ಟೀಂ ಇಂಡಿಯಾ ಮಹಿಳಾ ಟಿ20ಐ ವಿಶ್ವಕಪ್ ತಂಡಕ್ಕೆ ಶಾಕ್ – ಟಗರುಪುಟ್ಟಿ ಶ್ರೇಯಾಂಕಾ OUT

ನೆದರ್‌ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಟಗರು ಪುಟ್ಟಿ ಖ್ಯಾತಿಯ ಶ್ರೇಯಾಂಕಾ ಪಾಟೀಲ್, ಅವರು ಟಿ20 ವಿಶ್ವಕಪ್‌ನಿಂದ ಹೊರ ನಡೆದಿದ್ದಾರೆ. ಇವರ ಬದಲಿಗೆ ಬಿಸಿಸಿಐ ಬದಲಿ ಆಟಗಾರ್ತಿಯನ್ನು ಘೋಷಣೆ ಮಾಡಿದೆ.
ಇದನ್ನೂ ಓದಿ:ವೈಭವ್ ಪಳಗಿಸೋಕೆ BCCI ಖೆಡ್ಡಾ- ಸೂರ್ಯವಂಶಿಗೆ ಟಫ್ ರೂಲ್ಸ್ ಬರೆ
ಟೀಮ್ ಇಂಡಿಯಾ ಪರ ಪ್ರಸಕ್ತ ವಿಶ್ವಕಪ್‌ನಲ್ಲಿ ಶ್ರೇಯಾಂಕಾ ಪಾಟೀಲ್ ಭರವಸೆ ಮೂಡಿಸಿದ ಆಟಗಾರ್ತಿ. ಇವರು ಪಾಕ್ ಹಾಗೂ ನೆದರ್‌ಲ್ಯಾಂಡ್ಸ್ ವಿರುದ್ಧ ಭರ್ಜರಿ ದಾಳಿ ನಡೆಸಿದ್ದರು. ಎರಡನೇ ಪಂದ್ಯದಲ್ಲಿ ಶ್ರೇಯಾಂಕಾ ಪಾಟೀಲ್ ಫೀಲ್ಡಿಂಗ್ ಮಾಡುವಾಗ ಪಾದಕ್ಕೆ ಗಾಯವಾಯಿತು. ಪರಿಣಾಮ ಎದ್ದು ನಿಲ್ಲದ ಸ್ಥಿತಿ ನಿರ್ಮಾಣ ಆಗಿತ್ತು.. ಹೀಗಾಗಿ ಇವರನ್ನು ಕರೆದುಕೊಂಡು ಹೋಗಲು ಮೈದಾನಕ್ಕೆ ಸ್ಟ್ರೆಕ್ಟರ್ ಬರಬೇಕಾಯಿತು. ಇದೇ ಗಾಯದ ಕಾರಣದಿಂದ ಇವರು ಬಿಗ್ ಇವೇಂಟ್‌ನಿಂದ ದೂರ ಸರಿದಿದ್ದಾರೆ. ಶ್ರೇಯಾಂಕಾ ಅವರ ಅನುಪಸ್ಥಿತಿಯು ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಅವರು ಅದ್ಭುತವಾಗಿ ಬೌಲಿಂಗ್ ಮಾಡುವುದು ಮಾತ್ರವಲ್ಲದೆ ಅತ್ಯುತ್ತಮ ಫೀಲ್ಡರ್ ಕೂಡ ಆಗಿದ್ದಾರೆ.
ಶ್ರೇಯಾಂಕಾ ಪಾಟೀಲ್ ಅವರಿಗೆ ಬದಲಿ ಆಟಗಾರ್ತಿಯಾಗಿ ಅನ್‌ಕ್ಯಾಪ್ಡ್ ಆಟಗಾರ್ತಿ ಪ್ರೇಮಾ ರಾವತ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. 24 ವರ್ಷದ ಪ್ರೇಮಾ ರಾವತ್ ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅದಕ್ಕಾಗಿಯೇ ಅವರನ್ನು ಬದಲಿಯಾಗಿ ಸೇರಿಸಿಕೊಳ್ಳಲಾಗಿದೆ. ಪ್ರೇಮಾ ಉತ್ತರಾಖಂಡ್ ಪರ ದೇಶೀಯ ಕ್ರಿಕೆಟ್ ಆಡುತ್ತಾರೆ ಮತ್ತು ಅಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ.

ನೋಡಿರಿ

