ಮೂರು ತಿಂಗಳಿಂದ ಮೊದಲ ಬಾರಿ ಇಳಿದ ತೈಲ ಬೆಲೆ – ನಮ್ಮಲ್ಲೂ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ದರ ಇಳಿಯುತ್ತಾ?

ಮೂರು ತಿಂಗಳಿಂದ ಮೊದಲ ಬಾರಿ ಇಳಿದ ತೈಲ ಬೆಲೆ – ನಮ್ಮಲ್ಲೂ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ದರ ಇಳಿಯುತ್ತಾ?

ಅಮೆರಿಕ ಮತ್ತು ಇರಾನ್‌ America Iran war ನಡುವಿನ ಯುದ್ಧ ಕೊನೆಯಾಗಿ ಶಾಂತಿ ಮಾತುಕತೆಗೆ ಸಹಿ ಬೀಳುತ್ತಿದ್ದಂತೆ ಜಾಗತಿಕ ಮಾರುಕಟ್ಟೆಯಲ್ಲಿ Brent crude oil price ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿದೆ. ಫೆಬ್ರವರಿ ಅಂತ್ಯದಲ್ಲಿ ಶುರುವಾಗಿದ್ದ ಯುದ್ಧದಿಂದಾಗಿ ಏರುಮುಖದಲ್ಲಿ ಸಾಗಿದ್ದ ತೈಲ ಬೆಲೆ ಇದೇ ಮೊದಲ ಬಾರಿಗೆ ಇಳಿಕೆಯ ಹಾದಿ ಹಿಡಿದಿದ್ದು, ಶೇ. 5ರಷ್ಟು ಬೆಲೆ ಇಳಿಕೆಯಾಗಿದೆ.

ಮಧ್ಯಪ್ರಾಚ್ಯದ Middle East war ಯುದ್ಧ ಕೊನೆಗೊಂಡು, ಅಮೆರಿಕ ಹಾಗೂ ಇರಾನ್‌ ಶಾಂತಿಮಾತುಕತೆಗೆ ಸಹಿ ಹಾಕಿವೆ. ಇದರೊಂದಿಗೆ ಹಾರ್ಮುಜ್‌ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕಿದ್ದ ನಿರ್ಬಂಧಕ್ಕೆ ತೆರೆ ಬೀಳುತ್ತಿದ್ದು, ಜಾಗತಿಕ ಮಟ್ಟದಲ್ಲಿ ತೈಲ ಪೂರೈಕೆ ಮತ್ತೆ ಯಥಾಸ್ಥಿತಿಗೆ ಮರಳುವ ವಿಶ್ವಾಸ ಮೂಡಿದೆ. ಯುದ್ಧದಿಂದಾಗಿ ಇರಾನ್‌ನಲ್ಲಿ ತೈಲ ಬಾವಿಗಳನ್ನು ಮುಚ್ಚಲಾಗಿತ್ತು. ಈಗ ಯುದ್ಧ ನಿಂತಿರುವುದರಿಂದ ಮತ್ತೆ ತೈಲ ಬಾವಿಗಳು ಮತ್ತೆ ಕೆಲಸ ಆರಂಭಿಸಲಿದ್ದು, ಕಚ್ಚಾ ತೈಲದ ಬೆಳೆ ಇಳಿಕೆಯಾಗುತ್ತಿದೆ.

ಎಷ್ಟಿದ್ದ ಬೆಲೆ.. ಎಲ್ಲಿಗೆ ಬರುತ್ತಿದೆ?

ಯುದ್ಧದ ಸಂದರ್ಭದಲ್ಲಿ ಒಂದು ಬ್ಯಾರೆಲ್‌ಗೆ 112ರಿಂದ 117 ಡಾಲರ್‌ವರೆಗೆ ತಲುಪಿದ್ದ ಕಚ್ಚಾ ತೈಲದ ಬೆಲೆ ಈಗ ಒಂದು ಬ್ಯಾರಲ್‌ಗೆ 80 ಡಾಲರ್‌ಗಿಂತ ಕಡಿಮೆಯಾಗಿದೆ. ಇವತ್ತು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 79 ಡಾಲರ್‌ನ ಆಸುಪಾಸಿನಲ್ಲಿದೆ. ಅಲ್ಲದೆ ಯುದ್ಧ ನಿಂತಿರುವುದರಿಂದ ತೈಲದ ಪೂರೈಕೆಯೂ ಮತ್ತೆ ಸರಿದಾರಿಗೆ ಮರಳುವ ವಿಶ್ವಾಸ ಮೂಡಿದೆ. ಮುಂದಿನ 60 ದಿನಗಳಲ್ಲಿ ಅಮೆರಿಕಾ ಮತ್ತು ಇರಾನ್ ಪೂರ್ಣ ಶಾಂತಿ ಮಾತುಕತೆಯ ಒಪ್ಪಂದಕ್ಕೆ ಸಹಿ ಹಾಕಲು ತೀರ್ಮಾನಿಸಿವೆ.

ನಮ್ಮಲ್ಲೂ ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ದರ ಇಳಿಯುತ್ತಾ?

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿದ್ದಂತೆ, ಭಾರತದಲ್ಲೂ ತೈಲ ಬೆಲೆ ಇಳಿಕೆಯಾಗುತ್ತಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಅದರಲ್ಲೂ ಪೆಟ್ರೋಲ್‌, ಡೀಸೆಲ್‌ ಮತ್ತು ಎಲ್‌ಪಿಜಿಗಳ ದರಗಳನ್ನು ಯುದ್ಧದ ಕಾರಣದಿಂದಾಗಿ ತೈಲ ಕಂಪನಿಗಳು ಏರಿಕೆ ಮಾಡಿದ್ದವು. ಈಗ ಕಚ್ಚಾ ತೈಲ ಬೆಲೆ ಇಳಿಕೆ ಆಗುತ್ತಿರುವುದರಿಂದ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಇಳಿಕೆಯಾಗುತ್ತಾ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ತತಕ್ಷಣಕ್ಕೆ ತೈಲ ಬೆಲೆಯನ್ನು ತೈಲ ಕಂಪನಿಗಳು ಇಳಿಸುವ ಸಾಧ್ಯತೆ ಕಡಿಮೆಯಿದೆ. ಯಾಕಂದರೆ, ಭಾರತದಲ್ಲಿ ತೈಲ ಬೆಲೆ ಏರಿಕೆಯನ್ನು ತಡವಾಗಿ ಮಾಡಲಾಗಿದ್ದು, ಇದರಿಂದಾಗಿ ತೈಲ ಕಂಪನಿಗಳು ದೊಡ್ಡ ಮಟ್ಟದಲ್ಲಿ ನಷ್ಟ ಅನುಭವಿಸಿದ್ದವು ಎನ್ನಲಾಗಿದೆ. ಇದೇ ಕಾರಣಕ್ಕೆ ಈಗ ನಷ್ಟ ಸರಿದೂಗಿಸಿಕೊಂಡು, ನಂತರ ಪರಿಸ್ಥಿತಿ ನೋಡಿ ತೈಲ ಬೆಲೆ ಇಳಿಕೆ ಮಾಡುವ ಕಡೆಗೆ ತೈಲ ಕಂಪನಿಗಳು ಮುಂದಾಗಬಹುದು.

Sulekha

Leave a Reply

Your email address will not be published. Required fields are marked *