ಸೂರ್ಯವಂಶಿಗೆ ಸೆಂಚುರಿ TROUBLE – ಬಿಗ್ ಮ್ಯಾಚ್.. 90+ ರನ್ಸ್ ಔಟ್ ಯಾಕೆ?
ವೈಭವ್ ಮಿಸ್ ಮಾಡಿಕೊಂಡ ಶತಕಗಳೆಷ್ಟು?

ಸೂರ್ಯವಂಶಿಗೆ ಸೆಂಚುರಿ TROUBLE – ಬಿಗ್ ಮ್ಯಾಚ್.. 90+ ರನ್ಸ್ ಔಟ್ ಯಾಕೆ?ವೈಭವ್ ಮಿಸ್ ಮಾಡಿಕೊಂಡ ಶತಕಗಳೆಷ್ಟು?

ಬಿಗ್ ಗೇಮ್, ಬಿಗ್ ಸ್ಟೇಜ್, ಪ್ರೆಶರ್ ಟೈಂ ಅಂತಾ ಬಂದಾಗ ವೈಭವ್ ಸೂರ್ಯವಂಶಿ ನಿಜಕ್ಕೂ ಗೇಮ್ ಚೇಂಜರ್. ಈಗ ಶ್ರೀಲಂಕಾ ಎ ವಿರುದ್ಧದ ಫೈನಲ್ ಮ್ಯಾಚಲ್ಲಿ ಭರ್ಜರಿ ಇನ್ನಿಂಗ್ಸ್ ಮೂಲಕ ಮತ್ತೊಮ್ಮೆ ಸೆನ್ಸೇಷನಲ್ ಸ್ಟಾರ್ ಆಗಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಸೂರ್ಯವಂಶಿಗೆ ಸೆಂಚುರಿ ಟ್ರಬಲ್ ಕಾಡ್ತಿದ್ಯಾ ಅನ್ನೋ ಪ್ರಶ್ನೆ ಮೂಡಿದೆ. 90+ ರನ್ಸ್ ಹೊಡೆದು ಇನ್ನೇನು ಶತಕದ ಹೊಸ್ತಿಲಲ್ಲಿ ಇರುವಾಗ್ಲೇ ಎಡವುತ್ತಿದ್ದಾರೆ. ವಿಕೆಟ್ ಒಪ್ಪಿಸ್ತಿದ್ದಾರೆ. ಇದೇ ವರ್ಷ ಐಪಿಎಲ್​ನಲ್ಲೂ ಲಕ್ ಕೈಕೊಟ್ಟಿತ್ತು.

ಇದನ್ನೂ ಓದಿ : ಲಂಕೆಯನ್ನೇ ಸುಟ್ಟ ಸೂರ್ಯವಂಶಿ – ಭಾರತ ಕೆಣಕಿ ಮಣ್ಣು ಮುಕ್ಕಿದ SL

ಕ್ರಿಕೆಟ್ ಲೋಕದ ಯಂಗೆಸ್ಟ್ ಸೂಪರ್ ಸ್ಟಾರ್ ಆಗಿರೋ ವೈಭವ್ ಸೂರ್ಯವಂಶಿ ಕ್ರೂಶಿಯಲ್ ಗೇಮ್​ನಲ್ಲಿ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಅಂಡರ್ 19 ತಂಡದಲ್ಲೂ ಅಬ್ಬರಿಸಿದ್ದ ವೈಭವ್ ಐಪಿಎಲ್​ನಲ್ಲೂ ಸ್ಫೋಟಕ ಬ್ಯಾಟಿಂಗ್ ಮೂಲಕ ಹೊಸ ಚರಿತ್ರೆ ಬರೆದಿದ್ರು. ಈಗ ತ್ರಿಕೋನ ಎ ತಂಡಗಳ ನಡುವಿನ ಫೈನಲ್ ಮ್ಯಾಚಲ್ಲೂ ಲಂಕನ್ನರನ್ನ ದಹನ ಮಾಡಿ ಟ್ರೆಂಡಿಂಗ್​ನಲ್ಲಿದ್ದಾರೆ. ಆದ್ರೆ ಸೂರ್ಯವಂಶಿ ಶತಕ ವಂಚಿತರಾಗಿದ್ದೇ ಬೇಸರ ಮೂಡಿಸಿದೆ. 90+ ಸ್ಕೋರ್ ಇದ್ದಾಗ್ಲೇ ಎಡವುತ್ತಿರೋದೇ ಚರ್ಚೆಗೆ ಗ್ರಾಸವಾಗಿದೆ. ಈ ವರ್ಷವೇ ಶತಕದ ಹೊಸ್ತಿಲಲ್ಲಿ ಸಾಕಷ್ಟು ಸಲ ಎಡವಿದ್ದಾರೆ.

ಸೂರ್ಯವಂಶಿಗೆ ಸೆಂಚುರಿ ಸಂಕಷ್ಟ!

ಕ್ಲೈಮ್ಯಾಕ್ಸ್ ಸ್ಟೇಜ್ ​ಗಳಲ್ಲಿ ವೈಭವ್ ಸೂರ್ಯವಂಶಿ ಸ್ಪೆಷಲಿಸ್ಟ್ ಬ್ಯಾಟರ್

ಅಫ್ಘಾನಿಸ್ತಾನ ವಿರುದ್ಧದ ಅಂಡರ್-19 ವಿಶ್ವಕಪ್ ಸೆಮಿಫೈನಲ್‌ ನಲ್ಲಿ ಅಬ್ಬರ

33 ಎಸೆತಗಳಲ್ಲಿ 200 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 68 ರನ್ ಗಳಿಸಿದರು

ಫೈನಲ್ ಮ್ಯಾಚಲ್ಲಿ 80 ಎಸೆತಗಳಲ್ಲಿ 200+ ಸ್ಟ್ರೈಕ್​ ರೇಟ್​ನಲ್ಲಿ 175 ರನ್

2026ರ ಐಪಿಎಲ್ ನ ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ ಪಂದ್ಯಗಳ ರನ್ಸ್

ಎಲಿಮಿನೇಟರ್ ಪಂದ್ಯದಲ್ಲಿ  ಹೈದ್ರಾಬಾದ್ ವಿರುದ್ಧ 29 ಎಸೆತಗಳಲ್ಲಿ 97 ರನ್

ಕ್ವಾಲಿಫೈಯರ್ 2ಪಂದ್ಯದಲ್ಲಿಯೂ ಗುಜರಾತ್ ಎದುರು 47 ಎಸೆತಗಳಲ್ಲಿ 96 ರನ್​

ಫೈನಲ್‌ ನಲ್ಲಿ ಕೇವಲ 29 ಎಸೆತಗಳಲ್ಲಿ 94 ರನ್ ಗಳಿಸುವ ಮೂಲಕ ಪ್ರದರ್ಶನ

ಲಿಸ್ಟ್ ಎ ಕ್ರಿಕೆಟ್‌ನಲ್ಲಿ 11 ಎಸೆತಗಳಲ್ಲಿ ಅತಿ ವೇಗದ ಅರ್ಧಶತಕದ ದಾಖಲೆ

ಹಾಗೇನಾದ್ರೂ  ಲಂಕಾ ವಿರುದ್ಧ ಸೆಂಚುರಿ ಕಂಪ್ಲೀಟ್ ಮಾಡಿದ್ದಿದ್ರೆ ವಿಶ್ವದಾಖಲೆಯ ಶತಕ ಆಗ್ತಿತ್ತು. ಲಿಸ್ಟ್ ಎ ಕ್ರಿಕೆಟ್​ನಲ್ಲಿ ಅತೀ ವೇಗದ ಹಾಫ್ ಸೆಂಚುರಿ ಸಿಡಿಸಿದ ವಿಶ್ವ ದಾಖಲೆಯು ವೈಭವ್ ಸೂರ್ಯವಂಶಿ ಪಾಲಾಗಿದೆ. 2005 ರಲ್ಲಿ ಶ್ರೀಲಂಕಾದಲ್ಲಿ ನಡೆದ ದೇಶೀಯ ಲಿಸ್ಟ್ ಎ ಮ್ಯಾಚಲ್ಲಿ ಕೌಶಲ್ಯ ವೀರರತ್ನೆ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಹಾಗೇನಾದ್ರೂ ಸೂರ್ಯವಂಶಿ 29ನೇ ಬಾಲಲ್ಲಿ ಸಿಕ್ಸ್ ಬಾರಿಸಿದ್ರೆ ಶತಕ ಕಂಪ್ಲೀಟ್ ಆಗ್ತಿತ್ತು. ಆಗ ಲಿಸ್ಟ್ ಎ ಕ್ರಿಕೆಟ್​ನಲ್ಲಿ ಅತೀ ವೇಗದ ಶತಕ ಸಿಡಿಸಿದ ವಿಶ್ವ ದಾಖಲೆ ವೈಭವ್ ಸೂರ್ಯವಂಶಿ ಪಾಲಾಗುತ್ತಿತ್ತು. ಬಟ್ ಬ್ಯಾಡ್​ಲಕ್ ಏನಂದ್ರೆ ಬಿಗ್ ಹಿಟ್ ಹೊಡೆಯಲು ಹೋಗಿ ವಿಕೆಟ್ ಒಪ್ಪಿಸಿದ್ರು. ಌಕ್ಚುಲಿ ಸೂರ್ಯವಂಶಿ ಶತಕದ ಹೊಸ್ತಿಲಲ್ಲೇ ವಿಕೆಟ್ ಒಪ್ಪಿಸ್ತಿರೋದಕ್ಕೆ ಕಾರಣ ಅಟ್ಯಾಕಿಂಗ್ ಮೈಂಡ್​ಸೆಟ್. ಎಂಥಾ ಲೆಜೆಂಡರಿ ಪ್ಲೇಯರ್​ಗಳು ಆದವ್ರು ಕೂಡ 90 ಪ್ಲಸ್ ರನ್ಸ್ ಇದ್ದಾಗ ಸ್ವಲ್ಪ ಸ್ಲೋ ಗೇಮ್ ಆಡ್ತಾರೆ. ಸೆಂಚುರಿ ಕಂಪ್ಲೀಟ್ ಮಾಡ್ಕೊಂಡು ನೆಕ್ಸ್​ಟ್ ಬತ್ತೆ ಸ್ಫೋಟಕ ಇನ್ನಿಂಗ್ಸ್ ಆಡೋಕೆ ಶುರು ಮಾಡ್ತಾರೆ. ಆದ್ರೆ ಸೂರ್ಯವಂಶಿ ಕ್ರಿಸ್​ನಲ್ಲಿ ಇರೋವಷ್ಟು ಹೊತ್ತು ಕೂಡ ಫಸ್ಟ್ ಬಾಲ್​ನಿಂದ ಹಿಡ್ದು ಲಾಸ್ಟ್​ ಬಾಲ್​ವರೆಗೂ ಬಿಗ್ ಹಿಟ್​ಗಳನ್ನ ಟ್ಟೈ ಮಾಡ್ತಿದ್ದಾರೆ. ಬಟ್ ಇನ್ನೇನು ಒಂದೆರಡು ಎಸೆತಗಳಲ್ಲಿ ಶತಕ ಪಕ್ಕಾ ಎನ್ನುವಾಗ ಕ್ಯಾಚ್ ಕೊಟ್ಟು ಔಟ್ ಆಗ್ತಿದ್ದಾರೆ. ಇದು ಒಂದು ರೀತಿಯಾಗಿ ಸೂರ್ಯವಂಶಿಗೆ ಶಾಪವಾಗಿ ಕಾಡ್ತಿದೆ.

ಇನ್ನು ವೈಭವ್ ಬ್ಯಾಟಿಂಗ್ ಗತ್ತು ಕಂಡು ಪಾಕಿಸ್ತಾನಿ ಪ್ಲೇಯರ್ಸ್ ಕೂಡ ಬೆರಗಾಗಿದ್ದಾರೆ. ಪಾಕಿಸ್ತಾನಿ ಮಾಜಿ ಆಟಗಾರ ಶೋಯೆಬ್‌ ಅಖ್ತರ್‌ ಅಂತೂ ಬಾಸ್ ಬೇಬಿ ಗುಣಗಾನ ಮಾಡಿದ್ದಾರೆ. ವೈಭವ್ ಸೂರ್ಯವಂಶಿ ವಿಶ್ವದ ಎಂಟನೇ ಅದ್ಭುತ. ನಾನು ಸಚಿನ್ ತೆಂಡೂಲ್ಕರ್ ಅವರ ಆಟವನ್ನೂ ನೋಡಿದ್ದೇನೆ ಮತ್ತು ವಿರಾಟ್ ಕೊಹ್ಲಿ ಅವರ ಆಟವನ್ನೂ ನೋಡಿದ್ದೇನೆ, ಆದರೆ ವೈಭವ್ ಸೂರ್ಯವಂಶಿ ಬೇರೆಯದೇ ಸಾಮರ್ಥ್ಯವಿರುವ ಆಟಗಾರ. ಅವರು ಕೇವಲ ಐದು ಓವರ್‌ಗಳಲ್ಲಿ ಪಂದ್ಯದ ದಿಕ್ಕನ್ನೇ ಏಕಾಂಗಿಯಾಗಿ ಬದಲಾಯಿಸಬಲ್ಲರು. ಕೇವಲ 15 ವರ್ಷದ ವಯಸ್ಸಿನಲ್ಲಿ ಯಾರಾದರೂ ಈ ರೀತಿ ಬ್ಯಾಟಿಂಗ್ ಮಾಡಬಹುದು ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ವೈಭವ್ ಸೂರ್ಯವಂಶಿ ಭವಿಷ್ಯದಲ್ಲಿ ವಿಶ್ವ ಕ್ರಿಕೆಟ್‌ನ ಅತಿ ದೊಡ್ಡ ಸ್ಟಾರ್ ಆಗ್ತಾರೆ. ಪ್ರತೀ ದಾಖಲೆಯನ್ನೂ ಬ್ರೇಕ್ ಮಾಡೋ ಸಾಮರ್ಥ್ಯ ಇದೆ ಎಂದಿದ್ದಾರೆ.

Shantha Kumari