ಫುಡ್​ ಡೆಲಿವರಿ ಬಾಯ್ಸ್​​ಗಳ ಸ್ಕೂಲ್​ ಎಂಟ್ರಿಗೆ ಬ್ರೇಕ್ ಹಾಕಿದ ಶಾಲೆ – ಯಾಕೆ ಗೊತ್ತಾ?

ಫುಡ್​ ಡೆಲಿವರಿ ಬಾಯ್ಸ್​​ಗಳ ಸ್ಕೂಲ್​ ಎಂಟ್ರಿಗೆ ಬ್ರೇಕ್ ಹಾಕಿದ ಶಾಲೆ – ಯಾಕೆ ಗೊತ್ತಾ?

ಬೆಂಗಳೂರಿನಲ್ಲಿ ಅರ್ಧಕ್ಕೆ ಅರ್ಧ ಜನ ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿ ತಿನ್ನುತ್ತಾರೆ. ಶಾಲೆಗಳಲ್ಲಿ ಮಕ್ಕಳು ಕೂಡ ಆನ್‌ಲೈನ್‌ನಿಂದ ಆರ್ಡರ್ ಮಾಡಿದ್ದನ್ನೇ ತಿನ್ನುತ್ತಾರೆ. ಆದ್ರೆ ಈಗ ಸಾಕಷ್ಟು ಶಾಲೆಗಳು ದಿಟ್ಟ ಕ್ರಮ ತೆಗೆದುಕೊಂಡಿವೆ. ಬೆಂಗಳೂರಿನಲ್ಲಿ ಫುಡ್​ ಡೆಲಿವರಿ ಬಾಯ್ಸ್​​ಗಳ ಸ್ಕೂಲ್​ ಎಂಟ್ರಿಗೆ ಬ್ರೇಕ್ ಬಿದ್ದಿದೆ. ಹಲವು ಶಾಲೆಗಳು ತಮ್ಮ ಆವರಣದಲ್ಲಿ ಸ್ವಿಗ್ಗಿ, ಜೊಮ್ಯಾಟೊ ಸೇರಿದಂತೆ ಇತರೆ ಆನ್‌ಲೈನ್ ಆಪ್‌ಗಳ ಮೂಲಕ ಫುಡ್​ ಆರ್ಡರ್ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ

ವಿದ್ಯಾರ್ಥಿಗಳ ಆರೋಗ್ಯ, ಭದ್ರತೆ ಹಾಗೂ ಶಾಲಾ ಶಿಸ್ತು ಕಾಪಾಡುವ ಉದ್ದೇಶದಿಂದ ನಗರದ ಹಲವು ಪ್ರತಿಷ್ಠಿತ ಶಾಲೆಗಳು ಈ ನಿರ್ಧಾರಕ್ಕೆ ಬಂದಿದೆ. ಬನಶಂಕರಿಯಲ್ಲಿರುವ ವಿದ್ಯಾಶಿಲ್ಪ ಶಾಲೆಯು ಈ ಬಗ್ಗೆ ಸುತ್ತೋಲೆ ಹೊರಡಿಸಿತ್ತು. ಇದೀಗ ನಗರದ ಹಲವು ಪ್ರಮುಖ ಶಾಲೆಗಳು ಕೂಡ ಇದೇ ನಿಯಮ ಫಾಲೋ ಮಾಡ್ತಿವೆ. ಆನ್ ಲೈನ್ ಫುಡ್ ಬುಕ್ ಮಾಡದಂತೆ ಸುತ್ತೋಲೆ ಹೊರಡಿಸಿದೆ. ಈ ಮೂಲಕ ಶಾಲೆಗಳಿಗೆ ಆ್ಯಪ್ ಗಳಲ್ಲಿ ಫುಡ್ ಬುಕ್ ಮಾಡದಂತೆ ನಿಯಮ ಜಾರಿಗೊಳಿಸಿದೆ.

ಇದನ್ನೂ ಓದಿ:  ಹರಿಣಗಳ ಮುಂದೆ ಮಂಡಿಯೂರಿದ ಭಾರತದ ವನಿತೆಯರು – ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಟೀಮ್ ಇಂಡಿಯಾ

ನಗರದ ಇತರೆ ಪ್ರಮುಖ ಶಾಲೆಗಳೂ ಇದೇ ಮಾದರಿಯ ಕ್ರಮ ಕೈಗೊಳ್ಳುತ್ತಿವೆ.  ಹೊರಗಿನಿಂದ ತರಿಸುವ ಜಂಕ್ ಫುಡ್‌ಗಳಲ್ಲಿ ಹೆಚ್ಚುವರಿ ಎಣ್ಣೆ, ಉಪ್ಪು ಹಾಗೂ ಪ್ರಿಸರ್ವೇಟಿವ್‌ ಇರುತ್ತೆ. ಇದು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಜೊತೆಗೆ ಕೆಲ ವಿದ್ಯಾರ್ಥಿಗಳು ಮನೆಯಿಂದ ತಂದ ಸಾಮಾನ್ಯ ಆಹಾರ ಸೇವಿಸುತ್ತಿರುವಾಗ ಇತರರು ಪಿಜ್ಜಾ, ಬರ್ಗರ್‌ ಗಳಂತಹ ಆಹಾರಗಳನ್ನ ಆರ್ಡರ್ ಮಾಡುವುದ್ರಿಂದ ಮಕ್ಕಳಲ್ಲಿ ಅನಗತ್ಯ ಆಕರ್ಷಣೆ, ತಾರತಮ್ಯ ಭಾವನೆ ಮೂಡಬಹುದು.   

Kishor KV