ಜೈಸ್ವಾಲ್ ಔಟ್.. ಕೊಹ್ಲಿ ಕಂ ಬ್ಯಾಕ್ – KL & ಕಿಶನ್ ವಿಕೆಟ್ ಕೀಪರ್ ವಾರ್
ಆಂಗ್ಲರ ಬೇಟೆಗೆ ಟ್ವಿಸ್ಟ್ ಕೊಟ್ಟ BCCI

ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಮೂರಕ್ಕೆ ಮೂರೂ ಮ್ಯಾಚ್ಗಳನ್ನ ಗೆದ್ದಿರೋ ಟೀಂ ಇಂಡಿಯಾ ನೆಕ್ಸ್ಟ್ ಮಂತ್ ಇಂಗ್ಲೆಂಡ್ ವಿರುದ್ಧವೂ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಈ ಸರಣಿಗೆ ಟೀಂ ಕೂಡ ಅನೌನ್ಸ್ ಆಗಿದ್ದು ಬಿಸಿಸಿಐ ಬಿಗ್ ಟ್ವಿಸ್ಟ್ ನೀಡಿದೆ. ಆಟಗಾರರ ಇನ್ ಌಂಡ್ ಔಟ್ ವಿಚಾರದಲ್ಲಿ ಒಂದಷ್ಟು ಸರ್ಜರಿಗಳೂ ಆಗಿದೆ. ಇದಕ್ಕಿಂತ ಮುಖ್ಯವಾಗಿ ವೀಕೆಟ್ ಕೀಪರ್ ಬ್ಯಾಟರ್ ಯಾರು ಅನ್ನೋ ಚರ್ಚೆಯೂ ಶುರುವಾಗಿದೆ.
ಇದನ್ನೂ ಓದಿ : ಲಂಕೆಯನ್ನೇ ಸುಟ್ಟ ಸೂರ್ಯವಂಶಿ – ಭಾರತ ಕೆಣಕಿ ಮಣ್ಣು ಮುಕ್ಕಿದ SL
ಜುಲೈ ತಿಂಗಳಲ್ಲಿ ಭಾರತ ತಂಡ ಇಂಗ್ಲೆಂಡ್ ಟೂರ್ ಮಾಡಲಿದ್ದು ಅಲ್ಲಿ 5 ಪಂದ್ಯಗಳ ಟಿ-20ಐ ಸರಣಿ ಹಾಗೇ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಜುಲೈ 1 ರಿಂದ ಜುಲೈ 11 ರವರೆಗೆ ಟಿ-20 ಸರಣಿ ನಡೆದ್ರೆ ಜುಲೈ 14 ರಿಂದ 19ರ ರವರೆಗೆ ಏಕದಿನ ಸರಣಿ ಶೆಡ್ಯೂಲ್ ಆಗಿದೆ. ಈ ಏಕದಿನ ಸರಣಿಗೆ ಬಿಸಿಸಿಐ 15 ಸದಸ್ಯರ ಬಲಿಷ್ಠ ತಂಡವನ್ನೇ ಅನೌನ್ಸ್ ಮಾಡಿದೆ. ಹಾಗೇ ಈ ಸರಣಿಗೆ ಕಿಂಗ್ ವಿರಾಟ್ ಕೊಹ್ಲಿ ಕಂ ಬ್ಯಾಕ್ ಮಾಡ್ತಿದ್ದಾರೆ.
ಇಂಗ್ಲೆಂಡ್ ಬೇಟೆಗೆ ಟೀಂ ಅನೌನ್ಸ್!
ಶುಭ್ ಮನ್ ಗಿಲ್
ರೋಹಿತ್ ಶರ್ಮಾ
ವಿರಾಟ್ ಕೊಹ್ಲಿ
ಶ್ರೇಯಸ್ ಅಯ್ಯರ್
ಕೆಎಲ್ ರಾಹುಲ್
ಇಶಾನ್ ಕಿಶನ್
ವಾಷಿಂಗ್ಟನ್ ಸುಂದರ್
ಅಕ್ಷರ್ ಪಟೇಲ್
ನಿತೀಶ್ ಕುಮಾರ್ ರೆಡ್ಡಿ
ಕುಲ್ದೀಪ್ ಯಾದವ್
ಜಸ್ಪ್ರೀತ್ ಬುಮ್ರಾ
ಪ್ರಸಿದ್ಧ್ ಕೃಷ್ಣ
ಹರ್ಷಿತ್ ರಾಣಾ
ಅರ್ಷದೀಪ್ ಸಿಂಗ್
ಗುರ್ನೂರ್ ಬ್ರಾರ್
ಕಳೆದ ಸರಣಿಗೆ ಕಂಪೇರ್ ಮಾಡಿದ್ರೆ ಇಂಗ್ಲೆಂಡ್ ಸರಣಿಗೆ ಒಂದಷ್ಟು ಆಟಗಾರರನ್ನ ಹೊರಗಿಡಲಾಗಿದೆ. ಅದ್ರಲ್ಲೂ ಅಫ್ಘಾನಿಸ್ತಾನ ವಿರುದ್ಧ ಮೂರನೇ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ಅಜೇಯರಾಗಿದ್ದ ಯಶಸ್ವಿ ಜೈಸ್ವಾಲ್ಗೂ ಅವಕಾಶ ನೀಡಿಲ್ಲ. ಇನ್ನು ಹರ್ಷ್ ದುಬೆಯನ್ನ ಹೊರಗಿಟ್ಟು ಅಕ್ಷರ್ ಪಟೇಲ್ಗೆ ಅವಕಾಶ ನೀಡಿದ್ದಾರೆ. ಇನ್ನು ಹರ್ಷಿತ್ ರಾಣಾಗೆ ಅವಕಾಶ ಸಿಕ್ಕಿರೋದ್ರಿಂದ ಪ್ರಿನ್ಸ್ ಯಾದವ್ ಕೂಡ ತಂಡದಿಂದ ಹೊರಬಿದ್ದಿದ್ದಾರೆ. ಹಾಗೇ ಭಾರತ ಏಕದಿನ ತಂಡದ ಖಾಯಂ ಸದಸ್ಯರಾಗಿ ಕಾಣಿಸಿಕೊಳ್ಳುತ್ತಿದ್ದ ಮೊಹಮ್ಮದ್ ಸಿರಾಜ್ ಅವರನ್ನು ಈ ಬಾರಿ ಆಯ್ಕೆ ಮಾಡಲಾಗಿಲ್ಲ. ರೆಸ್ಟ್ ನೆಪದಲ್ಲಿ ಅವ್ರನ್ನ ಹೊರಗಿಟ್ಟು ಗುರ್ನೂರ್ ಬ್ರಾರ್ ಗೆ ಚಾನ್ಸ್ ಕೊಟ್ಟಿದ್ದಾರೆ. ಇನ್ನು ಫಿಟ್ನೆಸ್ ಸಮಸ್ಯೆಯಿಂದ ಹಾರ್ದಿಕ್ ಪಾಂಡ್ಯ ಕೂಡ ಹೊರಗಿದ್ದಾರೆ. ರವೀಂದ್ರ ಜಡೇಜಾಗೂ ಅವಕಾಶ ನೀಡಿಲ್ಲ.
3 ವರ್ಷಗಳ ಬಳಿಕ ಏಕದಿನ ತಂಡಕ್ಕೆ ಆಯ್ಕೆಯಾದ ಬುಮ್ರಾ!
2027ರ ಏಕದಿನ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಟೀಂ ಕಟ್ಟುತ್ತಿರೋ ಬಿಸಿಸಿಐ ಸ್ಟಾರ್ ಆಟಗಾರರಿಗೆ ಮಣೆ ಹಾಕ್ತಿದೆ. ಹಾಗೇ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಕೂಡ ತಂಡಕ್ಕೆ ಕಂ ಬ್ಯಾಕ್ ಮಾಡಿದ್ದಾರೆ.ಅದೂ ಕೂಡ ಮೂರು ವರ್ಷಗಳ ನಂತರ ಅನ್ನೋದೇ ಇಂಟ್ರೆಸ್ಟಿಂಗ್. ಕೊನೆಯ ಬಾರಿಗೆ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಹಮದಾಬಾದ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಬುಮ್ರಾ ಆಡಿದ್ದರು. ಅದಾದ ಬಳಿಕ ಏಕದಿನ ತಂಡದಲ್ಲಿ ಕಾಣಿಸಿಕೊಂಡಿರಲಿಲ್ಲ. ಇನ್ನು ಆಂಗ್ಲರ ವಿರುದ್ಧ ಬುಮ್ರಾ ಅದ್ಭುತ ರೆಕಾರ್ಡ್ಸ್ ಕೂಡ ಹೊಂದಿದ್ದಾರೆ. ಇಂಗ್ಲೆಂಡ್ ವಿರುದ್ಧ ಏಳು ಏಕದಿನ ಪಂದ್ಯಗಳನ್ನು ಆಡಿದ್ದು, 5.88 ರ ಎಕಾನಮಿಯಲ್ಲಿ 17 ವಿಕೆಟ್‌ಗಳನ್ನು ಬೇಟೆಯಾಡಿದ್ದಾರೆ. ಸೋ ಟೀಂ ಏನೋ ಇಲ್ಲಿ ಸ್ಟ್ರಾಂಗ್ ಆಗಿ ಕಾಣ್ತಿದೆ. ಆದ್ರೆ ವಿಕೆಟ್ ಕೀಪರ್ ಬ್ಯಾಟರ್ ಯಾರು ಅನ್ನೋದೇ ಪ್ರಶ್ನೆ. ಇಶಾನ್ ಕಿಶನ್ ಅಫ್ಘಾನಿಸ್ತಾನ ವಿರುದ್ಧ ಎರಡನೇ ಮ್ಯಾಚ್ನಲ್ಲಿ ಸೆಂಚುರಿ ಹೊಡೆದಿದ್ರು. ಮೂರನೇ ಪಂದ್ಯದಿಂದ ಕೆಎಲ್ ರಾಹುಲ್ರನ್ನ ಹೊರಗಿಟ್ಟಿದ್ರು. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಯಾರು ಪ್ಲೇಯಿಂಗ್ 11ನಲ್ಲಿ ಅವಕಾಶ ಪಡೆಯುತ್ತಾರೆ ಅನ್ನೋ ಕುತೂಹಲವೂ ಇದೆ.

ನೋಡಿರಿ

