ಮೊನ್ನೆ ಕಾಂಟ್ರವರ್ಸಿ.. ಈಗ ಪ್ಯಾಚಪ್.. ಮಾದರಿ ದಂಪತಿ ಕರೆಸಿ ತೇಪೆ ಹಚ್ಚಿದ್ರಾ? – ಜೋಡಿ No.1 ಶೋ TRP ಗಿಮಿಕ್ ಇದಾ?

ಸೆಲೆಬ್ರಿಟಿ ಜೋಡಿಗಳು ತಮ್ಮ ನಡುವಿನ ಅನುಬಂಧದ ಬಗ್ಗೆ ಜನರೆದುರು ತೆರೆದಿಡುವ ಶೋ ಅಂದ್ರೆ ಅದು ಜೋಡಿ.ನಂ.1. ಆದ್ರೆ ಕಳೆದ ವಾರದಿಂದ ಜೋಡಿ ನಂಬರ್ 1 ಶೋ ವಿರುದ್ಧ ಸಾಕಷ್ಟು ಮಂದಿ ಅಸಮಾಧಾನ ಹೊರ ಹಾಕಿದ್ರು. ಎಲ್ಲಿ ತನಕ ಅಂದ್ರೆ ಸೋಶಿಯಲ್ ಮೀಡಿಯಾ ತುಂಬಾ ಇದೇ ಶೋ ಬಗ್ಗೆಯೇ ಮಾತು.. ಆದ್ರೆ ಈ ವಾರದ ಸಂಚಿಕೆಯಲ್ಲಿ ವಿಭಿನ್ನ ಪ್ರಯತ್ನ ಮಾಡಲಾಗಿದೆ. ಮಾದರಿ ಜೋಡಿಗಳನ್ನ ಕರೆಸಿ ಸ್ಪರ್ಧಿಗಳಿಗೆ ಬದುಕಿನ ಪಾಠ ಮಾಡಲಾಗಿದೆ. ಆದ್ರೂ ಕೂಡ ಈ ಶೋ ವಿರುದ್ಧ ಒಂದಷ್ಟು ಮಂದಿ ಅಸಮಾಧಾನ ಹೊರ ಹಾಕಿದ್ದಾರೆ. ಮಾದರಿ ದಂಪತಿಗಳನ್ನ ಕರೆಸಿ ತೇಪೆ ಹಚ್ಚೋ ಕೆಲಸ ಮಾಡ್ತಿದ್ದೀರಾ ಅಂತ ಪ್ರಶ್ನೆ ಮಾಡ್ತಿದ್ದಾರೆ
ಇದನ್ನೂ ಓದಿ: ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರಿಗೆ ಲಕ್ಷ್ಮಣ ರೇಖೆ – ನಿಯಮ ಮೀರಿದರೆ ದಂಡದ ಜೊತೆ ಕಾನೂನು ಕ್ರಮ
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ‘ಜೋಡಿ ನಂ.1’ ರೋಚಕ ಘಟ್ಟ ತಲುಪಿದೆ. ಹಲವು ವರ್ಷಗಳಿಂದ ದಂಪತಿಗಳ ನಡುವಿನ ಪ್ರೀತಿ, ನಂಬಿಕೆ, ಹೊಂದಾಣಿಕೆ ಮತ್ತು ಭಾವನಾತ್ಮಕ ಬಂಧವನ್ನು ತೆರೆದಿಡುವ ಕಾರ್ಯಕ್ರಮವಾಗಿ ಗುರುತಿಸಿಕೊಂಡಿರುವ ಈ ಶೋನಲ್ಲಿ ಪ್ರತಿ ವಾರ ವಿಭಿನ್ನ ಟಾಸ್ಕ್‌ಗಳನ್ನ ನೀಡಲಾಗ್ತಿದೆ. ಸ್ಪರ್ಧಿಗಳು ಕೂಡ ಖುಷಿಯಿಂದ ಭಾಗವಸ್ತಿದ್ದಾರೆ. ಆದ್ರೆ ಕಳೆದ ಸಂಚಿಕೆಯಿಂದ ಈ ಶೋ ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗಿದೆ. ಕಳೆದ ವಾರ ‘ಜೋಡಿ ನಂ 1’ ಕಾರ್ಯಕ್ರಮದಲ್ಲಿ ಫೇಸ್ ಯುವರ್ ಪಾರ್ಟ್ನರ್ ರೌಂಡ್‌ನಲ್ಲಿ ಜೋಡಿಗಳು ಇಲ್ಲಿವರೆಗೂ ಹೇಳಲಾಗದ ನೋವನ್ನ ತಮ್ಮ ಪಾರ್ಟ್ನರ್ ಮುಂದೆ ಓಪನ್ ಆಗಿ ಹೊರಹಾಕಬೇಕಿತ್ತು. ಈ ರೌಂಡ್‌ನಲ್ಲಿ ಗೀತಾ ಭಾರತಿ ಭಟ್ – ರಾಜಾರಾಮ್ ಭಟ್ ಮಧ್ಯೆ ನಡೆದ ಮಾತುಕತೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಬೆನ್ನಲ್ಲೇ ನಟಿ ಗೀತಾ ನಾವು ಚೆನ್ನಾಗಿದ್ದೇವೆ ಎಂದು ಸ್ಪಷ್ಟನೆ ನೀಡಿದ್ರು. ಆದ್ರೂ ವೀಕ್ಷಕರು ಮಾತ್ರ ಶೋ ವಿರುದ್ಧ ಸಿಟ್ಟಾಗಿದ್ರು. ಕೆಲ ವೀಕ್ಷಕರು ಇದನ್ನು ಜೋಡಿ ನಂ.1 ಅಲ್ಲ, ಡಿವೋರ್ಸ್ ನಂ.1 ಎಂದು ವ್ಯಂಗ್ಯವಾಡುತ್ತಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ಇರಬೇಕಾದ ಈ ಶೋನಲ್ಲಿ ಪ್ರಸಾರ ಮಾಡೋದು ಎಷ್ಟು ಸರಿ? ಶೋ ಹೆಸರಲ್ಲಿ ಅನ್ಯೂನ್ಯವಾಗಿದ್ದ ಜೋಡಿಗಳ ಸಂಸಾರದಲ್ಲಿ ಹುಳಿ ಹಿಂಡೋ ಕೆಲಸ ಮಾಡಲಾಗ್ತಿದೆ. ದುಡ್ಡನ್ನು ಪಡೆದು ಇಂಥ ರಿಯಾಲಿಟಿ ಷೋನಲ್ಲಿ ಹೇಳಿರುವುದಾಗಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಇಂಥ ವಿಷ್ಯ ಕ್ಯಾಮೆರಾ ಮುಂದೆ ಹೇಳುವ ಅಗತ್ಯವೇನಿದೆ, ಸೆಲೆಬ್ರಿಟಿಯಾಗಿ ಹೀಗೆ ಮಾಡಬಾರದು ಎಂದು ತಿಳಿಯುವುದಿಲ್ಲವೆ, ದುಡ್ಡು ಪಡೆದುಕೊಂಡು ಇಂಥ ಪರ್ಸನಲ್ ವಿಷ್ಯ ಮಾತನಾಡ್ಬೋದಾ ಎಂದೆಲ್ಲಾ ಪ್ರಶ್ನೆ ಮಾಡಿದ್ದರು. ಆದ್ರೆ ಈ ವಾರದ ಸಂಚಿಕೆಯಲ್ಲಿ ವಿಭಿನ್ನ ಪ್ರಯತ್ನ ಮಾಡಲಾಗಿದೆ. ಮಾದರಿ ಜೋಡಿಗಳನ್ನ ಶೋಗೆ ಕರೆಸಿಕೊಳ್ಳಲಾಗಿದೆ.
ಹೌದು.. ಈ ವಾರ ಜೋಡಿ ನಂಬರ್ 1 ಶೋನಲ್ಲಿ ಈ ವಾರ ಆದರ್ಶ ಜೋಡಿಗಳು ರೌಂಡ್ ನಡೆದಿದೆ. ಹೀಗಾಗಿ ಹಿರಿಯ ಜೋಡಿಗಳನ್ನ ಶೋ ಕರೆಸಿಲಾಗಿದೆ. ಮುಖ್ಯಮಂತ್ರಿ ಚಂದ್ರು ದಂಪತಿ, ಸುಮಾ & ವಿಷ್ಣು, ಶ್ರೀನಾಥ್ ಅರಸ್ ದಂಪತಿ, ಭಾವಕವಿ ಬಿ.ಆರ್.ಲಕ್ಷ್ಮಣ್ ರಾವ್ & ಗಿರಿಜಾ, ಅವಿನಾಶ್-ಸಂಗೀತ , ಸೋಷಿಯಲ್ ಮೀಡಿಯಾ ಟ್ರೆಂಡ್ ಜೋಡಿ ಭಾರತಿ-ರಮೇಶ್, ಶಿವ-ಅಂಜಲಿ ಮುಂತಾದವರನ್ನ ಕರೆಸಲಾಗಿತ್ತು. ಜೋಡಿಗಳಿಗೆ ಬಾಂಧವ್ಯದ ಬಗ್ಗೆ ಪಾಠ ಮಾಡಲು ಕರೆಸಲಾಗಿದೆ. ಅವರ ಜೀವನದ ಕಷ್ಟ, ದುಖಃ, ಸುಖ ಎಲ್ಲಾ ಅನುಭವಗಳನ್ನು ಹಂಚಿಕೊಂಡಿದ್ದರು. ಈ ಮೂಲಕ ಪ್ರೀತ್ಸೋರಿಗೆ ರೂಪ, ಲಕ್ಷಣ ಬೇಡ ಹೃದಯ ಇದ್ರೆ ಸಾಕು ಎಂದು ಈ ಸಂಚಿಕೆಯಲ್ಲಿ ತೋರಿಸಲಾಗಿತ್ತು. ಆದ್ರೀಗ ಈ ಸಂಚಿಕೆಗೂ ಕೆಲ ವೀಕ್ಷಕರು ಅಸಮಾನ ಹೊರ ಹಾಕಿದ್ದಾರೆ.. ಮೊನ್ನೆ ಕಾಂಟ್ರವರ್ಸಿ.. ಈಗ ಪ್ಯಾಚಪ್‌ಗಾಗಿ ಈ ರೌಂಡ್ ಮಾಡಿದ್ರಾ? ಮಾದರಿ ದಂಪತಿ ಕರೆಸಿ ತೇಪೆ ಹಚ್ಚೋ ಕೆಲಸ ಮಾಡ್ತಿದ್ದೀರಾ ಎಂದು ಪ್ರಶ್ನೆ ಮಾಡ್ತಿದ್ದಾರೆ.
ಒಂದು ಶೋ ಅಂದ್ಮೇಲೆ ವೀಕ್ಷಕರು ಅದನ್ನ ಸೀರಿಯಸ್ ಆಗಿ ನೋಡ್ತಾರೆ. ನೆಗೆಟಿವ್, ಪಾಸಿಟಿವ್ ಕಮೆಂಟ್ಸ್ ಬರೋದು ಕಾಮನ್. ಇದೀಗ ಈ ಶೋ ವಿಚಾರದಲ್ಲೂ ಹೀಗೆ ಆಗಿದೆ. ಮುಂಬರುವ ಸಂಚಿಕೆಯಲ್ಲಿ ಏನೆಲ್ಲಾ ರೌಂಡ್ಸ್ ಇರಲಿದೆ ಅಂತ ಕಾದು ನೋಡ್ಬೇಕು.

ನೋಡಿರಿ

