ಗುಡ್ನ್ಯೂಸ್ ಕೊಟ್ಟ ಗಿಲ್ಲಿ – ಕಾವ್ಯ.. ಗಿಲ್ಲಿ ಫಸ್ಟ್ ಸಿನಿಮಾಗೆ ಕಾವು ನಾಯಕಿ? -ಶ್ರೀಲೀಲಾಗೂ ಸಿನಿಮಾದಲ್ಲಿ ಬಿಗ್ ರೋಲ್?

ಕಾಮಿಡಿ ಕಿಂಗ್ ಗಿಲ್ಲಿನಟ.. ಬಿಗ್ಬಾಸ್ಗೆ ಹೋಗಿ ಬಂದ್ಮೇಲೆ ದೊಡ್ಡ ಸೆಲೆಬ್ರಿಟಿಯೇ ಆಗಿದ್ದಾರೆ. ಹೋದಲ್ಲಿ ಬಂದಲ್ಲಿ ಫ್ಯಾನ್ಸ್ ಮುಗಿಬೀಳ್ತಿದ್ದಾರೆ. ಇಷ್ಟು ದಿನ ಬರೀ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಿದ್ದ ಗಿಲ್ಲಿ ಈಗ ಕರೆಗೂ ತೆರೆಮೇಲೆ ಅಬ್ಬರಿಸಲು ಸಜ್ಜಾಗಿದ್ದಾರೆ. ಅದೂ ಕೂಡ ಹೀರೋ ಆಗಿ ಸ್ಯಾಂಡಲ್ವುಡ್ನಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ಇದನ್ನೂ ಓದಿ: ಮೊದಲ ದಿನವೇ ಕಾಕ್ಟೇಲ್ -2 ಕಿಕ್ – ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಲೂಟಿ ಮಾಡಿದ ರಶ್ಮಿಕಾ ಸಿನಿಮಾ
ಬಿಗ್ಬಾಸ್ಗೆ ಹೋಗಿ ಬಂದ್ಮೇಲೆ ಗಿಲ್ಲಿ ಕ್ರೇಜ್ ನೆಕ್ಟ್ ಲೆವೆಲ್ನಲ್ಲಿದೆ. ಗಿಲ್ಲಿ ಹೋದಲ್ಲಿ ಬಂದಲ್ಲಿ ಜನ ಜೈಕಾರ ಹಾಕ್ತಿದ್ದಾರೆ. ಸ್ವತಃ ಗಿಲ್ಲಿ ಕೂಡ ಜನರ ಆ ಪ್ರೀತಿ ಕಂಡು ಶಾಕ್ ಆಗಿದ್ರು. ಅನಿರೀಕ್ಷಿತ ಕ್ರೇಜ್ ನೋಡಿ ಗಿಲ್ಲಿ ನಟಗೂ ಮುಂದೇನು ಎನ್ನುವ ಬಗ್ಗೆ ಕ್ಲಾರಿಟಿ ಇಲ್ಲದಂತಾಗಿತ್ತು. ಗಿಲ್ಲಿ ಕೂಡ ರಾತ್ರೋರಾತ್ರಿ ಯಾವುದೇ ಸಿನಿಮಾ ಘೋಷಣೆ ಮಾಡಲಿಲ್ಲ. ಮತ್ಯಾವುದೇ ರಿಯಾಲಿಟಿ ಶೋಗು ಹೋಗಲಿಲ್ಲ. ಹೀಗಾಗಿ ಗಿಲ್ಲಿ ಮುಂದಿನ ಪ್ಲ್ಯಾನ್ ಏನು ಅನ್ನೊ ಪ್ರಶ್ನೆ ಎಲ್ಲರನ್ನ ಕಾಡ್ತಿತ್ತು. ಇದೀಗ ಕಡೆಗೂ ಗಿಲ್ಲಿ ಫ್ಯಾನ್ಸ್ಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಹೀರೋ ಆಗಿ ತೆರೆಗೆ ಬರಲು ರೆಡಿಯಾಗಿದ್ದಾರೆ.
ಪಂಚಿಂಗ್ ಡೈಲಾಗ್ ಹೊಡೆಯೋ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಿಲ್ಲಿ ನಟ ಹಾಸ್ಯ ನಟನಾಗಿ, ಕಾಮಿಡಿಯನ್ ಆಗಿ ಗಮನ ಸೆಳೆದಿದ್ದರು. ಈ ಹಿಂದೆ ಗಿಲ್ಲಿ ನಟ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ ಸೂಪರ್ ಸ್ಟಾರ್ ಎಂಬ ಸಿನಿಮಾ ರಿಲೀಸ್ ಆಗಿತ್ತು. ಆದ್ರೆ ಆ ಸಿನಿಮಾ ಅಷ್ಟೊಂದು ಸೌಂಡ್ ಮಾಡಿರಲಿಲ್ಲ. ಇದೀಗ ಗಿಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಕಾಮಿಡಿ ಕಿಂಗ್ ಈಗ ಹೀರೋ ಆಗಿ ರಂಜಿಸಲು ರೆಡಿಯಾಗಿದ್ದಾರೆ. ಗಿಲ್ಲಿ ಸಿನಿಮಾಗೆ ಟಾಕ್ಸಿಕ್, ಜನನಾಯಗನ್ ನಂಥಾ ಸಿನಿಮಾ ನಿರ್ಮಿಸಿರುವ ಕೆವಿಎನ್ ಸಂಸ್ಥೆ ಗಿಲ್ಲಿಗೆ ಸಾಥ್ ನೀಡಿದೆ.
ಹೌದು, ಕೆವಿಎನ್ ಪ್ರೊಡಕ್ಷನ್ಸ್ನ ಕಾರ್ಯಕಾರಿ ನಿರ್ಮಾಪಕರಾದ ನವೀನ್ ಮತ್ತು ಹರೀಶ್ ಚೊಚ್ಚಲ ನಿರ್ಮಾಣದ ಸಿನಿಮಾ ಇದಾಗಿದ್ದು, ಗಿಲ್ಲಿ ನಟ ನಾಯಕ ನಟನಾಗಿ ಪ್ರೇಕ್ಷಕರಿಗೆ ದರ್ಶನ ಕೊಡಲಿದ್ದಾರೆ. ಬಾಂಬೆ ಮಿಠಾಯಿ, ಬ್ರಹ್ಮಚಾರಿ ಅಂತಹ ಕಾಮಿಡಿ ಸಿನಿಮಾಗಳಿಗೆ ಬ್ರ್ಯಾಂಡ್ ಆಗಿರುವ ನಿರ್ದೇಶಕ ಚಂದ್ರ ಮೋಹನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದ ಮುಹೂರ್ತ ಇಂದು ನೆರವೇರಿದೆ.
ಇನ್ನು ನಿರ್ಮಾಪಕ ವೆಂಕಟ್ ನಾರಾಯಣ್ ಗಿಲ್ಲಿ ಬಗ್ಗೆ ಮಾತನಾಡಿದ್ದಾರೆ. ಹೀರೋ ಆಗಿ ನಟಿಸುತ್ತಿರುವ ಗಿಲ್ಲಿ ಅವರೇ, ನಿಮಗೆ ಅಭಿನಂದನೆ. ನಾನು ಈಗಾಗಲೇ ಕಥೆ ಕೇಳಿದ್ದೇನೆ. ನಿಮಗೆ ಸೊಗಸಾಗಿ ಹೊಂದುವಂಥಾ ಸ್ಟೋರಿಲೈನ್ ಇದೆ. ಪ್ರತಿಭೆ ಇರುವವರಿಗೆಲ್ಲ ಕೆವಿಎನ್ ಪ್ರೊಡಕ್ಷನ್ ಬೆಂಬಲ ಯಾವಾಗಲೂ ಇರುತ್ತದೆ ಎಂದಿದ್ದಾರೆ.
ಇನ್ನು ಈ ಸಿನಿಮಾದ ಬಗ್ಗೆ ಗಿಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದ್ರು. ಇದ್ರಲ್ಲಿ ಗಿಲ್ಲಿ ಪ್ಯಾನ್ ಕರ್ನಾಟಕದ ಸಿನಿಮಾ ಆಸೆಯನ್ನು ಬಿಚ್ಚಿಟ್ಟಿದ್ದಾರೆ. ಮಂಡ್ಯ, ಮಂಗಳೂರು, ಬೆಂಗಳೂರು, ಉತ್ತರ ಕರ್ನಾಟಕದ ಭಾಷೆಯಲ್ಲಿ ಸಿನಿಮಾ ಕನಸಿನ ಬಗ್ಗೆ ಮಾತನಾಡಿದ್ದಾರೆ. ಗಿಲ್ಲಿ ಹೀರೋ ಆದ್ರೆ ಹೀರೋಯಿನ್ ಯಾರು ಎಂಬ ಪ್ರಶ್ನೆ ಫ್ಯಾನ್ಸ್ನ ಕಾಡ್ತಿದೆ. ಗಿಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಸಿನಿಮಾ ತಂಡ ಗಿಲ್ಲಿಗೆ ಶ್ರೀಲೀಲಾ ಅವರ ಫೋಟೋ ತೋರಿಸಿದ್ರು. ಇವರೇ ಹೀರೋಯಿನ್ ಅಂತ ಕೇಳಿದಾಗ ಹೌದು ಅಂತ ಹೇಳಿದ್ರು. ಅದಾದ ಬಳಿಕ ಸಿನಿಮಾ ತಂಡ ಗಿಲ್ಲಿಗೆ ಚಮಕ್ ಕೊಟ್ಟಿದೆ. ಇವರಲ್ಲ ಬೇರೆಯವರು ಹೀರೋಯಿನ್. ಈ ಫೋಟೋ ತಪ್ಪಿ ಬಂದಿದೆ ಅಂತ ಹೇಳಿದ್ರು. ಇದೀಗ ಗಿಲ್ಲಿಗೆ ಕಾವ್ಯ ಶೈವನೇ ಹೀರೋಯಿನ್ ಅಂತ ಫ್ಯಾನ್ಸ್ ಹೇಳ್ತಿದ್ದಾರೆ.
ಅಂದ್ಹಾಗೆ ಬಿಗ್ಬಾಸ್ನಲ್ಲಿ ಭಾರಿ ಸದ್ದು ಮಾಡಿದ ಜೋಡಿ ಅಂದ್ರೆ ಅದು ಗಿಲ್ಲಿ ಕಾವು.. ಕಾವೂ, ಕಾವೂ ಅಂತ ಗಿಲ್ಲಿ ದೊಡ್ಮನೆಯಲ್ಲಿ ಕಾಲೆಳಿತಾ ಇದ್ರೆ ಇರಿಟೇಟ್ ಮಾಡ್ಬೇಡ ಗಿಲ್ಲಿ ಅಂತ ಕಾವ್ಯ ಹುಸಿ ಮುನಿಸು ತೋರಿಸ್ತಿದ್ರು. ಈ ಕೋಳಿ ಜಗಳ ಆಡ್ತಾ ಇದ್ದ ಗಿಲ್ಲಿ-ಕಾವ್ಯ, ಜೋಡಿ ಆಗ್ಲಿ ಅಂತ ಅಂದವ್ರೇ ಹೆಚ್ಚು. ಇದೀಗ ಈ ಸಿನಿಮಾದ ಮೂಲಕ ಮತ್ತೆ ತೆರೆಮೇಲೆ ಬರುತ್ತಾ ಅಂತ ಕಾದುನೋಡ್ಬೇಕು.

ನೋಡಿರಿ

