ರಿಷಬ್ ಪಂತ್ ಘರ್ ವಾಪ್ಸಿ – KLಗೆ ಒಲಿಯುತ್ತಾ ಡೆಲ್ಲಿ ಕ್ಯಾಪ್ಟನ್ಸಿ?
LSGಯತ್ತ ಮುಖ ಮಾಡಿದ ಕುಲ್ದೀಪ್?

ರಿಷಬ್ ಪಂತ್ ಘರ್ ವಾಪ್ಸಿ – KLಗೆ ಒಲಿಯುತ್ತಾ ಡೆಲ್ಲಿ ಕ್ಯಾಪ್ಟನ್ಸಿ?LSGಯತ್ತ ಮುಖ ಮಾಡಿದ ಕುಲ್ದೀಪ್?

2026ರ ಐಪಿಎಲ್​ನಲ್ಲಿ ಮುಗ್ಗರಿಸಿರೋ ಕೆಲ ತಂಡಗಳಲ್ಲಿ ಮುಂದಿನ ಐಪಿಎಲ್​ಗೂ ಮುನ್ನ ಮೇಜರ್ ಸರ್ಜರಿಯಾಗ್ತಿದೆ. ಅದ್ರಲ್ಲೂ ಟೂರ್ನಿ ಮುಕ್ತಾಯದ ಬೆನ್ನಲ್ಲೇ ಲಕ್ನೋ ತಂಡದ ಕ್ಯಾಪ್ಟನ್ಸಿಯಿಂದ ಕೆಳಗಿಳಿದಿದ್ದ ರಿಷಭ್ ಪಂತ್ ಈಗ ತಂಡವನ್ನೇ ಬಿಡೋಕೆ ರೆಡಿಯಾಗ್ತಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಅವ್ರು ಡೆಲ್ಲಿ ಕ್ಯಾಪಿಟಲ್ಸ್​ಗೆ ಕಂ ಬ್ಯಾಕ್ ಮಾಡ್ತಾರಾ ಅನ್ನೋ ಸುದ್ದಿ ಇದೆ. ಜೊತೆಗೆ ಡಿಸಿಗೆ ನಮ್ಮ ಕನ್ನಡಿಗ ಕ್ಯಾಪ್ಟನ್ ಆಗೋ ಚಾನ್ಸಸ್ ಕೂಡ ಇದೆ.

ಇದನ್ನೂ ಓದಿ : ಡೆಲ್ಲಿ ಕ್ಯಾಪಿಟಲ್ಸ್‌ಗೆ ರಿಷಭ್ ರಿಎಂಟ್ರಿ – ಲಕ್ನೋ ತಂಡಕ್ಕೆ ಕುಲ್ದೀಪ್ ಯಾದವ್ ಟ್ರೇಡ್

2025ರ ಐಪಿಎಲ್​ಗೂ ಮುನ್ನ ಮೆಗಾ ಆಕ್ಷನ್​ನಲ್ಲಿ ಲಕ್ನೋ ಫ್ರಾಂಚೈಸಿ 27 ಕೋಟಿ ರೂಪಾಯಿಗೆ ಪಂತ್​ರನ್ನ ಖರೀದಿ ಮಾಡಿತ್ತು.ಆದ್ರೆ ಪಂತ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಬಂದಿರಲಿಲ್ಲ. 2025 ರಲ್ಲಿ 269 ರನ್ ಗಳಿಸಿದರು ಮತ್ತು ಈ ಋತುವಿನಲ್ಲಿ 312 ರನ್ಸ್ ಕಲೆ ಹಾಕಿದ್ರು. ಹಾಗೇ ತಂಡ ಕೂಡ ಬಾಟಮ್​ನಲ್ಲೇ ಟೂರ್ನಿ ಮುಗಿಸಿತ್ತು. ಹೀಗಾಗಿ ಲಕ್ನೋ ಹೊಸ ನಾಯಕನ ಹುಡುಕಾಟದಲ್ಲಿದ್ರೆ ಪಂತ್ ಕೂಡ ಘರ್ ವಾಪ್ಸಿಗೆ ಸಿದ್ಧರಾಗ್ತಿದ್ದಾರೆ.

2027ರ ಐಪಿಎಲ್ ಗೆ ಡೆಲ್ಲಿ ತಂಡಕ್ಕೆ ರಿಷಭ್ ಪಂತ್ ವಾಪಸ್?

19ನೇ ಸೀಸನ್ ಐಪಿಎಲ್ ಮುಗುದ್ಮೇಲೆ ಲಕ್ನೋ ತಂಡದ ನಾಯಕತ್ವದಿಂದ ಕೆಳಗಿಳಿದಿರುವ ರಿಷಭ್ ಪಂತ್ 2027ರರ ಐಪಿಎಲ್​ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರುವ ಬಗ್ಗೆ ಮಾತುಕತೆಗಳು ನಡೀತಾ ಇದೆ. ಲಕ್ನೋ ತಂಡದಲ್ಲಿ ಬ್ಯಾಟಿಂಗ್ ಮತ್ತು ನಾಯಕತ್ವ ಎರಡರಲ್ಲೂ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಪಂತ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಫ್ರಾಂಚೈಸಿಗಳ ನಡುವೆ ಆಲ್-ಕ್ಯಾಶ್ ಡೀಲ್ ಅಥವಾ ಆಟಗಾರರ ಅದಲು-ಬದಲು ಪ್ರೊಸೆಸ್ ಬಗ್ಗೆಯೂ ಚರ್ಚೆಯಾಗ್ತಿದೆ. 2016 ರಿಂದ 2024 ರವರೆಗೆ ⁠ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ಪಂತ್ ಡೆಲ್ಲಿ ಕ್ಯಾಪ್ಟನ್ ಆಗಿಯೂ ಮುನ್ನಡೆಸಿರೋ ಅನುಭವ ಇದೆ. ಹೀಗಾಗಿ ಅದೇ ತಂಡಕ್ಕೆ ಮರಳಲು ತುಂಬಾನೇ ಇಂಟ್ರೆಸ್ಟ್ ತೋರಿಸಿದ್ದಾರೆ. ಆದ್ರೆ ಡೆಲ್ಲಿ ಘರ್ ವಾಪ್ಸಿ ಮಾಡ್ತೀನಿ ಅಂದ್ರೂ ಕ್ಯಾಪ್ಟನ್ಸಿ ನಿರಾಕರಿಸಿದ್ದಾರೆ ಎನ್ನಲಾಗಿದೆ.  ಕ್ಯಾಪ್ಟನ್ಸಿ ಪ್ರೆಶರ್​ನಿಂದ ಮುಕ್ತರಾಗಿ ಕೇವಲ ತಮ್ಮ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಕಡೆಗೆ ಹೆಚ್ಚಿನ ಗಮನ ಹರಿಸಲು ಪಂತ್ ನಿರ್ಧರಿಸಿದ್ದಾರೆ. ಹೀಗಾಗಿ ಡೆಲ್ಲಿಗೆ ಬಂದ್ರೂ ನಾಯಕತ್ವ ಪಡೆಯಲ್ಲ. ಹೀಗಿದ್ರೂ ಅಕ್ಷರ್ ಪಟೇಲ್ ಮುಂದಿನ ಸೀಸನ್​ಗೆ ನಾಯಕತ್ವದಿಂದ ಕೆಳಗಿಳಿಯೋ ಚಾನ್ಸಸ್ ಇದೆ.

ಕೆಎಲ್ ರಾಹುಲ್ ಗೆ ಒಲಿಯುತ್ತಾ ಕ್ಯಾಪ್ಟನ್ಸಿ..?

ರಿಷಭ್ ಪಂತ್ ಕ್ಯಾಪ್ಟನ್ ಆಗೋಕೆ ಒಪ್ಪದೇ ಇದ್ರೂ ಅಕ್ಷರ್ ಪಟೇಲ್ ಜೊತೆ ಮುಂದುವರಿಯೋಕೆ ಫ್ರಾಂಚೈಸಿ ತಯಾರಿಲ್ಲ. ಯಾಕಂದ್ರೆ 2025 ಮತ್ತು 2026ರಲ್ಲಿ ಅಕ್ಷರ್ ಪಟೇಲ್ ನಾಯಕತ್ವದಲ್ಲಿ ತಂಡದಲ್ಲಿ ಅಂತಾ ದೊಡ್ಡ ಇಂಪ್ಯಾಕ್ಟ್ ಆಗಿಲ್ಲ. ಜೊತೆಗೆ ಅಕ್ಷರ್ ಕಡೆಯಿಂದಲೂ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಹೀಗಾಗಿ ಕೆಎಲ್ ರಾಹುಲ್​ಗೆ ಹೊಣೆ ನೀಡೋಕೆ ನೋಡ್ತಿದ್ದಾರೆ. ಆದ್ರೆ 2025ರಲ್ಲೇ ನಾಯಕತ್ವ ನಿರಾಕರಿಸಿರೋ ರಾಹುಲ್ ಈಗ ಕ್ಯಾಪ್ಟನ್ಸಿ ಒಪ್ಪಿಕೊಳ್ತಾರಾ ಅನ್ನೋ ಬಗ್ಗೆಯೂ ಅನುಮಾನಗಳಿವೆ. ಹೀಗೆ ಡೆಲ್ಲಿಯಲ್ಲಿ ನಾಯಕತ್ವದ ಚರ್ಚೆ ನಡೀತಿದ್ರೆ ಕುಲ್ದೀಪ್ ಯಾದವ್ ಲಕ್ನೋ ತಂಡ ಸೇರೋ ಸುದ್ದಿ ಸದ್ದು ಮಾಡ್ತಿದೆ.

ಡೆಲ್ಲಿ ಪರ ಸದ್ದು ಮಾಡದ ಕುಲ್ದೀಪ್ ಯಾದವ್!

ಎಡಗೈ ಸ್ಪಿನ್ನರ್ ಕುಲ್ದೀಪ್ ಯಾದವ್ ಕಳೆದ ಕೆಲವು ವರ್ಷಗಳಿಂದ ಭಾರತದ ಪ್ರಮುಖ ಸ್ಪಿನ್ನರ್ ಆಗಿದ್ದಾರೆ. ಆದ್ರೂ2026ರ ಐಪಿಎಲ್ ನಲ್ಲಿ12 ಪಂದ್ಯಗಳಲ್ಲಿ 38.10 ರ ಸರಾಸರಿಯಲ್ಲಿ 10 ವಿಕೆಟ್‌ಗಳನ್ನು ಮತ್ತು 10.29 ರ ದುಬಾರಿ ಎಕಾನಮಿಯಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ರು. ಹೀಗಾಗಿ ಕುಲ್ದೀಪ್​ರನ್ನ ಕೈಬಿಡೋಕೆ ಡೆಲ್ಲಿ ಮುಂದಾಗಿದೆ. ಹೀಗಾಗಿ ದೆಹಲಿ ಮತ್ತು ಲಕ್ನೋ ಫ್ರಾಂಚೈಸಿಗಳು ಮುಂದಿನ ಆವೃತ್ತಿಗೂ ಮೊದಲೇ ಕುಲ್ದೀಪ್ ಮತ್ತು ಪಂತ್ ಅವರನ್ನು ತಮ್ಮ ತಂಡದಿಂದ ಟ್ರೇಡಿಂಗ್ ಮಾಡಿಕೊಳ್ಳೋ ಪ್ಲ್ಯಾನ್​ನಲ್ಲಿವೆ.  2022ರಿಂದ ಡೆಲ್ಲಿ ಪರ ಆಡ್ತಿರೋ ಕುಲ್ದೀಪ್ ಮುಂದಿನ ಆವೃತ್ತಿಗೆ ಲಕ್ನೋ ಪರ ಆಡುವ ಸಾಧ್ಯತೆಗಳು ಜಾಸ್ತಿ ಇದೆ. ಐಪಿಎಲ್​ನಲ್ಲಿ ಆಟಗಾರರ ಬದಲಾವಣೆ ಹೊಸದೇನೂ ಅಲ್ಲ. ಅದ್ರಲ್ಲೂ ಈಗ ದುಬಾರಿ ಮತ್ತು ಸ್ಟಾರ್ ಪ್ಲೇಯರ್​ಗಳೇ ಅದಲು ಬದಲಾಗ್ತಿರೋದು ಬಾರೀ ಕುತೂಹಲ ಮೂಡಿಸಿದೆ.

Shantha Kumari