ಮುಂಬೈನಿಂದ ಹಾರ್ದಿಕ್ ಪಾಂಡ್ಯಗೆ ಗೇಟ್‌ಪಾಸ್ ಗ್ಯಾರಂಟಿ – ಜೈಸ್ವಾಲ್ವ್‌ಗೆ ಜೈ ಅಂದ್ರಾ ನೀತಾ ಅಂಬಾನಿ..!

ಮುಂಬೈ ಇಂಡಿಯನ್ಸ್ ತಂಡದಲ್ಲಿಈ ಬಾರಿ ಬದಲಾವಣೆಯಂತೂ ನಿಶ್ಚಿತ. ಅದರಲ್ಲೂ ನಾಯಕ ಹಾರ್ದಿಕ್ ಪಾಂಡ್ಯ ತಂಡದಿಂದ ಹೊರನಡೆಯುವುದು ಗ್ಯಾರಂಟಿ ಎಂದು ಹೇಳಲಾಗುತ್ತದೆ. ಹಾರ್ದಿಕ್ ಪಾಂಡ್ಯರನ್ನು ಕೈಬಿಟ್ಟು ಆರ್‌ಆರ್ ತಂಡದ ಯಶಸ್ವಿ ಜೈಸ್ವಾಲ್ ಅವರನ್ನು ತಂಡಕ್ಕೆ ಕರೆತರುವ ಪ್ಲಾನ್ ಮಾಡ್ತಿದೆ ಮುಂಬೈ ಇಂಡಿಯನ್ಸ್ ಪ್ರಾಂಚೈಸಿ.
ಇದನ್ನೂ ಓದಿ:KKR ಕೈ ಬಿಟ್ಟವರೇ ಟೀಂ IND ಕ್ಯಾಪ್ಟನ್ – ಸೂರ್ಯ, ಶ್ರೇಯಸ್, ಗಿಲ್.. ಮತ್ಯಾರು?
ಐಪಿಎಲ್ ಟೂರ್ನಿಯಲ್ಲಿ ಕಳೆದ ಎರಡು ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದ ಪ್ರದರ್ಶನ ತೀರಾ ನಿರಾಸೆ ಮೂಡಿಸಿತ್ತು. ಅದರಲ್ಲೂ ಈ ಬಾರಿ ಮುಂಬೈ ಇಂಡಿಯನ್ಸ್ ಪ್ರದರ್ಶನ ತೀರಾ ಕಳಪೆಯಾಗಿತ್ತು. ಪಾಯಿಂಟ್ಸ್ ಟೇಬಲ್ ನಲ್ಲೂ 9ನೇ ಸ್ಥಾನದಲ್ಲಿತ್ತು ಮುಂಬೈ ಇಂಡಿಯನ್ಸ್. ಟೀಮ್‌ನಲ್ಲಿ ಸ್ಟಾರ್ ಪ್ಲೇಯರ್ಸ್ ಇದ್ದರೂ ಕೂಡಾ ತಂಡ ಸತತ ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಆದರೆ, ಮುಂದಿನ ಸೀಸನ್‌ಗಾದರೂ ಮುಂಬೈ ಇಂಡಿಯನ್ಸ್ ಗ್ರೇಟ್ ಕಮ್‌ಬ್ಯಾಕ್ ಮಾಡಲೇಬೇಕು ಎಂಬ ಹಠದಲ್ಲಿದ್ದಾರೆ ಮುಂಬೈ ಇಂಡಿಯನ್ಸ್ ಪ್ರಾಂಚೈಸಿ. ಇದಕ್ಕಾಗಿಯೇ ಈಗಾಗಲೇ ತಂಡದಲ್ಲಿ ದೊಡ್ಡ ಸರ್ಜರಿ ನಡೆಸಲು ಫ್ರಾಂಚೈಸಿ ಮುಂದಾಗಿದೆ. ವರದಿಗಳ ಪ್ರಕಾರ, ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ ಗೇಟ್‌ಪಾಸ್ ನೀಡಲು ಮುಂಬೈ ಇಂಡಿಯನ್ಸ್ ನಿರ್ಧರಿಸಿದೆ. ಅವರ ಜಾಗಕ್ಕೆ ರಾಜಸ್ಥಾನ್ ರಾಯಲ್ಸ್ ತಂಡದ ಓಪನರ್ ಯಶಸ್ವಿ ಜೈಸ್ವಾಲ್ ಕರೆತರಲು ಮಾತುಕತೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.
ಹಿಟ್‌ಮ್ಯಾನ್ ರೋಹಿತ್ ಶರ್ಮಾ ನಂತರ ತಂಡವನ್ನು ದೀರ್ಘಕಾಲ ಮುನ್ನಡೆಸಬಲ್ಲ ಆಟಗಾರನನ್ನು ಹುಡುಕುತ್ತಿದೆ ಮುಂಬೈ ಇಂಡಿಯನ್ಸ್. ಹೀಗಾಗಿ ರಾಜಸ್ತಾನ್ ರಾಯಲ್ಸ್ ತಂಡದ ಯಶಸ್ವಿ ಜೈಸ್ವಾಲ್‌ರನ್ನು ಟೀಮ್ ಗೆ ಕರೆತರಲು ಮುಂಬೈ ಮ್ಯಾನೇಜ್ಮೆಂಟ್ ಮುಂದಾಗಿದೆ. ಅಷ್ಟೇ ಅಲ್ಲ, ಸೂರ್ಯಕುಮಾರ್ ಯಾದವ್‌ರನ್ನು ಕೂಡ ತಂಡದಿಂದ ಕೈಬಿಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ರೋಹಿತ್ ಶರ್ಮಾ ನಂತರ ನಾಯಕತ್ವದ ರೇಸ್‌ನಲ್ಲಿ ತಿಲಕ್ ವರ್ಮಾ ಹೆಸರು ಮುಂಚೂಣಿಯಲ್ಲಿದೆ. ಭಾರತೀಯ ಟಿ20 ತಂಡದ ಉಪನಾಯಕನಾಗಿ ತಿಲಕ್ ವರ್ಮಾ ಶೈನ್ ಆಗುತ್ತಿದ್ದಾರೆ. ಜೊತೆಗೆ ತಿಲಕ್ ವರ್ಮಾ ಭಾರತ ಎ ತಂಡದ ಕ್ಯಾಪ್ಟನ್ ಆಗಿ ತ್ರಿಕೋನ ಸರಣಿ ಕೂಡಾ ಗೆದ್ದಿದ್ದಾರೆ. ಹೀಗಾಗಿ ತಿಲಕ್‌ವರ್ಮಾ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆಗುವುದು ಪಕ್ಕಾ ಎಂದು ವರದಿಯಾಗಿದೆ.

ನೋಡಿರಿ

