ನಿಮ್ಮ ಮನೆಯಲ್ಲಿ ಬೆಳೆಸಿ ಈ ಔಷಧಿ ಗಿಡ – ಯಾವೆಲ್ಲಾ ಗಿಡಗಳು, ಏನೆಲ್ಲಾ ಉಪಯೋಗ ಗೊತ್ತಾ?

ನಿಮ್ಮ ಮನೆಯಲ್ಲಿ ಬೆಳೆಸಿ ಈ  ಔಷಧಿ ಗಿಡ – ಯಾವೆಲ್ಲಾ ಗಿಡಗಳು, ಏನೆಲ್ಲಾ ಉಪಯೋಗ ಗೊತ್ತಾ?

ಹಿಂದೆಲ್ಲಾ ಆರೋಗ್ಯ ಸರಿ ಇಲ್ಲ ಅಂದ್ರೆ ಈಗಿನ ತರ ಆಸ್ಪತ್ರೆಗಳಿಗೆ ಹೋಗ್ತಾ ಇರಲಿಲ್ಲ. ಮನೆ ಹಿತ್ತಲಲ್ಲಿ ಇದ್ದ ಔಷಧಿ ಗಿಡಗಳಿಂದಲೇ ತಮ್ಮ ಆರೋಗ್ಯವನ್ನ ಸರಿಮಾಡಿಕೊಳ್ಳುತ್ತಿದ್ದರು. ಈಗಲೂ ಕೂಡ ಸಾಕಷ್ಟು ಜನ ಔಷಧಿ ಸಸ್ಯಗಳನ್ನ ಬೆಳೆಸುತ್ತಾರೆ. ನಾವು ಮನೆಯಲ್ಲಿ  ಬೆಳಸಬೇಕಾದ  ಔಷಧಿ ಸಸ್ಯಗಳನ್ನ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..

ಓಂಕಾಳಿನ ಗಿಡ: ಮಕ್ಕಳಿಗೆ ಹೊಟ್ಟೆನೋವು ಬಂದಾಗ ಓಮದ ಅಥವಾ ಓಂಕಾಳಿನ ಎಲೆಗಳ ರಸ ಅಥವಾ ಪರಿಮಳ ತಕ್ಷಣದ ನೆಮ್ಮದಿ ನೀಡುತ್ತದೆ. ಜೀರ್ಣಕ್ರಿಯೆಗೂ ಇದು ಉತ್ತಮ.

ಅಮೃತಬಳ್ಳಿ (Giloy): ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಅಮೃತಬಳ್ಳಿ ಪ್ರಮುಖ ಪಾತ್ರ ವಹಿಸುತ್ತದೆ. ಜ್ವರ ಮತ್ತು ಮಧುಮೇಹ ನಿಯಂತ್ರಣಕ್ಕೂ ಇದನ್ನು ಬಳಸಲಾಗುತ್ತದೆ.

ತುಳಸಿ: ಪ್ರತಿ ಭಾರತೀಯರ ಮನೆಯಲ್ಲೂ ಕಾಣುವ ತುಳಸಿ ಸಸ್ಯವನ್ನು “ಔಷಧಿಗಳ ರಾಣಿ” ಎಂದು ಕರೆಯಲಾಗುತ್ತದೆ. ತುಳಸಿ ಎಲೆಗಳ ರಸ ಸೇವಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಶೀತ, ಕೆಮ್ಮು ಮತ್ತು ಗಂಟಲು ನೋವಿಗೆ ಇದು ಸಹಕಾರಿಯಾಗಿದೆ.

ಪುದೀನಾ: ಸಾಮಾನ್ಯವಾಗಿ ಪುದೀನಾ ಎಲೆಗಳು ಬಾಯಿಯ ದುರ್ವಾಸನೆ ಕಡಿಮೆ ಮಾಡುತ್ತವೆ. ಜೊತೆಗೆ ಅಜೀರ್ಣ, ಹೊಟ್ಟೆ ಉಬ್ಬರ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಿದೆ.

ಕರಿಬೇವು: ಅಡುಗೆಗೆ ಬಳಸುವ ಕರಿಬೇವು ಸುವಾಸನೆ ನೀಡುವುದರ ಜೊತೆಗೆ ಕಣ್ಣಿನ ಆರೋಗ್ಯ ಮತ್ತು ಕೂದಲು ಉದುರುವ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಲೆಮನ್ ಗ್ರಾಸ್: ಲೆಮನ್ ಗ್ರಾಸ್ ಚಹಾ ಸೇವಿಸಿದರೆ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಇದು ಸಹಕಾರಿ.

ಆಲೋವೆರಾ (Aloe Vera): ಅಲೋವೆರಾ ಅಥವಾ ಲೋಳೆಸರ ಚರ್ಮದ ಆರೈಕೆಗೆ ಮಾತ್ರವಲ್ಲ, ಜೀರ್ಣಕ್ರಿಯೆ ಸುಧಾರಿಸಲು ಮತ್ತು ಸಣ್ಣಪುಟ್ಟ ಸುಟ್ಟ ಗಾಯಗಳನ್ನು ಗುಣಪಡಿಸಲು ಸಹ ಉಪಯೋಗವಾಗುತ್ತದೆ.

Kishor KV

Leave a Reply

Your email address will not be published. Required fields are marked *