KKR ಕೈ ಬಿಟ್ಟವರೇ ಟೀಂ IND ಕ್ಯಾಪ್ಟನ್ – ಸೂರ್ಯ, ಶ್ರೇಯಸ್, ಗಿಲ್.. ಮತ್ಯಾರು?
ಕೊಲ್ಕತ್ತಾ X ಪ್ಲೇಯರ್ಸ್ ದರ್ಬಾರ್!

ಕೆಕೆಆರ್ To ಟೆಸ್ಟ್ ಕ್ಯಾಪ್ಟನ್.. ಕೆಕೆಆರ್ To ODI ಕ್ಯಾಪ್ಟನ್.. ಕೆಕೆಆರ್ To ಟಿ20ಐ ಕ್ಯಾಪ್ಟನ್. ಟೀಂ ಇಂಡಿಯಾದಲ್ಲಿ ಕ್ಯಾಪ್ಟನ್ ಮೂವರು ಕೆಕೆಆರ್‌ನ ಮನೆ ಮಕ್ಕಳಾಗಿದ್ದಾರೆ.. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಕೈಬಿಟ್ಟವರು.. ಚೆನ್ನಾಗಿ ಆಡಿದ್ರೂ ತಂಡದಿಂದ ಹೊರಬಂದವರಿಗೆ ಭಾರತ ತಂಡದಲ್ಲಿ ಚಾನ್ಸ್ ಸಿಕ್ಕಿದೆ. ಎಲ್ಲದ್ದಕ್ಕಿಂತ ಹೆಚ್ಚಾಗಿ ಕೆಕೆಆರ್‌ನಿಂದ ಹೊರ ಬಂದವರು ಟೀಂ ಇಂಡಿಯಾದ ಕ್ಯಾಪ್ಟನ್ ಆಗಿದ್ದಾರೆ.
ಹೌದು ಯಾರೆಲ್ಲಾ ಕೆಕೆಆರ್ ತಂಡವನ್ನ ಬಿಟ್ಟು ಹೊರ ಬರ್ತಾರೋ ಅವರಿಗೆ ಟೀಂ ಇಂಡಿಯಾದ ಕ್ಯಾಪ್ಟನ್ಸಿ ಪಟ್ಟ ಸಿಗುತ್ತಿದೆ. ತಂಡದಲ್ಲಿ ಅವಕಾಶ ಸಿಗದೆಯೇ ಅಥವಾ ಬೇರೆ ಕಾರಣದಿಂದ ಕೆಕೆಆರ್ ಬಿಟ್ಟುವರು ಭಾರತ ತಂಡದ ನಾಯಕರಾಗಿ ಮಿಂಚಿದ್ದಾರೆ. ಆ ಆಟಗಾರರೆಂದರೆ ಶ್ರೇಯಸ್ ಅಯ್ಯರ್, ಶುಭಮನ್ ಗಿಲ್ ಮತ್ತು ಸೂರ್ಯಕುಮಾರ್ ಯಾದವ್. ಈ ಮೂವರೂ ಆಟಗಾರರು ತಮ್ಮ ಆರಂಭಿಕ ಕ್ರಿಕೆಟ್ ದಿನಗಳನ್ನ ಅಥವಾ ಕೆಕೆಆರ್‌ನಲ್ಲಿ ಕಳೆದಿದ್ದಾರೆ. ಆ ನಂತರ ಟೆಸ್ಟ್, ಏಕದಿನ, ಟಿ20 ನಾಯಕರಾಗಿ ಈ ಮೂವರು ಕೂಡ ಸಕ್ಸಸ್ ಆಗಿದ್ದಾರೆ.
KKR ಬಿಟ್ಟ ಮೇಲೆ ಬದಲಾಯ್ತು ಸೂರ್ಯಕುಮಾರ್ ಲಕ್
ಸೂರ್ಯಕುಮಾರ್ ಅವರು 2014ರ ಐಪಿಎಲ್ ಹರಾಜಿನಲ್ಲಿ ಕೆಕೆಆರ್ ತಂಡಕ್ಕೆ ಸೇರಿದ್ರು. ಕೆಕೆಆರ್ ತಂಡದಲ್ಲಿ ಇವರ ಬ್ಯಾಟಿಂಗ್ ಪ್ರದರ್ಶನ ಹಾಗೂ ಮೈದಾನದಲ್ಲಿದ್ದ ಚುರುಕುತನವನ್ನು ಗಮನಿಸಿ, ಅವರನ್ನು ತಂಡದ ಉಪನಾಯಕನನ್ನಾಗಿ ಕೂಡ ನೇಮಿಸಲಾಗಿತ್ತು..ಇವರು 2014ರಲ್ಲಿ ಕೆಕೆಆರ್ ಐಪಿಎಲ್ ಟ್ರೋಫಿ ಗೆದ್ದಾಗ ಆ ತಂಡದ ಪ್ರಮುಖ ಭಾಗವಾಗಿದ್ದರು. 2017ರ ತನಕ ಸೂರ್ಯಕುಮಾರ್ ಕೆಕೆಆರ್ ತಂಡದಲ್ಲಿದ್ದರು. ಕೆಕೆಆರ್ ತಂಡದಲ್ಲಿ ಕೆಳ ಕ್ರಮಾಂಕದಲ್ಲಿ ಆಡುತ್ತಿದ್ದ ಇವರ ಸಾಮರ್ಥ್ಯವನ್ನು ಗುರುತಿಸಿ ಬಳಸಿಕೊಳ್ಳಲಿಲ್ಲ. 2017ರ ನಂತ್ರ ಮುಂಬೈ ಇಂಡಿಯನ್ಲ್‌ಗೆ ಕಾಲಿಟ್ಟ ಸೂರ್ಯಕುಮಾರ್ ಸ್ಟಾರ್ ಆಟಗಾರನಾಗಿ ಬೆಳೆದ್ರು. ನಂತರ ಭಾರತದ ಟಿ20ಐ ತಂಡದ ನಾಯಕರಾಗಿಯೂ ಯಶಸ್ವಿಯಾದರು. ಇವರ ನಾಯಕತ್ವದಲ್ಲಿ 2026 ಟಿ20 ವಿಶ್ವಕಪ್‌ನ್ನ ಭಾರತ ಗೆಲ್ತು..
ಕೆಕೆಆರ್‌ನಲ್ಲಿ ಮಿಂಚಿದ ಶುಭಮನ್ ಗಿಲ್
ಶುಭಮನ್ ಗಿಲ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೂಲಕ ತಮ್ಮ ಕ್ರಿಕೆಟ್ ಪಯಣ ಆರಂಭಿಸಿದರು. 2018ರ ಐಪಿಎಲ್ ಹರಾಜಿನಲ್ಲಿ ಕೆಕೆಆರ್ ಇವರನ್ನು ಖರೀದಿಸಿತು. ಕೆಕೆಆರ್‌ನಲ್ಲಿ ನಾಲ್ಕು ಸೀಸನ್ ಆಡಿದ ಗಿಲ್, ಫಿನಿಶರ್ ಪಾತ್ರದಿಂದ ಆರಂಭಿಸಿ ತಂಡದ ಪ್ರಮುಖ ಆರಂಭಿಕ ಆಟಗಾರನಾಗಿ ಬೆಳೆದರು. 2022ರಲ್ಲಿ ಕೆಕೆಆರ್ ಫ್ರಾಂಚೈಸಿ ಈ ಯುವ ಆರಂಭಿಕ ಆಟಗಾರನನ್ನು ತಂಡದಲ್ಲಿ ಮುಂದುವರಿಸಲಿಲ್ಲ. ಗುಜರಾತ್ ಟೈಟಾನ್ಸ್ ಸೇರಿದ ನಂತರ ಭರ್ಜರಿ ಪ್ರದರ್ಶನ ನೀಡಿ, ಭಾರತದ ಪುರುಷರ ಟೆಸ್ಟ್ ಮತ್ತು ಏಕದಿನ ತಂಡದ ನಾಯಕರಾಗಿ ಹೊರಹೊಮ್ಮಿದ್ದಾರೆ.
ಕೆಕೆಆರ್ ಬಿಟ್ಟ ಶ್ರೇಯಸ್ ಅಯ್ಯರ್‌ಗೆ ಟೀಂ IND ಕ್ಯಾಪ್ಟನ್ ಪಟ್ಟ
ಇನ್ನು 2022ರಲ್ಲಿ ಕೆಕೆಆರ್ ಸೇರಿದ ಶ್ರೇಯಸ್ ಅಯ್ಯರ್ ಅತ್ಯುತ್ತಮ ನಾಯಕತ್ವದಿಂದ ತಂಡವನ್ನ ಮುನ್ನೆಡೆಸಿದ್ರು. ಕೆಕೆಆರ್ ತಂಡಕ್ಕೆ 2024ರಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದುಕೊಟ್ಟರು. ಕಪ್ ತಂದುಕೊಟ್ಟರು ಅಯ್ಯರ್‌ನನ್ನ ಕೆಕೆಆರ್ ತಂಡದಿಂದ ಬಿಡುಗಡೆ ಮಾಡ್ತು. ನಂತ್ರ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರಿದ ಅಯ್ಯರ್, 2025ರ ಸೀಸನ್‌ನಲ್ಲಿ ಪಂಜಾಬ್ ಫೈನಲ್ ಪ್ರವೇಶ ಮಾಡುವುದ್ದಕ್ಕೆ ಕಾರಣರಾದ್ರು. ಶ್ರೇಯಸ್ ಅಯ್ಯರ್ ಅವರ ನಿರಂತರ ಪರಿಶ್ರಮ ಮತ್ತು ಐಪಿಎಲ್‌ನಲ್ಲಿನ ಅದ್ಭುತ ಪ್ರದರ್ಶನವನ್ನು ಪರಿಗಣಿಸಿ, ಬಿಸಿಸಿಐ ಇವರನ್ನು ಟೀಂ ಇಂಡಿಯಾದ ಟಿ 20 ತಂಡದ ನಾಯಕರಾಗಿ ನೇಮಿಸಿದೆ.
ನಾವು ಇದ್ದನ್ನೆಲ್ಲಾ ಗಮನಿಸಿದ್ರೆ ಕೆಕೆಆರ್‌ನಲ್ಲಿ ಆಡಿ ಬೆಳದ ಹುಡುಗರು ಟೀಂ ಇಂಡಿಯಾದ ಕ್ಯಾಪ್ಟನ್ ಆಗ್ತಿದ್ದಾರೆ. ಮುಂದೆ ಕೂಡ ಕೆಕೆಆರ್‌ನಲ್ಲಿ ಆಡಿದವರು ಟೀಂ ಇಂಡಿಯಾ ಕ್ಯಾಪ್ಟನ್ ಆಗ್ತಾರಾ ಅನ್ನೋದ್ದನ್ನ ಕಾದು ನೋಡಬೇಕಿದೆ..

ನೋಡಿರಿ

