ಲಂಕೆಯನ್ನೇ ಸುಟ್ಟ ಸೂರ್ಯವಂಶಿ – ಭಾರತ ಕೆಣಕಿ ಮಣ್ಣು ಮುಕ್ಕಿದ SL
ಹರಿಣಗಳಿಗೆ ಶರಣಾದ ಸಿಂಹಿಣಿಯರು

ಇದೇನು ಐಪಿಎಲ್ ಅಲ್ಲ.. ಗೋ ಬ್ಯಾಕ್ ಹೋಂ ಅಂತಾ ಲೇವಡಿ ಮಾಡಿದ್ರು.. ಇಂಟರ್ ನ್ಯಾಷನಲ್ ಮ್ಯಾಚ್ ಗಳಲ್ಲಿ ಆಡೋದು ಈಸಿ ಇಲ್ಲ ಅಂತಾ ಕಿಚಾಯಿಸಿದ್ರು. ಆದ್ರೆ ಇದ್ಯಾವುದಕ್ಕೂ ಕೇರ್ ಮಾಡದ ಬಾಸ್ ಬೇಬಿ ಈಗ ಬ್ಯಾಟ್ನಲ್ಲೇ ಉತ್ತರ ಕೊಟ್ಟಿದ್ದಾನೆ. ಫೈನಲ್ ಮ್ಯಾಚ್ ನಲ್ಲಿ ಕಿಚ್ಚು ಹಚ್ಚಿ ಲಂಕೇಯನ್ನೇ ಸುಟ್ಟಿದ್ದಾನೆ.
ಇದನ್ನೂ ಓದಿ : ಕೊಹ್ಲಿ IPL ನಿವೃತ್ತಿ ಸೀಕ್ರೆಟ್ ರಿವೀಲ್ – RCB ಪರ ಇನ್ನೆಷ್ಟು ವರ್ಷ ಆಡ್ತಾರೆ?
ಶ್ರೀಲಂಕಾ ಎ ತಂಡದ ವಿರುದ್ಧ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ಫೈನಲ್ ಮ್ಯಾಚ್ ನಲ್ಲಿ ಭಾರತ ಭರ್ಜರಿಯಾಗೇ ಗೆದ್ದು ಬೀಗಿದೆ. ವಂಡರ್ ಕಿಡ್ ವೈಭವ್ ಸೂರ್ಯವಂಷಿ ಆರ್ಭಟಕ್ಕೆ ಲಂಕಾ ಬೌಲರ್ಸ್ ಅಕ್ಷರಶಃ ಥಂಡಾ ಹೊಡೆದಿದ್ರು. ಕಳೆದ ಪಂದ್ಯಗಳಲ್ಲಿ ಐಪಿಎಲ್ ಕಿಡ್ ಅಂತೆಲ್ಲಾ ಟೀಸ್ ಮಾಡಿದವ್ರು ಮೈದಾನದಲ್ಲಿ ಅದೇ ಕಿಡ್ ಮುಂದೆ ಶರಣಾಗಿದ್ರು. ಡಂಬುಲ್ಲಾದಲ್ಲಿ ನಡೆದ ತ್ರಿಕೋನ ಏಕದಿನ ಸರಣಿಯ ಫೈನಲ್‌ನಲ್ಲಿ ಭಾರತ ಇತಿಹಾಸವನ್ನೇ ಬರೆದಿದೆ.
ಸೂರ್ಯವಂಶಿ ಸಿಡಿಲಿಗೆ ಲಂಕಾ ದಹನ!
ಫೈನಲ್ ಮ್ಯಾಚಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 377 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ಭಾರತದ ಪರ ವೈಭವ್ ಸೂರ್ಯವಂಶಿ ಅಕ್ಷರಶಃ ಜ್ವಾಲಾಗ್ನಿಯಾಗಿದ್ರು. 11 ಬಾಲಲ್ಲೇ ಅರ್ಧಶತಕ ಸಿಡಿಸಿದ ವೈಭವ್ ಕೇವಲ 29 ಎಸೆತಗಳಲ್ಲಿ 10 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಒಳಗೊಂಡಂತೆ 94 ರನ್ ಗಳಿಸಿ ಔಟ್ ಆದ್ರು. 324ಪ್ಲಸ್ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸಿದ್ರು. ಪ್ರಿಯಾಂಶ್ ಆರ್ಯ 39 ರನ್, ತಿಲಕ್ ವರ್ಮಾ ಕೂಡ 67 ರನ್‌ಗಳ ಇನ್ನಿಂಗ್ಸ್ ಆಡಿದ್ರು. ಕೊನೆಯಲ್ಲಿ ಅನುಕುಲ್ ರಾಯ್ 15 ಎಸೆತಗಳಲ್ಲಿ 39 ರನ್ ಬಾರಿಸಿ ತಂಡದ ಸ್ಕೋರ್ ಅನ್ನು 377 ರನ್‌ಗಳಿಗೆ ಕೊಂಡೊಯ್ದರು. ಈ ಬಿಗ್ ಟಾರ್ಗೆಟ್ ಬೆನ್ನಟ್ಟಿದ ಶ್ರೀಲಂಕಾ 47.1 ಓವರ್‌ಗಳಲ್ಲಿ 11 ರನ್‌ಗಳಿಗೆ ಆಲ್ ಔಟ್ ಆಯಿತು. ಈ ಮೂಲಕ ಭಾರತ 66 ರನ್ಗಳಲ್ಲಿ ಗೆದ್ದು ಬೀಗಿತು. ಹಾಗೇ ಭಾರತ ಎ ತಂಡದ ತ್ರಿಕೋನ ಸರಣಿಯ ಸತತ 7ನೇ ಗೆಲುವು ಅನ್ನೋದು ವಿಶೇಷ. ಇನ್ನು ಈ ಪಂದ್ಯದಲ್ಲಿ ವೈಭವ್ ಶೈನ್ ಆಗಿದ್ದು ಬಿಗ್ ಮ್ಯಾಚ್ಗಳ ಪವರ್ ಹಿಟ್ಟರ್ ಅನ್ನೋದನ್ನ ಪ್ರೂವ್ ಮಾಡಿದ್ದಾರೆ.
ಕ್ರೂಶಿಯಲ್ ಗೇಮ್ ಗಳಲ್ಲಿ ವೈಭವ್ ವಿರಾಟರೂಪ!
ಕಳೆದ ವರ್ಷ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 80 ಎಸೆತಗಳಲ್ಲಿ 175 ರನ್ ಬಾರಿಸಿದ್ದ ವೈಭವ್ 2026ರ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ 29 ಎಸೆತಕ್ಕೆ 97 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ರು. ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ವಿರುದ್ಧ 47 ಎಸೆತಗಳಲ್ಲಿ 96 ರನ್ ಸಿಡಿಸಿದ್ದ ವೈಭವ್ ಈಗ ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ 29 ಎಸೆತಕ್ಕೆ 96 ರನ್ ಬಾರಿಸಿ ತಾನು ಬಿಗ್ ಮ್ಯಾಚ್ ಗೇಮ್ ಚೇಂಜರ್ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಹೀಗಿ ಎ ತಂಡ ಸರಣಿ ಗೆದ್ರೆ ಅತ್ತ ಭಾರತ ಮಹಿಳಾ ತಂಡ ಟಿ-20 ವಿಶ್ವಕಪ್ ನಲ್ಲಿ ಮೊದಲ ಸೋಲು ಕಂಡಿದೆ.
ಸೌತ್ ಆಫ್ರಿಕಾ ವಿರುದ್ಧ ಸೋತ ಸಿಂಹಿಣಿಯರು!
ಪಾಕಿಸ್ತಾನ, ನೆದರ್ ಲ್ಯಾಂಡ್ ವಿರುದ್ಧ ಗೆದ್ದು ಹ್ಯಾಟ್ರಿಕ್ ಗೆಲುವಿನ ಟಾರ್ಗೆಟ್ ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಕಣಕ್ಕಿಳಿದಿದ್ದ ಮಹಿಳಾ ತಂಡ ಸೋಲು ಕಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 158 ರನ್ ಗಳಿಸಿತು. ಭಾರತದ ಪರ ಬ್ಯಾಟಿಂಗ್ ವೀಕ್ ಇತ್ತು. 159 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಆದ್ರೆ ಮರಿಝಾನ್ ಕಪ್ ಮತ್ತು ತಾಜ್ಮಿನ್ ಬ್ರಿಟ್ಸ್ ನಡುವಿನ ಬಲವಾದ 97 ರನ್‌ಗಳ ಜೊತೆಯಾಟದಿಂದ ಭಾರತ ಇನ್ನೂ ಐದು ಎಸೆತಗಳು ಬಾಕಿ ಇದ್ದಂತೆಯೇ ಸೋಲೊಪ್ಪಿಕೊಳ್ತು. ಶ್ರೀ ಚರಣಿ ಮಾತ್ರ ಬೌಲಿಂಗ್ನಲ್ಲಿ 3 ವಿಕೆಟ್ ಪಡೆದು ಮಿಂಚಿದ್ರು. ಇನ್ನು ಭಾರತದ ಸೋಲಿಗೆ ಕಳಪೆ ಫೀಲ್ಡಿಂಗ್ ಮತ್ತು ಕ್ಯಾಚ್ ಡ್ರಾಪ್ ಕಾರಣವಾಗಿತ್ತು.

ನೋಡಿರಿ

