ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ರಸ್ತೆಯಲ್ಲಿ ಭೀಕರ ಅಪಘಾತ – ಚಾಲಕನ ಸಾವು, ಸರ್ಕಾರಿ ಅಧಿಕಾರಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ರಸ್ತೆಯಲ್ಲಿ ಭೀಕರ ಅಪಘಾತ – ಚಾಲಕನ ಸಾವು, ಸರ್ಕಾರಿ ಅಧಿಕಾರಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ಮೈಸೂರಿನಿಂದ ಬೆಂಗಳೂರಿಗೆ ಬರ್ತಿದ್ದ ಬಿಇಒ ಅಧಿಕಾರಿಗಳಿದ್ದ ಕಾರು  ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತಕ್ಕೀಡಾಗಿದೆ. ಚನ್ನಪಟ್ಟಣದ ಗ್ರಾಮದ ಮುದುಗೆರೆ ಬಳಿ ಅಪಘಾತಕ್ಕೀಡಾಗಿದೆ. ಅಪಘಾತದ ತೀವ್ರತೆಗೆ ಕಾರಿನ ಚಾಲಕ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಫುಡ್​ ಡೆಲಿವರಿ ಬಾಯ್ಸ್​​ಗಳ ಸ್ಕೂಲ್​ ಎಂಟ್ರಿಗೆ ಬ್ರೇಕ್ ಹಾಕಿದ ಶಾಲೆ – ಯಾಕೆ ಗೊತ್ತಾ?

ಮೈಸೂರು ಮೂಲದ ನಾಲ್ವರು ಬಿಇಒಗಳು ಉನ್ನತ ಅಧಿಕಾರಿಗಳ ಮೀಟಿಂಗ್ ಎಂದು ಬೆಂಗಳೂರಿಗೆ ಆಗಮಿಸುತ್ತಿದ್ದರು. ಈ ಸಂದರ್ಭದಲ್ಲಿ ಮೈಸೂರಿನಿಂದ ಬಂದ ಕಾರು ಚನ್ನಪಟ್ಟಣದ ಬಳಿ ಅಪಘಾತಕ್ಕೀಡಾಗಿದೆ. ಸರ್ಕಾರಿ ಅಧಿಕಾರಿಗಳಿದ್ದ ಕಾರಿಗೆ ಟ್ಯಾಂಕರ್ ಡಿಕ್ಕಿಯಾಗಿದೆ ಎಂದು ವರದಿಯಾಗಿದೆ. ಈ ಕಾರಿನಲ್ಲಿ ಮೈಸೂರು ವಿವಿಧ ತಾಲೂಕುಗಳ ಬಿಇಒಗಳು ಪ್ರಯಾಣಿಸುತ್ತಿದ್ದರು. ಟ್ಯಾಂಕರ್ ಡಿಕ್ಕಿಯ ರಭಸಕ್ಕೆ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜೊತೆಗೆ ಇಬ್ಬರು ಸರ್ಕಾರಿ ಅಧಿಕಾರಿಗಳು ಗಾಯಗೊಂಡಿದ್ದಾರೆ. ಕಾರಿನಲ್ಲಿ ಸಿಲುಕಿಕೊಂಡ ಅಧಿಕಾರಿಗಳನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ಸೇರುವ ವ್ಯವಸ್ಥೆ ಮಾಡಿದರು. ಗಾಯಾಳುಗಳನ್ನ ಮಂಡ್ಯ ಹಾಗೂ ಚನ್ನಪಟ್ಟಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕ ಆನಂದ್ ಮೃತ ದುರ್ದೈವಿ ಆಗಿದ್ದು, ಅಪಘಾತದಲ್ಲಿಪ್ರಕಾಶ್, ರಾಜು, ಕೃಷ್ಣ, ಮಹೇಶ್ ಎಂಬ ಬಿಇಒ ಅಧಿಕಾರಿಗಳು ಗಾಯಗೊಂಡಿದ್ದಾರೆ.

Sulekha

Leave a Reply

Your email address will not be published. Required fields are marked *