ಲಂಕಾ ದಹನ ಮಾಡಿದ ವೈಭವ್ ಸೂರ್ಯವಂಶಿ- ತ್ರಿಕೋನ ಸರಣಿ ಗೆದ್ದ ಟೀಂ ಇಂಡಿಯಾ

ಭಾರತೀಯರ ನಿರೀಕ್ಷೆ ಈಡೇರಿದೆ. ವೈಭವ್ ಸೂರ್ಯವಂಶಿ ಲಂಕಾ ನೆಲದಲ್ಲಿ ಲಂಕಾ ದಹನ ಮಾಡಿದ್ದಾರೆ. ಕೆಣಕಿದ ಸಿಂಹಳೀಯರ ಹೆಡೆಮುರಿ ಕಟ್ಟಿದ್ದಾರೆ ವೈಭವ್ ಸೂರ್ಯವಂಶಿ ಮತ್ತು ಟೀಮ್ ಇಂಡಿಯಾ ಯಂಗ್‌ಸ್ಟರ್ಸ್.
ಇದನ್ನೂ ಓದಿ:ಲಂಕಾ ವಿರುದ್ಧ ಸೇಡು ತೀರಿಸಿಕೊಂಡ ಸೂರ್ಯವಂಶಿ – 11 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವೈಭವ್ ವಿಶ್ವದಾಖಲೆ
ಶ್ರೀಲಂಕಾದ ದಂಬುಲ್ಲಾದಲ್ಲಿ ನಡೆದ ತ್ರಿಕೋನ ಏಕದಿನ ಸರಣಿಯ ಫೈನಲ್‌ನಲ್ಲಿ ಭಾರತ ಎ ತಂಡ ಶ್ರೀಲಂಕಾ ಎ ವಿರುದ್ಧ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡ 378 ರನ್ ಗಳಿಸಿತ್ತು. ಈ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 377 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ತಂಡದ ಪರ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 10 ಬೌಂಡರಿ ಮತ್ತು 8 ಸಿಕ್ಸರ್ ಸಿಡಿಸಿ 94 ರನ್ ಗಳಿಸಿದರು. ಮತ್ತೊಮ್ಮೆ ಶತಕವಂಚಿತರಾದರು ವೈಭವ್. ನಾಯಕ ತಿಲಕ್ ವರ್ಮಾ ಕೂಡ 67 ರನ್‌ಗಳನ್ನು ಗಳಿಸಿ ಸ್ಕೋರ್ ಹೆಚ್ಚಿಸುವಲ್ಲಿ ಯಶಸ್ವಿಯಾದರು. ಕೊನೆಯಲ್ಲಿ ಅನುಕುಲ್ ರಾಯ್ 15 ಎಸೆತಗಳಲ್ಲಿ 39 ರನ್ ಬಾರಿಸಿ ತಂಡದ ಸ್ಕೋರ್ ಅನ್ನು 377 ರನ್‌ಗಳಿಗೆ ತಲುಪಿಸಿದರು.
378 ರನ್‌ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ಎ ತಂಡ ಕಳಪೆ ಆರಂಭ ಪಡೆದುಕೊಂಡಿತು. 47.1 ಓವರ್‌ಗಳಲ್ಲಿ ಕೇವಲ 311 ರನ್‌ಗಳಿಗೆ ಆಲ್ ಔಟ್ ಆಯಿತು. ತಂಡದ ಪರ ವನಜಾ ಸಹನ್ 62 ರನ್ ಬಾರಿಸಿದರೆ, ಸದೇರಾ ಸಮರವಿಕ್ರಮ 52 ರನ್ ಗಳಿಸಿದರು. ಭಾರತದ ಪರ ಯಶ್ ಠಾಕೂರ್ ಮತ್ತು ವಿಪ್ರಜ್ ನಿಗಮ್ ಅದ್ಭುತ ಬೌಲಿಂಗ್ ಮಾಡಿದರು. ಇಬ್ಬರೂ ಬೌಲರ್‌ಗಳು ತಲಾ ಮೂರು ವಿಕೆಟ್ ಪಡೆದರು. ಅನುಕುಲ್ ರಾಯ್ ಕೂಡ ಎರಡು ವಿಕೆಟ್ ಪಡೆದರು. ಅಶೋಕ್ ಶರ್ಮಾ ಮತ್ತು ತಿಲಕ್ ವರ್ಮಾ ಕೂಡ ತಲಾ ಒಂದು ವಿಕೆಟ್ ಪಡೆದರು.
ಈ ಮೂಲಕ ಭಾರತ ಎ ತಂಡವು ಸತತ 7ನೇ ತ್ರಿಕೋನ ಸರಣಿಯನ್ನು ಗೆದ್ದು ಇತಿಹಾಸ ನಿರ್ಮಿಸಿದೆ.

ನೋಡಿರಿ

