ಜೋಫ್ರಾ ಬೌನ್ಸರ್.. ಗ್ಲೆನ್ ಸನ್ ಗ್ಲಾಸ್ – ಆರ್ಚರ್ ಗೇ ಟಾರ್ಚರ್ ಕೊಟ್ಟ ಫಿಲಿಪ್ಸ್
ಸೆಂಚುರಿ.. ಥಂಬ್ಸ್ ಅಪ್.. ವೈರಲ್ ಮ್ಯಾಚ್

ಟೆಸ್ಟ್ ಮ್ಯಾಚ್ ಅಂದ್ರೇನೇ ಹಾಗೇ.. ಆಡೋರಿಗೂ ಪೇಷನ್ಸ್ ಬೇಕು ನೋಡೋರಿಗೂ ಇಂಟ್ರೆಸ್ಟ್ ಇರ್ಬೇಕು. ಆಗಷ್ಟೇ ಟೆಸ್ಟ್ ಮ್ಯಾಚ್ನ ಅಸಲಿ ಕಿಕ್ ಸಿಗೋದು. ಆದ್ರೆ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಮ್ಯಾಚ್ ಕಂಪ್ಲೀಟ್ ಸಿನಿಮೇಟಿಕ್ ಥರ ಹೈ ಥ್ರಿಲ್ಲರ್ ಗೇಮ್ ಆಗಿದೆ. ಒಂದ್ಕಡೆ ಜೋಫ್ರಾ ಆರ್ಡರ್ ಬೌನ್ಸರ್ ಮೇಲೆ ಬೌನ್ಸರ್ ಹಾಕ್ತಿದ್ರೆ ಅತ್ತ ಗ್ಲೆನ್ ಫಿಲಿಪ್ಸ್ ಸನ್ ಗ್ಲಾಸ್ ಹಾಕ್ಕೊಂಡು ಸ್ಟೈಲಾಗಿ ಫೇಸ್ ಮಾಡಿದ್ದಾರೆ. ಈ ಇಬ್ಬರ ಜುಗಲ್ಬಂಧಿ ಸೋಶಿಯಲ್ ಮೀಡಿಯಾದಲ್ಲಿ ಹಲ್ಚಲ್ ಎಬ್ಬಿಸಿದೆ.
ಇದನ್ನೂ ಓದಿ : 2027ರ IPLಗೆ ಮೇಜರ್ ಸರ್ಜರಿ – 2 ವಾರ ಮೊದಲೇ ಟೂರ್ನಿ ಸ್ಟಾರ್ಟ್
ಇಂಗ್ಲೆಂಡ್ ಹಾಗೇ ನ್ಯೂಜಿಲೆಂಡ್ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡನೇ ಪಂದ್ಯ ದಿ ಓವಲ್ ಮೈದಾನದಲ್ಲಿ ನಡೀತಿದೆ. ಲಾರ್ಡ್ಸ್‌ನಲ್ಲಿ ನಡೆದ ಫಸ್ಟ್ ಮ್ಯಾಚಲ್ಲಿ ಸೋತಿರೋ ಕಿವೀಸ್ ಪಡೆ ಈಗ ಆಂಗ್ಲರ ಎದುರು ಶತಾಯ ಗತಾಯ ಸೆಕೆಂಡ್ ಮ್ಯಾಚ್ ವಿನ್ ಆಗ್ಲೇಬೇಕಿದೆ. ಹೀಗಾಗಿ ಫಸ್ಟ್ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ಗೆ ಒಳ್ಳೆ ಸ್ಟಾರ್ಟ್ ಸಿಕ್ಕಿರಲಿಲ್ಲ. 188 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳ್ಕೊಂಡಿತ್ತು. ಇಂಥಾ ಕ್ರೂಶಿಯಲ್ ಟೈಮಲ್ಲಿ 7ನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದ ಗ್ಲೆನ್ ಫಿಲಿಪ್ಸ್ ಜಾದೂ ಮಾಡಿದ್ದಾರೆ. ಬಾಣದಂತೆ ನುಗ್ಗಿ ಬರ್ತಿದ್ದ ಬಾಲುಗಳನ್ನ ದಿಟ್ಟವಾಗಿ ಎದುರಿಸಿ ಸೆಂಚುರಿ ಬಾರಿಸಿದ್ದಾರೆ. ಅದಕ್ಕಿಂತ ಇಂಟ್ರೆಸ್ಟಿಂಗ್ ಅಂದ್ರೆ ಜೋಫ್ರಾ ಆರ್ಚರ್ ಮತ್ತು ಗ್ಲೆನ್ ಫಿಲಿಪ್ಸ್ ಜುಗಲ್ಬಂಧಿ.
ಬಿಸಿಲ ಬೇಗೆ & ಆರ್ಚರ್ ಬಾಲ್ ಫೇಸ್ ಮಾಡಲು ಸನ್ ಗ್ಲಾಸ್ ಮೊರೆ!
ಈ ಪಂದ್ಯದ ಇಂಟ್ರೆಸ್ಟಿಂಗ್ ಪಾಯಿಂಟೇ ಇದು ನೋಡಿ. ನಾರ್ಮಲಿ ಮಧ್ಯಾಹ್ನದ ಟೈಮಲ್ಲಿ ಅಥವಾ ತುಂಬಾ ಬಿಸಿಲಿದ್ದಾಗ ಫೀಲ್ಡಿಂಗ್ ಮಾಡೋದು ಸನ್ ಗ್ಲಾಸ್ ಹಾಕ್ಕೊಂಡು ಆಡ್ತಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಮ್ಯಾಚಲ್ಲಿ ಕಿವೀಸ್ ಆಟಗಾರ ಗ್ಲೆನ್ ಫಿಲಿಪ್ಸ್ ಬ್ಯಾಟಿಂಗ್ ಮಾಡೋಕೆ ಸನ್ ಗ್ಲಾಸ್ ಹಾಕ್ಕೊಂಡಿದ್ದಾರೆ. ಫಸ್ಟ್ ಇನ್ನಿಂಗ್ಸ್ನ 67ನೇ ಓವರ್ ವೇಳೆ ಓವಲ್ ಮೈದಾನದ ಸೈಟ್‌ಸ್ಕ್ರೀನ್‌ನಿಂದ ಸೂರ್ಯನ ಬೆಳಕು ಕಣ್ಣಿಗೆ ರಾಚುತಾ ಇತ್ತು. ಇದ್ರಿಂದಾಗಿ ಬಾಲ್ ಫೇಸ್ ಮಾಡೋದು ಫಿಲಿಪ್ಸ್ಗೆ ಕಷ್ಟ ಆಗ್ತಿತ್ತು. ಹೀಗಾಗಿ ಹೆಲ್ಮೆಟ್ ಒಳಗೆ ಸನ್ ಗ್ಲಾಸ್ ಹಾಕ್ಕೊಂಡು ಬ್ಯಾಟಿಂಗ್ ಮಾಡ್ತಿದ್ರು. ಫಿಲಿಪ್ಸ್ರ ಈ ನಡೆಯನ್ನ ಕೆಲವರು ಡೇರಿಂಗ್, ಸೂಪರ್ ಅಂದ್ರೆ ಇನ್ನೊಂದಷ್ಟು ಜನ ಲೇವಡಿ ಮಾಡಿದ್ರು. ಆದ್ರೆ ಇದ್ಯಾವುದಕ್ಕೂ ಕ್ಯಾರೆ ಎನ್ನದ ಫಿಲಿಪ್ಸ್ 23 ಬಾಲಲ್ಲೇ 33 ರನ್ಸ್ ಕಲೆ ಹಾಕಿದ್ರು. ಇಂಥಾ ಟೈಮಲ್ಲಿ ಫಿಲಿಪ್ಸ್ಗೆ ಬ್ರೇಕ್ ಹಾಕಲು ಜೋಫ್ರಾ ಆರ್ಡರ್ ಬೌಲಿಂಗ್ಗೆ ಬರ್ತಾರೆ. ಆಗ್ಲೇ ನೋಡಿ ವೈವೋಲ್ಟೇಜ್ ಬ್ಯಾಟಲ್ ಸ್ಟಾರ್ಟ್ ಆಗಿತ್ತು. ಸನ್‌ಗ್ಲಾಸ್ ಧರಿಸಿದ್ದ ಫಿಲಿಪ್ಸ್ ವಿರುದ್ಧ ಸತತ 8 ಓವರ್‌ಗಳ ಕಾಲ ಆರ್ಚರ್ ಕೇವಲ ಶಾರ್ಟ್-ಪಿಚ್ ಬಾಲ್ ಹಾಕಿದ್ರು. ಫಸ್ಟ್ ಬಾಲಂತೂ ಬೌನ್ಸರ್ ಹಾಕಿ ನೇರವಾಗಿ ಅವ್ರ ಹೆಗಲಿಗೇ ಬಡಿದಿತ್ತು. ಫಿಲಿಪ್ಸ್ ಅವ್ರನ್ನ ಜೋಫ್ರಾ ಅದೆಷ್ಟರ ಮಟ್ಟಿಗೆ ಕಾಡಿದ್ರು ಅಂದ್ರೆ ಅವ್ರು ಹಾಕಿದಂತ 40 ಎಸೆತಗಳಲ್ಲಿ 33 ಎಸೆತಗಳು ಶಾರ್ಟ್-ಪಿಚ್ ಆಗಿದ್ದವು. ಸುಮಾರು 138 ಕಿ.ಮೀ ವೇಗದಲ್ಲಿ ಕುತ್ತಿಗೆ ಮಟ್ಟದಲ್ಲಿ ಬರ್ತಿದ್ದ ಬಾಲ್ಗಳನ್ನ ಫೇಸ್ ಮಾಡೋಕಾಗ್ದೇ ನೆಲಕ್ಕೆ ಕುಸಿಯುತ್ತಾ ಇದ್ರು. ಒಂದು ಸಲ ಅಂತೂ ಬಲವಾಗಿ ಪೆಟ್ಟು ಬಿದ್ದು ಕುಸಿದೇ ಬಿಟ್ರೇನೋ ಅನ್ನೋ ಥರ ಌಕ್ಟ್ ಮಾಡಿ ನೆಲಕ್ಕೆ ಬಿದ್ದು ಕೊನೆಗೆ ನ್ಯೂಜಿಲೆಂಡ್ ಡ್ರೆಸ್ಸಿಂಗ್ ರೂಮ್ ಕಡೆಗೆ ನನಗೇನು ಆಗಿಲ್ಲ ಐಌಮ್ ಓಕೆ ಅನ್ನೋ ಥರ ಥಂಬ್ಸ್-ಅಪ್ ತೋರಿಸಿದ್ರು. ಈ ವೇಳೆ ಡೇರಿಲ್ ಮಿಚೆಲ್ ಸೇರಿದಂತೆ ಇಡೀ ಕಿವೀಸ್ ಬಳಗ ನಕ್ಕು ನಕ್ಕು ಸುಸ್ತಾದ್ರು. ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ಥಿಂಗ್ ಅಂದ್ರೆ 30 ನಿಮಿಷಗಳ ಕಾಲ ಗ್ಲೆನ್ ಫಿಲಿಪ್ಸ್ ಯಾವುದೇ ರನ್ಸ್ ಗಳಿಸದೇ ಡಿಫೆನ್ಸಿವ್ ಆಗಿ ಆಡ್ತಿದ್ರು. ಇದ್ರಿಂದ ಆರ್ಚರ್ ಮತ್ತಷ್ಟು ಪ್ರೆಶರ್ಗೆ ಒಳಲಾಗಿದ್ರು.
ಹೀಗೆ ಬ್ಯಾಟಿಂಗ್ನಲ್ಲಿ ಕಂಪ್ಲೀಟ್ ಎಂಟರ್ಟೈನ್ ಮಾಡಿದ್ದ ಗ್ಲೆನ್ ಫಿಲಿಪ್ಸ್ ಮೊದಲ ದಿನದಾಟಕ್ಕೆ 49 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಎರಡನೇ ದಿನ ನೂರು ಗಳಿಸಿ ಔಟಾದರು. ಈ ಮೂಲಕ ನ್ಯೂಜಿಲೆಂಡ್ ಪರ ಮೂರೂ ಮಾದರಿಯಲ್ಲಿ ಶತಕ ಗಳಿಸಿದ ಆಟಗಾರ ಎನಿಸಿಕೊಂಡ್ರು. ಹಾಗೇ ಈ ಇನ್ನಿಂಗ್ಸ್ ಹಲವು ದಾಖಲೆಗಳಿಗೂ ಸಾಕ್ಷಿಯಾಯ್ತು. ಅಂತಿಮವಾಗಿ ನ್ಯೂಜಿಲೆಂಡ್ ತಂಡ 391 ರನ್ ಗಳಿಗೆ ಆಲೌಟ್ ಆಯಿತು. ಇನ್ನು ಇದಕ್ಕೆ ಉತ್ತರವಾಗಿ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಗುರುವಾರದ ಅಂತ್ಯದ ವೇಳೆಗೆ 6 ವಿಕೆಟ್ ನಷ್ಟಕ್ಕೆ 223 ರನ್ಸ್ ಕಲೆ ಹಾಕಿತ್ತು. ಒಟ್ನಲ್ಲಿ ಜೋಫ್ರಾ ಆರ್ಚರ್ ಮತ್ತು ಗ್ಲೆನ್ ಫಿಲಿಪ್ಸ್ ಅವ್ರ ಕ್ಲಾಶ್ ಕ್ರಿಕೆಟ್ ಪ್ರಿಯರಿಗೆ ಮಸ್ಟ್ ಎಂಟರ್ಟೈನ್ಮೆಂಟ್ ನೀಡಿದೆ. ಹಾಗೇ ಈ ಮ್ಯಾಚ್ ಫುಲ್ ವೈರಲ್ ಆಗಿದ್ದು ಟ್ರೆಂಡಿಂಗ್ನಲ್ಲಿದೆ.

ನೋಡಿರಿ

