ಟಾಸ್ ಗೆದ್ದ ಅಫ್ಘಾನ್ – K.L ರಾಹುಲ್ , ಅರ್ಶ್ದೀಪ್, ಕುಲ್ದೀಪ್ ಪ್ಲೇಯಿಂಗ್ 11 ನಿಂದ OUT

ಅಫ್ಘಾನಿಸ್ತಾನ Vs ಟೀಂ ಇಂಡಿಯಾ ನಡುವಿನ ಮೂರನೇ ಏಕದಿನ ಪಂದ್ಯ ಆರಂಭ ಆಗಿದ್ದು, ಅಫ್ಘಾನ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ ಈಗಾಗಲೇ ಸರಣಿಯನ್ನು 2-0ಯಿಂದ ಮುನ್ನಡೆ ಸಾಧಿಸಿರುವ ಭಾರತ, ಮೂರನೇ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸುವ ಕನಸು ಕಾಣುತ್ತಿದೆ. ಇನ್ನು ಕೊನೆಯ ಪಂದ್ಯದಲ್ಲಿ ಗೆಲುವು ದಾಖಲಿಸಿ ಗೌರವ ಉಳಿಸಿಕೊಳ್ಳುವ ಆಸೆ ಅಫ್ಘಾನ್ ತಂಡದ್ದಾಗಿದೆ.
ಇದನ್ನೂ ಓದಿ: ಡೆಲ್ಲಿ ಕ್ಯಾಪಿಟಲ್ಸ್ಗೆ ರಿಷಭ್ ರಿಎಂಟ್ರಿ – ಲಕ್ನೋ ತಂಡಕ್ಕೆ ಕುಲ್ದೀಪ್ ಯಾದವ್ ಟ್ರೇಡ್
ಟೀಂ ಇಂಡಿಯಾ ಮೂರು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ.. ಮೊದಲ ಪಂದ್ಯವಾಡಿದ್ದ ಹರ್ಷ್ ದುಬೆ, ಪ್ರಸಿದ್ಧ್ ಕೃಷ್ಣ ಮತ್ತು ನಿತೀಶ್ ಕುಮಾರ್ ರೆಡ್ಡಿ ಮತ್ತೆ ಆಡುವ ಬಳಗ ಸೇರಿದ್ದಾರೆ. ಕೆ.ಎಲ್ ರಾಹುಲ್, ಅರ್ಶ್ದೀಪ್ ಸಿಂಗ್ ಮತ್ತು ಕುಲ್ದೀಪ್ ಯಾದವ್ ಅವರನ್ನು ಕೈಬಿಡಲಾಗಿದೆ. ವೇಗಿ ಹರ್ಷಿತ್ ರಾಣಾ ತಂಡ ಸೇರಿದರೂ ಆಡುವ ಬಳಗದಲ್ಲಿ ಅವಕಾಶ ಪಡೆಯಲಿಲ್ಲ.
ಈ ಪಿಚ್ನಲ್ಲಿ ಟೀಂ ಇಂಡಿಯಾ 2023ರಲ್ಲಿ ಆಡಿತ್ತು, ಸುಮಾರು 3 ವರ್ಷದ ಬಳಿಕ ಮತ್ತೆ ಈ ಗ್ರೌಂಡ್ನಲ್ಲಿ ಭಾರತ ಆಡುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಲೀಗ್ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರ ಅಜೇಯ 97 ರನ್ಗಳ ನೆರವಿನಿಂದ ಭಾರತ ಗೆಲುವು ಸಾಧಿಸಿತ್ತು. ಆದರೆ ಇಂದಿನ ಪಂದ್ಯಕ್ಕೆ ರಾಹುಲ್ಗೆ ವಿಶ್ರಾಂತಿ ನೀಡಲಾಗಿದೆ.
ಟೀಂ ಇಂಡಿಯಾ ಪ್ಲೇಯಿಂಗ್ 11
ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ, ಶುಭಮನ್ ಗಿಲ್(ನಾಯಕ), ಶ್ರೇಯಸ್ ಅಯ್ಯರ್, ಇಶಾನ್ ಕಿಶನ್(ವಿ.ಕೀ.), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಹರ್ಷ್ ದುಬೆ, ಗುರ್ನೂರ್ ಬ್ರಾರ್, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್.

ನೋಡಿರಿ

