ಇಂಗ್ಲೆಂಡ್ನ ಕೌಂಟಿ ಚಾಂಪಿಯನ್ಶಿಪ್ ನಲ್ಲಿ ಮಾನವ್ ಅಬ್ಬರ – 5 ವಿಕೆಟ್ ಗೊಂಚಲು ಪಡೆದ ಸುತಾರ್

ಭಾರತದ ಯುವ ಸ್ಪಿನ್ನರ್ ಮಾನವ್ ಸುತಾರ್ ಇಂಗ್ಲೆಂಡ್ನ ಕೌಂಟಿ ಚಾಂಪಿಯನ್ಶಿಪ್ ನಲ್ಲಿ ಅಬ್ಬರಿಸಿದ್ದಾರೆ. ವಾರ್ವಿಕ್ಷೈರ್ ಪರ ಸೋಮರ್ಸೆಟ್ ವಿರುದ್ಧ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ.ಕೌಂಟಿ ಕ್ರಿಕೆಟ್ನಲ್ಲಿ ಎರಡು ಪಂದ್ಯಗಳನ್ನು ಆಡಲು ಒಪ್ಪಂದ ಮಾಡಿಕೊಂಡಿದ್ದ ಸುತಾರ್, ಸೋಮರ್ಸೆಟ್ ತಂಡದ ಪರ ತಾವಾಡಿದ ಎರಡನೇ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ 46.5 ಓವರ್ಗಳಲ್ಲಿ 100 ರನ್ಗಳಿಗೆ 5 ವಿಕೆಟ್ಗಳನ್ನು ಪಡೆದರು. ಒಟ್ಟಾರೆ ಪಂದ್ಯದಲ್ಲಿ ಏಳು ವಿಕೆಟ್ಗಳನ್ನು ಪಡೆದರು. ಮೊದಲ ಇನ್ನಿಂಗ್ಸ್ನಲ್ಲಿ 18 ಓವರ್ಗಳಲ್ಲಿ 50 ರನ್ಗಳಿಗೆ 2 ವಿಕೆಟ್ಗಳನ್ನು ಪಡೆದಿದ್ದರು.
ಈ ತಿಂಗಳ ಆರಂಭದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್ ಗೊಂಚಲು ಪಡೆದು ಭಾರತಕ್ಕೆ ಭವಿಷ್ಯದ ಬೌಲರ್ ಎನಿಸಿಕೊಂಡಿದ್ದರು. ಎಡಗೈ ಸ್ಪಿನ್ನರ್ ಆಗಿರುವ ಅವರು ಈಗ ಎರಡು ಪಂದ್ಯಗಳಿಂದ 11 ವಿಕೆಟ್ಗಳನ್ನು ಪಡೆಯುವ ಮೂಲಕ ತಮ್ಮ ಅಲ್ಪಾವಧಿಯ ಇಂಗ್ಲಿಷ್ ವೃತ್ತಿಜೀವನವನ್ನು ಕೊನೆಗೊಳಿಸಲಿದ್ದಾರೆ. ಯಾರ್ಕ್ಷೈರ್ ವಿರುದ್ಧದ ವಾರ್ವಿಕ್ಷೈರ್ನ ಚೊಚ್ಚಲ ಪಂದ್ಯದಲ್ಲಿ ಅವರು 4 ವಿಕೆಟ್ಗಳನ್ನು ಕಬಳಿಸಿದ್ದರು.
ಇದನ್ನೂ ಓದಿ: ಜೈಸ್ವಾಲ್ ಔಟ್.. ಕೊಹ್ಲಿ ಕಂ ಬ್ಯಾಕ್ – KL & ಕಿಶನ್ ವಿಕೆಟ್ ಕೀಪರ್ ವಾರ್
ಟೌಂಟನ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ, ಸೋಮರ್ಸೆಟ್ ಮೊದಲ ಇನ್ನಿಂಗ್ಸ್ನಲ್ಲಿ 208 ರನ್ಗಳಿಗೆ ಆಲೌಟ್ ಆಯಿತು, ಆಸ್ಟ್ರೇಲಿಯಾದ ಟೆಸ್ಟ್ ಆಲ್ರೌಂಡರ್ ಬ್ಯೂ ವೆಬ್ಸ್ಟರ್ 23 ರನ್ಗಳಿಗೆ 4 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್ನಲ್ಲಿ ಸುತಾರ್ ಅವರ ಎರಡು ವಿಕೆಟ್ಗಳು ಪಡೆದರು. ಹಿಂದಿನ ಪಂದ್ಯದಲ್ಲಿ ಮೂರು ಬೌಂಡರಿಗಳು ಮತ್ತು ಎರಡು ಸಿಕ್ಸರ್ಗಳು ಸೇರಿದಂತೆ 33 ಮತ್ತು 37 ರನ್ ಗಳಿಸಿದ ನಂತರ ಸುತಾರ್ ಎರಡನೇ ಪಂದ್ಯದಲ್ಲಿ 28 ರನ್ ಗಳಿಸಿದರು.

ನೋಡಿರಿ

