 5 ವಿಕೆಟ್ ಗೊಂಚಲು ಪಡೆದ ಸುತಾರ್
12 ತಂಡಗಳ ನಡುವಿನ ವಿಶ್ವಕಪ್ ವಾರ್ನಲ್ಲಿ ತಲಾ 6 ತಂಡಗಳನ್ನ ಎ ಮತ್ತು ಬಿ ಗುಂಪುಗಳಾಗಿ ಡಿವೈಡ್ ಮಾಡಿದ್ದು ಒಂದೊಂದು ಗ್ರೂಪಲ್ಲಿ 6 ಟೀಮ್ಸ್ ಇವೆ. ಪ್ರಸ್ತುತ ಎಲ್ಲಾ 12 ತಂಡಗಳು ತಲಾ 3 ಪಂದ್ಯಗಳನ್ನು ಆಡಿವೆ. ಸೋ ಗ್ರೂಪ್ ಸ್ಟೇಜಲ್ಲಿ ಎಲ್ಲಾ ಟೀಮ್ಸ್ಗೆ 2 ಪಂದ್ಯಗಳು ಬಾಕಿ ಇವೆ. ಈಗ ಸೆಮಿಫೈನಲ್ನ ರೇಸ್ ಸ್ಟಾರ್ಟ್ ಆಗಿದ್ದು ಮುಂದಿನ 2 ಪಂದ್ಯಗಳೇ ಗೇಮ್ ಡಿಸೈಡರ್ ಆಗಲಿವೆ. ಮತ್ತೊಂದೆಡೆ ಮೂರು ತಂಡಗಳು ಅಧಿಕೃತವಾಗಿ ಟೂರ್ನಿಯಿಂದಲೇ ಹೊರ ಬಿದ್ದಿವೆ.
ಹ್ಯಾಟ್ರಿಕ್ ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದ ಪಾಕ್!
ಪ್ರಸ್ತುತ ಟೂರ್ನಿಯಲ್ಲಿ ಮೂರು ತಂಡಗಳು ಅಧಿಕೃತವಾಗಿ ಗೇಟ್ ಪಾಸ್ ಪಡೆದಿವೆ. ಎ ಗ್ರೂಪಲ್ಲಿ ಪಾಕಿಸ್ತಾನ ಹಾಗೂ ನೆದರ್ಲ್ಯಾಂಡ್ಸ್ ತಂಡಗಳು ಸತತ ಮೂರು ಪಂದ್ಯಗಳನ್ನ ಸೋತ್ರೆ ಬಿ ಗ್ರೂಪಲ್ಲಿ ಐರ್ಲೆಂಡ್ ತಂಡ ಅಧಿಕೃತವಾಗಿಔಟ್ ಆಗಿದೆ. ಉಳಿದ ಒಂಬತ್ತು ತಂಡಗಳಿಗೆ ಇನ್ಮುಂದಿನ ಪ್ರತೀ ಮ್ಯಾಚ್, ಒಂದೊಂದು ರನ್ಸ್ ಕೂಡ ಮುಖ್ಯವಾಗುತ್ತೆ. ಸೆಮಿಫೈನಲ್ ತಲುಪಲು ಭಾರತ ತನ್ನ ಉಳಿದಿರುವ ಎರಡೂ ಪಂದ್ಯಗಳನ್ನು ಗೆಲ್ಲಬೇಕಿದೆ. ಹರ್ಮನ್ಪ್ರೀತ್ ಕೌರ್ ನಾಯಕತ್ವದ ಭಾರತ ಈಗಾಗಲೇ ಎರಡು ಮ್ಯಾಚ್ ಗೆದ್ದು ಒಂದು ಪಂದ್ಯ ಸೋತಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಲೀಗ್ ಹಂತದಲ್ಲಿ ತನ್ನ ಕೊನೆಯ ಎರಡು ಪಂದ್ಯಗಳನ್ನು ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಭಾರತ ಎರಡಕ್ಕೆ ಎರಡೂ ಪಂದ್ಯಗಳನ್ನು ಗೆದ್ದರೆ ನೇರವಾಗಿ ಸೆಮಿಫೈನಲ್ಗೇರಲಿದೆ. ಇದರಲ್ಲಿ ಒಂದು ಪಂದ್ಯ ಸೋತರೂ ಮುಂದಿನ ಜರ್ನಿಗೆ ಬೇರೆ ತಂಡಗಳ ಸೋಲು ಗೆಲುವಿನ ಮೇಲೆ ಡಿಪೆಂಡ್ ಆಗ್ಬೇಕಾಗುತ್ತೆ. ಇನ್ನು ಗ್ರೂಪ್ ಎನಲ್ಲಿರೋ ಆಸ್ಟ್ರೇಲಿಯಾ ಮೂರು ಪಂದ್ಯಗಳನ್ನ ಗೆದ್ದಿರೋದ್ರಿಂದ ಮುಂದಿನ 2 ಪಂದ್ಯಗಳಲ್ಲಿ ಒಂದು ಗೆದ್ರು ಸೆಮೀಸ್ಗೆ ಕಾಲಿಡಲಿದೆ. ಇತ್ತ ಗ್ರೂಪ್ ಬಿನಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಮಹಿಳಾ ತಂಡಗಳು ಆಡಿರುವಂಥ ಮೂರಕ್ಕೆ ಮೂರೂ ಮ್ಯಾಚ್ ಗೆದ್ದು ಟೇಬಲ್ ಟಾಪರ್ಸ್ ಆಗಿದ್ದಾರೆ. ಮುಂದಿನ 2 ಪಂದ್ಯಗಳಲ್ಲಿ 1 ಮ್ಯಾಚ್ ಗೆದ್ರು ಸೆಮೀಸ್ಗೆ ಬರ್ತಾರೆ. ಉಳಿದಂತೆ ಸೌತ್ ಆಫ್ರಿಕಾ ಹಾದಿ ಕೂಡ ಕ್ಲಿಯರ್ ಇದೆ. ಮುಂದಿನ ಎರಡೂ ಪದ್ಯಗಳನ್ನ ಗೆದ್ರೆ ಸೆಮಿಸ್ ಟಿಕೆಟ್ ಸಿಗುತ್ತೆ. ಉಳಿದಂತೆ ಬಾಂಗ್ಲಾ, ನ್ಯೂಜಿಲೆಂಡ್, ಸ್ಕಾಟ್ಯಾಂಡ್, ಶ್ರೀಲಂಕಾ ತಂಡಗಳ ಹಾದಿ ಕಠಿಣವಾಗಿದೆ. ಒಟ್ನಲ್ಲಿ ಮಹಿಳಾ ಟಿ-20 ವಿಶ್ವಕಪ್ನಲ್ಲಿ ಭಾರತ ಇದುವರೆಗೂ ಕಪ್ ಗೆದ್ದಿಲ್ಲ. ಸೋ ಈ ಸಲ ಚೊಚ್ಚಲ ಟ್ರೋಫಿಗೆ ಮುತ್ತಿಡಲಿ ಅಂತಾ ಭಾರತೀಯರೆಲ್ಲಾ ಕಾಯ್ತಿದ್ದಾರೆ. ಜೂನ್ 25ಕ್ಕೆ ಬಾಂಗ್ಲಾ ವಿರುದ್ಧ ಜೂನ್ 28ಕ್ಕೆ ಆಸ್ಟ್ರೇಲಿಯಾ ವಿರುದ್ಧ ಗೆದ್ರೆ ಸೆಮೀಸ್ ಟಿಕೆಟ್ ಸಿಗಲಿದ್ದು ಟ್ರೋಫಿ ಗೆಲುವಿಗೆ ಹತ್ತಿರ ಆಗ್ತಾರೆ.

ನೋಡಿರಿ

