ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಭರ್ಜರಿ ದಾಖಲೆ – ಹ್ಯಾಟ್ರಿಕ್ ಕ್ಯಾಚ್ ಹಿಡಿದ ಹಿಟ್‌ಮ್ಯಾನ್

ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಭರ್ಜರಿ ದಾಖಲೆ – ಹ್ಯಾಟ್ರಿಕ್ ಕ್ಯಾಚ್ ಹಿಡಿದ ಹಿಟ್‌ಮ್ಯಾನ್

ಅಫ್ಘಾನ್ ವಿರುದ್ಧ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಭರ್ಜರಿ ದಾಖಲೆ ಬರೆದಿ್ದ್ದಾರೆ. ಪ್ರಸಿದ್ಧ್ ಪಡೆದ ಈ ನಾಲ್ಕು ವಿಕೆಟ್​ಗಳಲ್ಲಿ  ಮೂರು ಕ್ಯಾಚ್‌ಗಳನ್ನ ರೋಹಿತ್ ಶರ್ಮಾನೇ ಹಿಡಿದಿದ್ದಾರೆ.

3 ಕ್ಯಾಚ್ ಹಿಡಿಯೋ ಮೂಲಕ ವಿವಿಎಸ್ ಲಕ್ಷ್ಮಣ್ ಮತ್ತು ಶಿಖರ್ ಧವನ್ ಅವರ ದಾಖಲೆಯನ್ನು ಸರಿಗಟ್ಟಿದರು. ಈ ಪಂದ್ಯದಲ್ಲಿ ಮೊದಲ ಸ್ಲಿಪ್​ನಲ್ಲಿ ಫಿಲ್ಡಿಂಗ್​ಗೆ ನಿಂತಿದ್ದ ರೋಹಿತ್ ಮೊದಲಿಗೆ ಅಫ್ಘನ್ ಆರಂಭಿಕ ರಹಮಾನಲ್ಲಾ ಗುರ್ಬಾಜ್ ಅವರ ಕ್ಯಾಚ್ ತೆಗೆದುಕೊಂಡರು. ನಂತರ ರಹಮತ್ ಶಾ ನೀಡಿದ ಕ್ಯಾಚ್ ಕೂಡ ರೋಹಿತ್ ಕೈ ಸೇರಿತು. ಮೂರನೇ ಕ್ಯಾಚ್ ರೂಪದಲ್ಲಿ ರೋಹಿತ್, ಇಬ್ರಾಹಿಂ ಜದ್ರಾನ್ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು. ರೋಹಿತ್ ಅಫ್ಘಾನಿಸ್ತಾನದ ಮೂವರು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ಕ್ಯಾಚ್‌ಗಳನ್ನು ಪೂರ್ಣಗೊಳಿಸಿದರು.

ಇದನ್ನೂ ಓದಿ:

ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಒಂದೇ ಬೌಲರ್​ನ ಬೌಲಿಂಗ್​ನಲ್ಲಿ ಮೂರು ಕ್ಯಾಚ್‌ಗಳನ್ನು ಪಡೆದು, ಈ ಸಾಧನೆ ಮಾಡಿದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು, ವಿವಿಎಸ್ ಲಕ್ಷ್ಮಣ್ ಮತ್ತು ಶಿಖರ್ ಧವನ್ ಏಕದಿನ ಪಂದ್ಯಗಳಲ್ಲಿ ಒಬ್ಬ ಬೌಲರ್​ನ ಬೌಲಿಂಗ್​ನಲ್ಲಿ ಮೂರು ಕ್ಯಾಚ್‌ಗಳನ್ನು ಪಡೆದ ಭಾರತೀಯ ಆಟಗಾರರಾಗಿದ್ದರು. ಲಕ್ಷ್ಮಣ್ 2004 ರಲ್ಲಿ ಇರ್ಫಾನ್ ಪಠಾಣ್ ಬೌಲಿಂಗ್​ನಲ್ಲಿ ಈ ಸಾಧನೆ ಮಾಡಿದ್ದರೆ, ಶಿಖರ್ ಧವನ್ 2018 ರಲ್ಲಿ ಜಸ್ಪ್ರೀತ್ ಬುಮ್ರಾ ಬೌಲಿಂಗ್​ನಲ್ಲಿ ಈ ಸಾಧನೆ ಮಾಡಿದ್ದರು. ಈಗ, 8 ವರ್ಷಗಳ ನಂತರ, ಅಂದರೆ 2026 ರಲ್ಲಿ, ರೋಹಿತ್ ಈ ಸಾಧನೆ ಮಾಡಿದ್ದಾರೆ.

Kishor KV

Leave a Reply

Your email address will not be published. Required fields are marked *