ಗರ್ಭಿಣಿ ಸಮಂತಾರನ್ನು ಸತ್ಕರಿಸಿದ ಚಿರಂಜೀವಿ – ಮೆಗಾಸ್ಟಾರ್ ಮನೆಯಲ್ಲಿ ನಟಿಗೆ ವಿಶೇಷ ಉಡುಗೊರೆ

ಗರ್ಭಿಣಿ ಸಮಂತಾರನ್ನು ಸತ್ಕರಿಸಿದ ಚಿರಂಜೀವಿ – ಮೆಗಾಸ್ಟಾರ್ ಮನೆಯಲ್ಲಿ ನಟಿಗೆ ವಿಶೇಷ ಉಡುಗೊರೆ

ಎರಡನೇ ಮದುವೆಯಾದ ಮೇಲೆ ನಟಿ ಸಮಂತಾಗೆ ಅದೃಷ್ಟ ಒಲಿದಿದೆ. ಸಮಂತಾ ನಟನೆಯ ಮಾ ಇಂಟಿ ಬಂಗಾರಂ ಸಿನಿಮಾ ಸೂಪರ್ ಹಿಟ್ ಆಗಿದೆ. ಜೊತೆಗೆ ಸಮಂತಾ ತಾಯಿಯಾಗುತ್ತಿದ್ದಾರೆ. ಇನ್ನು ಮೆಗಾಸ್ಟಾರ್ ಚಿರಂಜೀವಿ ಸಮಂತಾರನ್ನು ಮನೆಗೆ ಆಹ್ವಾನಿಸಿ ಸತ್ಕರಿಸಿದ್ದಾರೆ.

ಇದನ್ನೂ ಓದಿ:ಮಿಂಚು ಸಿಕ್ಕಿದ ಮೇಲೆ ಬದಲಾದ ಗೌತಮ್ ಭೂಮಿಕಾ – ಮಹಿಮಾ ಕಷ್ಟಕ್ಕೆ ಆಗಲ್ವಾ ಅಣ್ಣ ಅತ್ತಿಗೆ?

ತೆಲುಗು ಚಿತ್ರರಂಗದಲ್ಲಿ ಈಗ ನಟಿ ಸಮಂತಾ ಅವರದ್ದೇ ಮಾತು. ಎರಡನೇ ಮದುವೆಯಾದ ಮೇಲೆ ಸಮಂತಾ ಅದೃಷ್ಟದ ಬಾಗಿಲು ತೆರೆದಿದೆ. ಇದೀಗ ಮೆಗಾಸ್ಟಾರ್ ಚಿರಂಜೀವಿ ಕೂಡಾ ನಟಿ ಸಮಂತಾ ದಂಪತಿಯನ್ನು ಮನೆಗೆ ಆಹ್ವಾನಿಸಿ ಸತ್ಕರಿಸಿದ್ದಾರೆ. ನಟಿ ಸಮಂತಾ ಅಭಿನಯದ ಮಾ ಇಂಟಿ ಬಂಗಾರಂ ತೆಲುಗು ಚಿತ್ರರಂಗದಲ್ಲಿ ಸೂಪರ್ ಹಿಟ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಜೊತೆಗೆ ನಟಿ ಸಮಂತಾ ತಾಯಿಯಾಗುತ್ತಿದ್ದಾರೆ ಎಂಬ ಸಿಹಿ ಸುದ್ದಿ ಕೂಡಾ ಅಭಿಮಾನಿಗಳಿಗೆ ಸಿಕ್ಕಿದೆ.

ಇದೀಗ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಚಿರಂಜೀವಿ ನಟಿ ಸಮಂತಾ ಅವರ ಸಿನಿಮಾ ನೋಡಿ ಮೆಚ್ಚಿಕೊಂಡ ಮನೆಗೆ ಆಹ್ವಾನಿಸಿದ್ದಾರೆ. ಇಡೀ ಕುಟುಂಬವನ್ನು ಮನೆಗೆ ಆಹ್ವಾನಿಸಿದ್ದಾರೆ ಚಿರಂಜೀವಿ. ತಾಯಿ ಆಗಲಿರುವ ಸಮಂತಾ ಅವರಿಗೆ ವಿಶೇಷ ಉಡುಗೊರೆಗಳನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಸಮಂತಾ ಮೆಗಾಸ್ಟಾರ್ ದಂಪತಿಯಿಂದ ಆಶೀರ್ವದ ಪಡೆದಿದ್ದಾರೆ.ಸಮಂತಾ ಅವರಿಗೆ ಸೀರೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಸಮಂತಾ ಅವರಿಗೆ ಶಂಖವೊಂದನ್ನು ಸಹ ಚಿರಂಜೀವಿ ಮತ್ತು ಅವರ ಪತ್ನಿ ಸುರೇಖಾ ನೀಡಿದ್ದಾರೆ. ಚಿತ್ರಗಳನ್ನು ಖುದ್ದು ಚಿರಂಜೀವಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಮಂತಾಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಜೊತೆಗೆ ಸಿನಿಮಾ ಬಗ್ಗೆ ಹೊಗಳಿದ ಮೆಗಾಸ್ಟಾರ್ ಚಿರಂಜೀವಿ, ಮಾ ಇಂಟಿ ಬಂಗಾರಂ ಸಿನಿಮಾ ಬಹಳ ಆಸಕ್ತಿಕರ ಎನಿಸಿತು. ಕೌಟುಂಬಿಕೆ ಕತೆಯನ್ನು ಆಕ್ಷನ್, ಭಾವನೆಗಳು, ಸ್ತ್ರೀಪರ ನಿಲುವುಗಳನ್ನು ಹಾಸ್ಯದ ಲೇಪನದೊಂದಿಗೆ ನಿರ್ದೇಶಕಿ ನಂದಿನಿ ರೆಡ್ಡಿ ಅವರು ತೆರೆಗೆ ತಂದಿದ್ದಾರೆ. ಸಮಂತಾ ನಟನೆ ಚೆನ್ನಾಗಿದೆ, ಮುಖ್ಯವಾಗಿ ಅವರು ಸೀರೆಯುಟ್ಟು ಮಾಡುವ ಆಕ್ಷನ್ ದೃಶ್ಯಗಳು ಅದ್ಭುತವಾಗಿವೆ. ಈ ರೀತಿಯ ವೈವಿಧ್ಯಮಯ ಸ್ತ್ರೀ ಪ್ರಧಾನ ಸಿನಿಮಾಗಳು ತೆಲುಗು ಚಿತ್ರರಂಗಕ್ಕೆ ಅವಶ್ಯಕ. ಈ ಸಿನಿಮಾದ ಗೆಲುವಿಗೆ ಸಮಂತಾ, ನಂದಿನಿ, ರಾಜ್ ಇನ್ನೂ ಕೆಲ ಪ್ರಮುಖರಿಗೆ ಅಭಿನಂದನೆಗಳು. ಹಾಗೆಯೇ ಜೀವನದಲ್ಲಿ ಹೊಸ ಅಧ್ಯಾಯಕ್ಕೆ ಕಾಲಿರಿಸುತ್ತಿರುವ ಸಮಂತಾ ಮತ್ತು ರಾಜ್ ದಂಪತಿಗಳಿಗೆ ಅಭಿನಂದನೆಗಳು’ ಎಂದು ಚಿರಂಜೀವಿ ಟ್ವೀಟ್ ಮಾಡಿದ್ದಾರೆ.

Kishor KV

Leave a Reply

Your email address will not be published. Required fields are marked *