ಲಂಕಾ ವಿರುದ್ಧ ಸೇಡು ತೀರಿಸಿಕೊಂಡ ಸೂರ್ಯವಂಶಿ – 11 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವೈಭವ್ ವಿಶ್ವದಾಖಲೆ
29 ಎಸೆತಗಳಲ್ಲಿ 94 ರನ್ ಗಳಿಸಿದ ವೈಭವ್ – ಸೂರ್ಯವಂಶಿಗೆ ಶತಕ ಜಸ್ಟ್ ಮಿಸ್..!

ಲಂಕಾ ವಿರುದ್ಧ ಸೇಡು ತೀರಿಸಿಕೊಂಡ ಸೂರ್ಯವಂಶಿ – 11 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವೈಭವ್ ವಿಶ್ವದಾಖಲೆ29 ಎಸೆತಗಳಲ್ಲಿ 94 ರನ್ ಗಳಿಸಿದ ವೈಭವ್ – ಸೂರ್ಯವಂಶಿಗೆ ಶತಕ ಜಸ್ಟ್ ಮಿಸ್..!

ದಂಬುಲ್ಲಾದಲ್ಲಿ ಭಾರತ ಎ ಮತ್ತು ಶ್ರೀಲಂಕಾ ಎ ನಡುವೆ ತ್ರಿಕೋನ ಏಕದಿನ ಸರಣಿಯ ಫೈನಲ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತ ಎ ತಂಡದ ಬೇಬಿ ಬಾಸ್ ವೈಭವ್ ಸೂರ್ಯವಂಶಿ ವಿಶ್ವದಾಖಲೆ ಬರೆದಿದ್ದಾರೆ.

ಇದನ್ನೂ ಓದಿ:ಗಂಭೀರ್ ಗೆ ಆಟ.. KLಗೆ ಪ್ರಾಣಸಂಕಟ – ಪದೇಪದೇ SLOT ಬದಲಿಸಿ ತಲೆಬಿಸಿ

ಭಾರತ ಎ ಮತ್ತು ಶ್ರೀಲಂಕಾ ಎ ತಂಡದ ನಡುವಿನ ಪಂದ್ಯಕ್ಕೆ ಸೇಡಿನ ಪಂದ್ಯ ಎಂದೇ ಕರೆಯಲಾಗಿತ್ತು. ವೈಭವ್ ಸೂರ್ಯವಂಶಿ ರಿವೇಂಜ್ ತೀರಿಸಿಕೊಳ್ಳಲಿದ್ದಾರೆ ಎಂದು ಕಾಯುತ್ತಿದ್ದ ಗಳಿಗೆಯೂ ಬಂದಿತ್ತು. ಭಾರತೀಯ ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಯಂತೆ ವೈಭವ್ ಸೂರ್ಯವಂಶಿ ಲಂಕಾ ದಹನ ಮಾಡಿದ್ದಾರೆ.

ಟಾಸ್ ಗೆದ್ದಿರುವ ಶ್ರೀಲಂಕಾ ತಂಡವು ಬೌಲಿಂಗ್ ಆಯ್ದುಕೊಂಡಿದೆ. ಆರಂಭಿಕರಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಹಾಫ್ ಸೆಂಚುರಿ ಸಿಡಿಸಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ ವೈಭವ್ ಸೂರ್ಯವಂಶಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ವೈಭವ್ ಸೂರ್ಯವಂಶಿ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ. ಈ ಮೂಲಕ ಲಿಸ್ಟ್ ಎ (ಏಕದಿನ) ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗದ ಅರ್ಧಶತಕ ಬಾರಿಸಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಲಂಕಾ ಬೌಲರ್​ಗಳ ಬೆಂಡೆತ್ತಿದ ಸೂರ್ಯವಂಶಿ ಮೊದಲ 11 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳನ್ನು ಸಿಡಿಸಿದ್ರು. ಈ ಸಿಡಿಲಬ್ಬರದ ಅರ್ಧಶತಕದೊಂದಿಗೆ ಶ್ರೀಲಂಕಾದ ಕೌಶಲ್ಯ ವೀರರತ್ನೆ ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. 2005 ರಲ್ಲಿ ಶ್ರೀಲಂಕಾದಲ್ಲಿ ನಡೆದ ದೇಶೀಯ ಲಿಸ್ಟ್ ಎ (ಏಕದಿನ) ಪಂದ್ಯದಲ್ಲಿ ಕೌಶಲ್ಯ ವೀರರತ್ನೆ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಈ ವಿಶ್ವ ದಾಖಲೆಯನ್ನು ವೈಭವ್ ಸೂರ್ಯವಂಶಿ ಅಳಿಸಿ ಹಾಕಿದ್ದಾರೆ. ಲಂಕಾ ನೆಲದಲ್ಲಿ ಲಂಕಾ ಆಟಗಾರನ ದಾಖಲೆಯನ್ನು ಪುಡಿಮಾಡಿದ್ದಾರೆ ಸೂರ್ಯವಂಶಿ.

ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ವಿಶ್ವ ದಾಖಲೆ ಎಬಿ ಡಿವಿಲಿಯರ್ಸ್​ ಹೆಸರಿನಲ್ಲಿದೆ. ಇದೀಗ ಲಿಸ್ಟ್​ ಎ ಪಂದ್ಯದ ಮೂಲಕ ಈ ದಾಖಲೆಯನ್ನು ಕೂಡ ವೈಭವ್ ಸೂರ್ಯವಂಶಿ ಉಡೀಸ್ ಮಾಡಿದ್ದಾರೆ. 2015 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎಬಿ ಡಿವಿಲಿಯರ್ಸ್ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ. 2025 ರಲ್ಲಿ ಐರ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್​ನ ಮ್ಯಾಥ್ಯೂ ಫೋರ್ಡ್ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಎಬಿಡಿ ದಾಖಲೆಯನ್ನು ಸರಿಗಟ್ಟಿದ್ದರು. ಇದೀಗ ಈ ಇಬ್ಬರ ವಿಶ್ವ ದಾಖಲೆಯನ್ನು ವೈಭವ್ ಸೂರ್ಯವಂಶಿ ಹಿಂದಿಕ್ಕಿದ್ದಾರೆ. ಭಾರತ ಎ, ಶ್ರೀಲಂಕಾ ಎ ಹಾಗೂ ಅಫ್ಘಾನಿಸ್ತಾನ್ ಎ ನಡುವಣ ಟೂರ್ನಿಯು ಅಂತಾರಾಷ್ಟ್ರೀಯ ಪಂದ್ಯಾವಳಿ. ಇದರೊಂದಿಗೆ ದ್ವಿರಾಷ್ಟ್ರೀಯ ಅಥವಾ ಬಹುರಾಷ್ಟ್ರೀಯ ಪಂದ್ಯಗಳಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ವಿಶ್ವ ದಾಖಲೆ ಕೂಡ ವೈಭವ್ ಸೂರ್ಯವಂಶಿ ಪಾಲಾಗಿದೆ.

ಇನ್ನು ವೈಭವ್ ಸೂರ್ಯವಂಶಿ10 ಫೋರ್ ಮತ್ತು 8 ಸಿಕ್ಸರ್ ಗಳ ಮೂಲಕ 94 ರನ್ ಗಳಿಸಿದ್ದಾರೆ. 94 ರನ್ ಗಳಿಸಿ ಔಟಾಗುವ ಮೂಲಕ ಶತಕವಂಚಿತರಾಗಿದ್ದಾರೆ. ಸೂರ್ಯವಂಶಿ ಇನ್ನೇನು ಸೆಂಚುರಿ ಸಿಡಿಸುತ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ಅದೇನೇ ಇದ್ದರೂ, ವೈಭವ್ ಇವತ್ತು ಲಂಕಾ ಎದುರು ಸಿಡಿಲಬ್ಬರ ವೈಭವ ತೋರಿಸಿದ್ದು ರಿಯಲಿ ಗ್ರೇಟ್.

Sulekha

Leave a Reply

Your email address will not be published. Required fields are marked *