ಅಫ್ಘಾನಿಸ್ತಾನ್ ವಿರುದ್ಧ ಕನ್ನಡಿಗನ ಕಮಾಲ್ – 4 ವಿಕೆಟ್ ಪಡೆದ ಪ್ರಸಿದ್ಧ್ ಕೃಷ್ಣ

ಭಾರತ ಮತ್ತು ಅಫ್ಘಾನಿಸ್ತಾನ್ ನಡುವೆ ಏಕದಿನ ಸರಣಿಯ ಕೊನೆಯ ಮ್ಯಾಚ್ ಚೆನ್ನೈನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ಕಮಾಲ್ ಮಾಡಿದ್ದಾರೆ. ಮೊದಲ ನಾಲ್ಕು ವಿಕೆಟ್ ಉರುಳಿಸಿದ್ದಾರೆ.
ಇದನ್ನೂ ಓದಿ:ಟಾಸ್ ಗೆದ್ದ ಅಫ್ಘಾನ್ – K.L ರಾಹುಲ್ , ಅರ್ಶ್ದೀಪ್, ಕುಲ್ದೀಪ್ ಪ್ಲೇಯಿಂಗ್ 11 ನಿಂದ OUT
ಟೀಮ್ ಇಂಡಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧ ಮೂರನೇ ಪಂದ್ಯ ನಡೆಯುತ್ತಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಪಂದ್ಯದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದಿರುವ ಅಫ್ಘಾನಿಸ್ತಾನ್ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಆದರೆ, ಅಫ್ಘಾನಿಸ್ತಾನ ಈಗಾಗಲೇ ನಾಲ್ಕು ವಿಕೆಟ್ ಕಳೆದುಕೊಂಡಿದೆ. ಕೇವಲ 40 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡ ಅಫ್ಘಾನ್ ತಂಡ ಸಂಕಷ್ಟದಲ್ಲಿದೆ. ಆದರೆ, ಈ ನಾಲ್ಕಕ್ಕೆ ನಾಲ್ಕು ವಿಕೆಟ್ ಉರುಳಿಸಿದ್ದು ಕನ್ನಡಿಗ ಪ್ರಸಿದ್ಧ್ ಕೃಷ್ಣ.
ಟೀಮ್ ಇಂಡಿಯಾ ತನ್ನ ಪ್ಲೇಯಿಂಗ್ ಇಲೆವೆನ್ನಲ್ಲಿ 3 ಬದಲಾವಣೆ ಮಾಡಿಕೊಂಡಿದೆ. ಕಳೆದ ಮ್ಯಾಚ್ನಲ್ಲಿ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ ಅವರನ್ನು ಈ ಪಂದ್ಯದಿಂದ ಕೈ ಬಿಡಲಾಗಿದ್ದು, ಅವರ ಬದಲಿಗೆ ನಿತೀಶ್ ಕುಮಾರ್ ರೆಡ್ಡಿಗೆ ಸ್ಥಾನ ಕಲ್ಪಿಸಲಾಗಿದೆ. ಹಾಗೆಯೇ ಕಳೆದ ಮ್ಯಾಚ್ನಲ್ಲಿ ಬೆಂಚ್ ಕಾದಿದ್ದ ಹರ್ಷ್ ದುಬೆ ಹಾಗೂ ಪ್ರಸಿದ್ಧ್ ಕೃಷ್ಣ ಈ ಪಂದ್ಯದ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಂಡಿದ್ದಾರೆ. ಲಾಸ್ಟ್ ಮ್ಯಾಚ್ನಲ್ಲಿ ಬೆಂಚ್ ಕಾದಿರುವ ಪ್ರಸಿದ್ಧ್ ಕೃಷ್ಣ ಮೂರನೇ ಪಂದ್ಯದಲ್ಲಿ ನಿಜವಾಗಲೂ ಮ್ಯಾಜಿಕ್ ಮಾಡಿದ್ದಾರೆ.

ನೋಡಿರಿ

