ಮಿಂಚು ಸಿಕ್ಕಿದ ಮೇಲೆ ಬದಲಾದ ಗೌತಮ್ ಭೂಮಿಕಾ – ಮಹಿಮಾ ಕಷ್ಟಕ್ಕೆ ಆಗಲ್ವಾ ಅಣ್ಣ ಅತ್ತಿಗೆ?

ಅಮೃತಧಾರೆ ಸೀರಿಯಲ್ನಲ್ಲಿ ಗೌತಮ್ ಮತ್ತು ಭೂಮಿಕಾ ದಂಪತಿ ಸಂಭ್ರಮದಲ್ಲಿದ್ದಾರೆ. ಮಕ್ಕಳ ಜೊತೆ ನಮ್ಮ ಸಂಸಾರ ಆನಂದ ಸಾಗರ ಅಂತಾ ನಲಿಯುತ್ತಿದ್ದಾರೆ. ಆದರೆ, ಕೊಟ್ಟ ಮಾತು ನೆನಪು ಹೋಯಿತಾ ಎಂದು ವೀಕ್ಷಕರು ಭೂಮಿಕಾ ಬಳಿ ಪ್ರಶ್ನೆ ಮಾಡುತ್ತಿದ್ದಾರೆ.
ಮಿಂಚು ತಮ್ಮ ಸ್ವಂತ ಮಗಳು ಎಂದು ತಿಳಿದ ಬಳಿಕ ಭೂಮಿಕಾ ಮತ್ತು ಗೌತಮ್ ಖುಷಿಗೆ ಪಾರವೇ ಇಲ್ಲ. ಮಿಂಚು ಸಿಕ್ಕ ಖುಷಿಯಲ್ಲಿ ಭೂಮಿಕಾ ಮತ್ತು ಗೌತಮ್ ಸಂಭ್ರಮ ಮುಗಿಲು ಮುಟ್ಟಿದೆ. ಮಗಳ ಆರೈಕೆಯಲ್ಲಿ ಅಪ್ಪ ಅಮ್ಮ ತಲ್ಲೀನರಾಗಿದ್ದಾರೆ. ಆದರೆ, ಕೊಟ್ಟ ಮಾತು ತಪ್ಪಿದ್ದು ಯಾಕೆ ಅನ್ನೋ ಪ್ರಶ್ನೆ ವೀಕ್ಷಕರು ಮುಂದಿಟ್ಟಿದ್ದಾರೆ. ಅದೇನೆಂದರೆ, ಈಗಾಗಲೇ ಮಿಂಚುವನ್ನು ಮಹಿಮಾಗೆ ದತ್ತು ಕೊಡಲು ಗೌತಮ್ ಮತ್ತು ಭೂಮಿಕಾ ಒಪ್ಪಿಕೊಂಡಿದ್ದರು. ದತ್ತು ಕೊಡಲು ಮನಸ್ಸು ಇರಲಿಲ್ಲವಾದರೂ ಕೊನೆಗೆ ಮಿಂಚುವಿನ ಮನಸ್ಥಿತಿಗಿಂತಲೂ ಮಹಿಮಾನೇ ಮುಖ್ಯ ಎಂದುಕೊಂಡು ಒಪ್ಪಿಗೆ ನೀಡಿದ್ದರು. ಇದೀಗ ಮಿಂಚು ನಮ್ಮದೇ ಸ್ವಂತ ಮಗಳು ಎಂದು ತಿಳಿದಾಕ್ಷಣ ಭೂಮಿಕಾ, ನಿನ್ನನ್ನು ಎಲ್ಲಿಯೂ ಕಳಿಸಲ್ಲ, ಯಾರ ಮನೆಗೂ ಕಳಿಸಲ್ಲ ಎಂದಿದ್ದಾಳೆ. ಇದರ ಅರ್ಥ ಮಿಂಚು ಬೇರೆಯವರ ಮಗಳು ಎಂದಾಗ ಕಳಿಸಲು ರೆಡಿ ಇದ್ದಳು ಅನ್ನೋದಾ ಎಂಬ ಪ್ರಶ್ನೆ ಎದುರಾಗಿದೆ.
ಮತ್ತೊಂದೆಡೆ ಮಿಂಚು ಸ್ವಂತ ಮಗಳು ಎಂದು ಗೊತ್ತಾದ ದಿನದಿಂದ ಗೌತಮ್ ಖುಷಿ ಬೇರೆ ಲೆವಲ್ನಲ್ಲಿದೆ. ಮಗಳು ಮಲಗಿದಾಗ ನೇಲ್ ಪಾಲಿಷ್ ಹಚ್ಚುವುದರಿಂದ ಹಿಡಿದು ವಿವಿಧ ರೀತಿಯಲ್ಲಿ ಮಗಳ ಖುಷಿಗಾಗಿಯೇ ಎಲ್ಲವನ್ನೂ ಮಾಡುತ್ತಿದ್ದಾನೆ. ಎಲ್ಲಿಯೋ ಸಿಕ್ಕ ಬಾಲಕಿಯನ್ನು ಸ್ವಂತ ಮಗಳಂತೆ ಸಾಕಿದ್ದು ಸತ್ಯವೇ. ಈಗ ಸ್ವಂತ ಮಗಳೆಂದು ಗೊತ್ತಾದ ಮೇಲೆ ಆ ಪ್ರೀತಿ ಇನ್ನೊಂದು ಲೆವಲ್ಗೆ ಹೋಗಿದ್ದು ಕೂಡಾ ಸ್ವಾಭಾವಿಕವೇ. ಆದೆರ, ಈಗ ಗೌತಮ್ ಗೆ ತಂಗಿ ಆರೋಗ್ಯ, ತಂಗಿಯ ಮನಸ್ಥಿತಿ ಮುಖ್ಯವಾಗುವುದಿಲ್ಲವೇ ಅನ್ನೋ ಪ್ರಶ್ನೆಯನ್ನು ವೀಕ್ಷಕರು ಮುಂದಿಟ್ಟಿದ್ದಾರೆ.

ನೋಡಿರಿ

