KL ಔಟ್.. ಪ್ರಸಿದ್ಧ್ ಗೆ 5 ವಿಕೆಟ್ – IND ಬೌಲಿಂಗ್ ಗೆ ನೆಲ ಕಚ್ಚಿದ AFG
ಶತಕ ಸಿಡಿಸಿದ ಶಾಹಿದಿಗೆ SALUTE

ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಮೊದಲ 2 ಮ್ಯಾಚ್ಗಳನ್ನ ಗೆದ್ದು ಸರಣಿ ಕೈವಶ ಮಾಡ್ಕೊಂಡಿದ್ದ ಭಾರತ ಕ್ಲೀನ್ ಸ್ವೀಪ್ ಟಾರ್ಗೆಟ್ನಲ್ಲಿ ಮೂರನೇ ಪಂದ್ಯದಲ್ಲಿ ಅಖಾಡಕ್ಕಿಳಿದಿತ್ತು. ಚೆನ್ನೈನ ಚಿದಂಬರಂ ಮೈದಾನದಲ್ಲಿ ನಡೆದ ಮ್ಯಾಚಲ್ಲಿ ಬೌಲಿಂಗ್ ಖದರ್ ತೋರಿಸಿದೆ. ಇಂಟ್ರೆಸ್ಟಿಂಗ್ ಅಂದ್ರೆ ಈ ಪಂದ್ಯಕ್ಕಾಗಿ ಕಣಕ್ಕಿಳಿದಿದ್ದ ಪ್ಲೇಯಿಂಗ್ 11 ಕುತೂಹಲ ಮೂಡಿಸಿದೆ. ಕನ್ನಡಿಗ ಕೆಎಲ್ ರಾಹುಲ್ರನ್ನೇ ತಂಡದಿಂದ ಹೊರಗಿಟ್ಟಿದ್ದಾರೆ.
ಇದನ್ನೂ ಓದಿ : ರಿಷಬ್ ಪಂತ್ ಘರ್ ವಾಪ್ಸಿ – KLಗೆ ಒಲಿಯುತ್ತಾ ಡೆಲ್ಲಿ ಕ್ಯಾಪ್ಟನ್ಸಿ?
ಭಾರತದ ವಿರುದ್ಧ 2 ಪಂದ್ಯಗಳನ್ನ ಸೋತು ಸರಣಿ ಕಳ್ಕೊಂಡಿದ್ದ ಅಫ್ಘಾನಿಸ್ತಾನ ಮೂರನೇ ಮ್ಯಾಚಲ್ಲಿ ಗೆಲ್ಲಲೇಬೇಕು ಅನ್ನೋ ಮೈಂಡ್ಸೆಟ್ನಲ್ಲೇ ಅಖಾಡಕ್ಕಿಳಿದಿದೆ. ಈ ಪಂದ್ಯಕ್ಕೂ ಮುನ್ನ ಟಾಸ್ ಗೆದ್ದ ಅಫ್ಘಾನಿಸ್ತಾನ್ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ ಬ್ಯಾಟಿಂಗ್ ಚೂಸ್ ಮಾಡಿಕೊಳ್ತಾರೆ. ಹೀಗಾಗಿ ಭಾರತ ಬೌಲಿಂಗ್ ಖದರ್ ತೋರಿಸಬೇಕಾಯ್ತು. ಬಟ್ ಅಚ್ಚರಿ ಅನ್ಸಿದ್ದು ಏನಂದ್ರೆ ಟೀಮ್ ಇಂಡಿಯಾ ತನ್ನ ಪ್ಲೇಯಿಂಗ್ ಇಲೆವೆನ್ನಲ್ಲಿ 3 ಬದಲಾವಣೆ ಮಾಡಿಕೊಂಡಿದ್ದು. ಕಳೆದ ಮ್ಯಾಚ್ನಲ್ಲಿ ಗೋಲ್ಡನ್ ಡಕ್ ಔಟ್ ಆಗಿದ್ದ ಕೆಎಲ್ ರಾಹುಲ್ ಅವರನ್ನು ಈ ಪಂದ್ಯದಿಂದ ಕೈ ಬಿಡಲಾಗಿದ್ದು, ಅವರ ಬದಲಿಗೆ ನಿತೀಶ್ ಕುಮಾರ್ ರೆಡ್ಡಿ ಸ್ಥಾನ ಪಡೆದಿದ್ರು. ಏಕದಿನ ಮಾದರಿಯಲ್ಲಿ ಫಿನಿಶರ್ ರೋಲ್ ಪ್ಲೇ ಮಾಡುವ ರಾಹುಲ್ರನ್ನ ಯಾಕೆ ಹೊರಗಿಟ್ರು ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆ. ಹಾಗೇ ಲಾಸ್ಟ್ ಮ್ಯಾಚ್ನಲ್ಲಿ ಬೆಂಚ್ ಕಾದಿದ್ದ ಹರ್ಷ್ ದುಬೆ ಹಾಗೂ ಪ್ರಸಿದ್ಧ್ ಕೃಷ್ಣ ಕಣಕ್ಕಿಳಿದ್ರೆ ಕುಲ್ದೀಪ್ ಯಾದವ್ ಹಾಗೂ ಅರ್ಷದೀಪ್ ಸಿಂಗ್ರನ್ನು ಹೊರಗಿಡಲಾಗಿದೆ. ಹೀಗೆ ಡಿಫ್ರೆಂಡ್ ಪ್ಲ್ಯಾಟ್ನಲ್ಲಿ ಕಣಕ್ಕಿಳಿದ ಟೀಂ ಇಂಡಿಯಾ ಪರ ಪ್ರಸಿದ್ಧ್ ಕೃಷ್ಣ ಅಕ್ಷರಶಃ ಮ್ಯಾಜಿಕ್ ಮಾಡಿದ್ರು.
ಪ್ರಸಿದ್ಧ್ ಬೌಲಿಂಗ್ ಖದರ್.. ರೋಹಿತ್ ಕ್ಯಾಚ್ ಸಪೋರ್ಟ್!
ಟಾಸ್ ಸೋತು ಬೌಲಿಂಗ್ ಆರಂಭ ಮಾಡಿದ ಭಾರತದ ಪರ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅಕ್ಷರಶಃ ಮ್ಯಾಜಿಕ್ ಮಾಡಿದ್ರು. ಅದ್ರಲ್ಲೂ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮತ್ತು ಪ್ರಸಿದ್ಧ್ ಕೃಷ್ಣ ಅವರು ಜಂಟಿಯಾಗಿ ಅಪರೂಪದ ಸಾಧನೆ ಕೂಡ ಮಾಡಿದ್ರು. ಟಾಪ್ ಆರ್ಡರ್ನ ನಾಲ್ಕು ವಿಕೆಟ್ಗಳು ಪವರ್ಪ್ಲೇನಲ್ಲೇ ಉರುಳಿದವು. ಪ್ರಸಿದ್ಧ್ ಪಡೆದ ಈ ನಾಲ್ಕು ವಿಕೆಟ್ಗಳಲ್ಲಿ ಮೂರು ಕ್ಯಾಚ್ಗಳನ್ನ ಹಿಡಿದಿದ್ದು ರೋಹಿತ್ ಶರ್ಮಾ ಅವ್ರೇ. ಅಂದ್ರೆ ಪ್ರಸಿದ್ಧ್ ಬೇಟೆಯಾಡಿದ ಮೊದಲ 3 ವಿಕೆಟ್ಗಳು ರೋಹಿತ್ ಹಿಡಿದ ಅದ್ಭುತ ಕ್ಯಾಚ್ನಿಂದಲೇ ಬಂದವು. ಇನ್ನು ಅಫ್ಘಾನಿಸ್ತಾನ ವಿರುದ್ಧದ ಪವರ್‌ಪ್ಲೇನಲ್ಲಿ ಪ್ರಸಿದ್ಧ್ ಕೃಷ್ಣ ಐದು ಓವರ್‌ಗಳನ್ನು ಬೌಲ್ ಮಾಡಿ ಕೇವಲ ಆರು ರನ್‌ಗಳನ್ನ ನೀಡಿ ನಾಲ್ಕು ವಿಕೆಟ್‌ಗಳನ್ನು ತಗೊಂಡ್ರು. ಪ್ರಸಿದ್ಧ್ ಕೃಷ್ಣ ಏಕದಿನ ಪಂದ್ಯಗಳಲ್ಲಿ ಪವರ್‌ಪ್ಲೇನಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದ್ದು ಇದೇ ಮೊದಲು. ಹಾಗೆಯೇ ಪವರ್‌ಪ್ಲೇನಲ್ಲಿ ಭಾರತೀಯ ಬೌಲರ್‌ನ ಎರಡನೇ ಅತ್ಯುತ್ತಮ ಪ್ರದರ್ಶನ ಇದಾಗಿದೆ. ಈ ವಿಷಯದಲ್ಲಿ ಮೊದಲ ಸ್ಥಾನದಲ್ಲಿರುವ ಮೊಹಮ್ಮದ್ ಸಿರಾಜ್, ಕೇವಲ ಏಳು ರನ್‌ಗಳಿಗೆ ಐದು ವಿಕೆಟ್‌ಗಳನ್ನು ತಗೊಂಡಿದ್ರು. ಪ್ರಸಿದ್ಧ್ ಕೃಷ್ಣ ಅವರ ಬೌಲಿಂಗ್‌ನ ಟ್ಯಾಕ್ನಿಂದ ಅಫ್ಘಾನಿಸ್ತಾನ್ ಕೇವಲ 36 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳ್ಕೊಂಡು ಕ್ರೂಶಿಯಲ್ ಸ್ಟೇಜ್ನಲ್ಲಿತ್ತು. ಬಟ್ ಇಂಥಾ ಟೈಮಲ್ಲಿ ಜೊತೆಯಾಗಿದ್ದೇ ನಾಯಕ ಹಶ್ಮತ್ತುಲ್ಲಾ ಶಾಹಿದಿ ಹಾಗೇ ಅಝ್ಮತ್ತುಲ್ಲಾ ಒಮರ್ಜಾಯ್ ಶತಕದ ಜೊತೆಯಾಟವಾಡಿ ಆಫ್ಘನ್ಗೆ ಆಸರೆಯಾದ್ರು. ಈ ವೇಳೆ ಪ್ರಿನ್ಸ್ ಯಾದವ್ ಒಮರ್ಜಾಯ್ ವಿಕೆಟ್ ತೆಗೆದು ಜೊತೆಯಾಟಕ್ಕೆ ಬ್ರೇಕ್ ಹಾಕಿದ್ರು. ಹಾಗೇ 21 ರನ್ಸ್ ಗಳಿಸಿ ಸೆಟಲ್ ಆಗಿದ್ದ ಮೊಹಮ್ಮದ್ ನಬಿಗೆ ಗುರ್ನೂರ್ ಬ್ರಾರ್ ಬೌಲ್ಡ್ ಮಾಡಿ ಪೆವಿಲಿಯನ್ ದಾರಿ ತೋರಿಸಿದ್ರು. ಇನ್ನು ರಶೀದ್ ಖಾನ್, ಹರ್ಷ್ ದುಬೆ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದ್ರೆ ಅಲ್ಲಾ ಘಜನ್ಫರ್ ಮತ್ತು ಫರೀದ್ ಇಬ್ರೂ ರನ್ ಔಟ್ ಆದ್ರು. ಅಂತಿಮವಾಗಿ ನಾಯಕ ಶಾಹಿದಿ ಸಿಂಗಲ್ಲಾಗಿ ಫೈಟ್ ಮಾಡಿ ಸೆಂಚುರಿ ಕಲೆ ಹಾಕಿದ್ರು. ಏಕದಿನ ಮಾದರಿಯಲ್ಲಿ ಅವ್ರ ಮೊದಲ ಶತಕ ಇದು. 131 ಬಾಲಲ್ಲಿ 102 ರನ್ಸ್ ಗಳಿಸಿ ಪ್ರಸಿದ್ಧ್ ಕೃಷ್ಣಗೆ ವಿಕೆಟ್ ಒಪ್ಪಿಸಿದ್ರು. 44.2 ಓವರ್ಗಳಿಗೆ ಆಫ್ಘನ್ ಆಲೌಟ್ ಆದ್ರು. ಹಾಗೇ ಕನ್ನಡಿಗ ಪ್ರಸಿದ್ಧ್ ಫೈ ಫರ್ ವಿಕೆಟ್ಸ್ ತಗೊಂಡಿದ್ದು ವಿಶೇಷವಾಗಿತ್ತು. ಹೀಗೆ ಲಾಸ್ಟ್ ಮ್ಯಾಚಲ್ಲಿ ಬ್ಯಾಟಿಂಗ್ ಖದರ್ ತೋರಿಸಿದ್ದ ಭಾರತ ಇವತ್ತಿನ ಮ್ಯಾಚಲ್ಲಿ ಬೌಲಿಂಗ್ನಲ್ಲೇ ಪವರ್ ತೋರಿಸಿದೆ. ಈ ಮೂಲಕ ಭಾರತದ ಸರಣಿ ಆಫ್ಘನ್ ಪಾಲಿಗೆ ನಿರಾಸೆಯ ಟೂರ್ ಆಗಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ಹೀನಾಯ ಸೋಲು ಕಂಡಿದ್ದ ಆಫ್ಘನ್ ಪಡೆ ಈಗ ಏಕದಿನ ಮಾದರಿಯಲ್ಲೂ ಸೋತು ಸುಣ್ಣವಾಗಿದೆ.

ನೋಡಿರಿ

