ಪ್ರೇಮಿ ಜೊತೆ ಸೇರಿ ತಂದೆ, ತಾಯಿ, ತಂಗಿಯ ಬರ್ಬರ ಹತ್ಯೆ – ಪಾಪಿ ಮಗಳಿಂದಲೇ ಭೀಕರ ಕೃತ್ಯ

ಪ್ರೇಮಿ ಜೊತೆ ಸೇರಿ ತಂದೆ, ತಾಯಿ, ತಂಗಿಯ ಬರ್ಬರ ಹತ್ಯೆ – ಪಾಪಿ ಮಗಳಿಂದಲೇ ಭೀಕರ ಕೃತ್ಯ

ಸೋಮವಾರ ರಾತ್ರಿ ಬೆಂಗಳೂರು ಬೆಚ್ಚಿ ಬೀಳುವಂತಾ ಘಟನೆ ನಡೆದಿದೆ. ಪಾಪಿ ಮಗಳು ತನ್ನ ಪ್ರಿಯಕರ ಜೊತೆ ಸೇರಿ ಇಡೀ ಕುಟುಂಬವನ್ನೇ ಸರ್ವನಾಶ ಮಾಡಿದ್ದಾಳೆ. ಅದು ಕೂಡಾ ತನ್ನ ಹೆತ್ತ ತಂದೆ ತಾಯಿ ಮತ್ತು ಒಡಹುಟ್ಟಿದ ತಂಗಿಯನ್ನ ಭೀಕರವಾಗಿ ಕೊಲೆ ಮಾಡಿದ್ದಾಳೆ.

ಇದನ್ನೂ ಓದಿ:ಮಸಣವಾದ ಮದುವೆ ಮನೆ – ಡೆತ್ ನೋಟ್ ಬರೆದಿಟ್ಟು ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಪ್ರೀತಿಗಾಗಿ ಪ್ರಾಣಬಿಟ್ಟವರನ್ನು ನೋಡಿದ್ದೇವೆ. ಇಲ್ಲಿ ತನ್ನ ಪ್ರೀತಿಗೆ ಅಡ್ಡಿ ಮಾಡುತ್ತಾರೆ ಎಂಬ ಕಾರಣಕ್ಕೆ ಹೆತ್ತ ತಂದೆ ತಾಯಿನ್ನು ಮಗಳೇ ತನ್ನ ಪ್ರಿಯಕರನ ಜೊತೆ ಸೇರಿ ಹತ್ಯೆ ಮಾಡಿದ್ದಾಳೆ. ಕೆಆರ್ ಪುರದ ಶೀಗೆಹಳ್ಳಿಯಲ್ಲಿ ಕಳೆದ ರಾತ್ರಿ (ಸೋಮವಾರ) ಈ ಭೀಕರ ಕೊಲೆ ನಡೆದಿದೆ. ಬಾಯ್​ಫ್ರೆಂಡ್ ಜೊತೆ ಸೇರಿ ತಂದೆ-ತಾಯಿ ಹಾಗೂ ತಂಗಿಯನ್ನೇ ಬರ್ಬರವಾಗಿ ಕೊಂದಿದ್ದಾಳೆ ಪಾಪಿ ಮಗಳು ಶ್ವೇತ. 55 ವರ್ಷದ ಸೋಮಸುಂದರ್, 48 ವರ್ಷದ ಮುತ್ತುಲಕ್ಷ್ಮಿ ಮತ್ತು 20 ವರ್ಷದ ಮಗಳು ಸುಪ್ರಿಯಾ ಕೊಲೆಯಾದ ದುರ್ದೈವಿಗಳು.

ಶ್ವೇತಾ ಪ್ರಿಯಕರ ಕೆನತ್  ಜೊತೆ ಲಿವ್ ಇನ್ ರಿಲೇಶನ್ ಶಿಪ್‌ ನಲ್ಲಿದ್ದಳಂತೆ. ಇದಕ್ಕೆ ಶ್ವೇತಾ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಂತೆ. ಇದೇ ವಿಚಾರಕ್ಕೆ ಗಲಾಟೆ ನಡೆದಿದ್ದು, ಬಾಯ್ ಫ್ರೆಂಡ್ ಜೊತೆ ಸೇರಿ ತಂದೆ ತಾಯಿ ಹಾಗೂ ತಂಗಿಯನ್ನು ಕೆನತ್ ಮತ್ತು  ಶ್ವೇತಾ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸೀಗಹಳ್ಳಿಯ ಢಾಮ್ನಿಕ್ ಲೇಔಟ್ ಅಪಾರ್ಟ್‌ಮೆಂಟ್ ನಲ್ಲಿ ಕೊಲೆ ನಡೆದಿದೆ. ಇಲ್ಲಿಯೇ ಶ್ವೇತಾ, ಕೆನತ್ ಲಿವ್ ಇನ್ ರಿಲೇಶನ್ ಶಿಪ್​ ನಲ್ಲಿದ್ದರಂತೆ. ಮಗಳಿಗೆ ಬುದ್ದಿವಾದ ಹೇಳಿ ಮನೆಗೆ ಕರೆ ತರಲು ಪೋಷಕರು ಬಂದಿದ್ದರು. ಈ ವೇಳೆ ಪೋಷಕರು ಹಾಗೂ ಮಗಳು ಬಾಯ್ ಫ್ರೆಂಡ್ ನಡುವೆ ಗಲಾಟೆ ಆಗಿದೆ. ಆಗ ಶ್ವೇತಾ ಮತ್ತು ಕೆನತ್ ಮೂವರಿಗೂ ಚಾಕುವಿನಿಂದ ಇರಿದಿದ್ದಾರೆ. ಮುತ್ತುಲಕ್ಷ್ಮೀ ಹಾಗೂ ಸುಪ್ರಿಯಾ ಮನೆಯಲ್ಲಿ ಕುಸಿದು ಬಿದ್ದ ಸಾವನ್ನಪ್ಪಿದ್ದಾರೆ. ಅದ್ರೆ ರಕ್ತದ ಮಡುವಿನಲ್ಲಿದ್ದ ಸೋಮಸುಂದರ್ ಎದ್ದು ಮನೆಯಿಂದ ಹೊರ ಬಂದಿದ್ದಾರೆ. ಈ ವೇಳೆ ಸ್ಥಳೀಯರಿಗೆ ಗೊತ್ತಾಗಿದೆ. ಮೆಟ್ಟಿಲುಗಳ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸೋಮಸುಂದರ್  ಆಸ್ಪತ್ರೆಗೆ ಸಾಗಿಸೋ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಕೆ ಆರ್ ಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವೇತಾ ಮತ್ತು ಕೆನತ್ ಪರಾರಿಯಾಗಿದ್ದು, ಇಬ್ಬರಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.

Sulekha

Leave a Reply

Your email address will not be published. Required fields are marked *