ಸಿನಿಮಾ ಗೆಲುವಿನ ಬೆನ್ನಲ್ಲೇ ಗುಡ್‌ನ್ಯೂಸ್ ಕೊಟ್ರಾ ಸಮಂತಾ? –ಬೇಬಿ ಬಂಪ್ ಫೋಟೋ ವೈರಲ್

ಸಿನಿಮಾ ಗೆಲುವಿನ ಬೆನ್ನಲ್ಲೇ ಗುಡ್‌ನ್ಯೂಸ್ ಕೊಟ್ರಾ ಸಮಂತಾ? –ಬೇಬಿ ಬಂಪ್ ಫೋಟೋ ವೈರಲ್

ತೆಲುಗು ನಟಿ ಸಮಂತಾ ಮಾ ಇಂಟಿ ಬಂಗಾರಂ ಸಿನಿಮಾ ಸಕ್ಸಸ್ ಕಂಡಿರುವ ಖುಷಿಯಲ್ಲಿದ್ದಾರೆ. ಇದರ ಜೊತೆಗೆ ಸಮಂತಾ ಗುಡ್‌ನ್ಯೂಸ್ ಕೊಡುವ ಸಿದ್ಧತೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ, ನಟಿಯ ಬೇಬಿ ಬಂಪ್ ಫೋಟೋ ಈಗ ವೈರಲ್ ಆಗಿದೆ.

ಇದನ್ನೂ ಓದಿ:ಗುಡ್‌ನ್ಯೂಸ್‌ ಕೊಟ್ಟ ಗಿಲ್ಲಿ – ಕಾವ್ಯ.. ಗಿಲ್ಲಿ ಫಸ್ಟ್‌ ಸಿನಿಮಾಗೆ ಕಾವು ನಾಯಕಿ? -ಶ್ರೀಲೀಲಾಗೂ ಸಿನಿಮಾದಲ್ಲಿ ಬಿಗ್‌ ರೋಲ್?‌

ತೆಲುಗು ನಟಿ ಸಮಂತಾ ತಾಯಿಯಾಗುತ್ತಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ. 6 ತಿಂಗಳ ಹಿಂದೆ ನಿರ್ದೇಶಕ ರಾಜ್ ನಿಡುಮೊರು ಜೊತೆ ಸ್ಯಾಮ್ ಮದುವೆ ನಡೆದಿತ್ತು. ಇದೀಗ ಸಮಂತಾ ಗರ್ಭಿಣಿ ಆಗಿದ್ದಾರೆ ಎನ್ನುವ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ. ಅಧಿಕೃತವಾಗಿ ಈ ಬಗ್ಗೆ ಸಮಂತಾ ಮತ್ತು ರಾಜ್ ನಿಡುಮೊರು ಕಡೆಯಿಂದ ಮಾಹಿತಿ ಸಿಕ್ಕಿಲ್ಲ. ಆದರೆ, ಬೇಬಿ ಬಂಪ್ ಕಾಣಿಸುತ್ತಿದ್ದು, ಸಮಂತಾ ಗರ್ಭಿಣಿ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಸಮಂತಾ ಅಭಿನಯದ ಮಾ ಇಂಟಿ ಬಂಗಾರಂ ಸಿನಿಮಾದ ಸಕ್ಸಸ್ ಸಂಭ್ರಮಾಚರಣೆ ವೇಳೆ ಸಮಂತಾ ಅವರ ಬೇಬಿ ಬಂಪ್ ಕಾಣಿಸುತ್ತಿದ್ದು, ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.

ಮತ್ತೊಂದೆಡೆ ಸಮಂತಾ ಅಭಿನಯದ ‘ಮಾ ಇಂಟಿ ಬಂಗಾರಂ’ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಭಾನುವಾರ ಕೂಡಾ ಈ ಸಿನಿಮಾಕ್ಕೆ ಪ್ರೇಕ್ಷಕರು ಜೈ ಎಂದಿದ್ದಾರೆ. ಬಿಡುಗಡೆಯಾದ ಮೊದಲ ದಿನ 5.35 ಕೋಟಿ ರೂಪಾಯಿ ಹಾಗೂ ಎರಡನೇ ದಿನ 7.65 ಕೋಟಿ ರೂಪಾಯಿ ಗಳಿಸಿದ್ದ ಈ ಸಿನಿಮಾ, ಮೂರನೇ ದಿನವಾದ ಭಾನುವಾರ ದಾಖಲೆಯ 2,965 ಶೋಗಳಿಂದ ಬರೋಬ್ಬರಿ 10.10 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ನೆಟ್ ಕಲೆಕ್ಷನ್ 23.10 ಕೋಟಿ ರೂಪಾಯಿಗೆ ಹಾಗೂ ಒಟ್ಟು ಗ್ರಾಸ್ ಕಲೆಕ್ಷನ್ 26.69 ಕೋಟಿ ರೂಪಾಯಿಗೆ ತಲುಪಿದೆ. ಇನ್ನು ವಿದೇಶದಲ್ಲೂ ಈ ಸಿನಿಮಾ ಭರ್ಜರಿ ಪ್ರದರ್ಶನ ಕಂಡಿರುವ ಈ ಚಿತ್ರ ಭಾನುವಾರ 4 ಕೋಟಿ ರೂಪಾಯಿ ಬಾಚಿಕೊಂಡಿದ್ದು, ಓವರ್‌ಸೀಸ್‌ನಲ್ಲಿ ಒಟ್ಟು 15.10 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ವಿಶ್ವದಾದ್ಯಂತ ಕೇವಲ ಮೂರೇ ದಿನಕ್ಕೆ ಭರ್ಜರಿ 41.79 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ 40 ಕೋಟಿಯ ಕ್ಲಬ್ ದಾಟಿದೆ.

Sulekha

Leave a Reply

Your email address will not be published. Required fields are marked *