ಪವಿತ್ರಾಗೌಡಗೆ ರಾಜಾತಿಥ್ಯ ಸಿಗ್ತಿದೆ ಅಂತಾ ಹೇಳಿದ್ದೇ ತಪ್ಪಾಯ್ತಾ? ಆರೋಪ ಮಾಡಿದ ಮಹಿಳೆ ಮೇಲೇನೇ ಕೇಸ್!

ಪವಿತ್ರಾಗೌಡಗೆ ರಾಜಾತಿಥ್ಯ ಸಿಗ್ತಿದೆ ಅಂತಾ ಹೇಳಿದ್ದೇ ತಪ್ಪಾಯ್ತಾ? ಆರೋಪ ಮಾಡಿದ ಮಹಿಳೆ ಮೇಲೇನೇ ಕೇಸ್!

ನಟ ದರ್ಶನ್‌ ನಂತರ ಈಗ ಪವಿತ್ರಾ ಗೌಡಗೂ ಕೂಡಾ ಜೈಲಿನಲ್ಲಿ ರಾಜಾತಿಥ್ಯ ಸಿಗ್ತಿದೆ ಎಂಬ ವಿಚಾರ ಹೊರಬಿದ್ದಿದೆ. ಆದರೆ, ಈ ರೀತಿ ಆರೋಪ ಮಾಡಿದ್ದ ಮಹಿಳೆಯ ಮೇಲೆಯೇ ಕೇಸ್ ದಾಖಲಾಗಿದೆ.

ಇದನ್ನೂ ಓದಿ:ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಶಾಕ್ – 20 ಶಾಲೆಗಳಲ್ಲಿ ಝೀರೋ ಅಡ್ಮಿಷನ್

ಪವಿತ್ರಾ ಗೌಡಗೆ ಮನೆಯೂಟವೂ ಬರುತ್ತೆ, ತುಂಬಾ ಐಷಾರಾಮಿಯಾಗಿ ಜೈಲಲ್ಲಿ ಪವಿತ್ರಾ ಗೌಡ ಇದ್ದಾರೆ ಎಂಬ ವಿಚಾರ ಈಗ ಹೊರಬಿದ್ದಿದೆ. ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ‌ ಪ್ರಕರಣದ A1 ಪವಿತ್ರಾ ಗೌಡ ವಿರುದ್ಧ ಪ್ರಕರಣ ಒಂದರಲ್ಲಿ ಜೈಲಿಗೆ ಹೋಗಿದ್ದ ಸಂಧ್ಯಾ ಪವಿತ್ರಾ ನಾಗರಾಜ್ ಎಂಬುವರು ಈ ಆರೋಪವನ್ನು ಮಾಡಿದ್ದಾರೆ. ಜೈಲಿನ ಭದ್ರತಾ ಸಿಬ್ಬಂದಿ ಪವಿತ್ರಾಗೌಡ ಕಾಲು ಒತ್ತುತ್ತಾರೆ, ಪವಿತ್ರಾಗೌಡಗೆ ಮನೆಯೂಟವೂ ಬರುತ್ತೆ, ಸಿಬ್ಬಂದಿಗಳೇ ಮನೆಯಿಂದ ಬಾಕ್ಸ್ ತಗೊಂಡು ಬರ್ತಾರೆ ಎಂದು ಸಂಧ್ಯಾ ಪವಿತ್ರಾ ನಾಗರಾಜ್ ಎಂಬ ಮಹಿಳೆ ಆರೋಪ ಮಾಡಿದ್ದರು. ಇದೀಗ ಈ ಆರೋಪ ಮಾಡಿದ್ದ ಸಂಧ್ಯಾ ಪವಿತ್ರಾ ನಾಗರಾಜ್ ವಿರುದ್ಧ ದೂರು ದಾಖಲಾಗಿದೆ.

ಪ್ರಕರಣ ಒಂದರಲ್ಲಿ ಜೈಲಿಗೆ ಹೋಗಿದ್ದ ಸಂಧ್ಯಾ ಪವಿತ್ರ ನಾಗರಾಜ್, ಖಾಸಗಿ ಮಾಧ್ಯಮದಲ್ಲಿ ರಾಜಾತಿಥ್ಯದ ಬಗ್ಗೆ ಹೇಳಿಕೆ ನೀಡಿದ್ದರು. ತುಂಬಾ ಐಷಾರಾಮಿಯಾಗಿ ಜೈಲಲ್ಲಿ ಪವಿತ್ರಾಗೌಡ ಇದ್ದಾರೆ. ಜೈಲಿನಲ್ಲಿ ಮೇಕಪ್ ಮಾಡಿಕೊಳ್ಳೋಕೆ ವ್ಯವಸ್ಥೆ ಇದೆ, ಜೈಲು ಅನ್ನೋಕ್ಕಿಂತ ಮನೆಯಲ್ಲಿರೋ ರೀತಿ ಪವಿತ್ರಾ ಗೌಡ ಇದ್ದಾರೆ, ಸಂಧ್ಯಾ ಪವಿತ್ರಾ ನಾಗರಾಜ್​ ಹೇಳಿಕೆ ಹಿನ್ನೆಲೆಯಲ್ಲಿ ಜೈಲಾಧಿಕಾರಿಗಳಿಗೆ ಭದ್ರತಾ ಸಿಬ್ಬಂದಿ ರಶ್ಮಿ ದೂರು ನೀಡಿದ್ದಾರೆ. ರಶ್ಮೀ ದೂರು ಆಧರಿಸಿ ಪರಪ್ಪನ ಅಗ್ರಹಾರ ಪೊಲೀಸರಿಗೆ ಜೈಲಾಧಿಕಾರಿಗಳು ದೂರು ನೀಡಿದ್ದು, ದೂರು ಆಧರಿಸಿ ಸಂಧ್ಯಾ ವಿರುದ್ದ ಎನ್​​ಸಿಆರ್ ದಾಖಲಾಗಿದೆ. ಎಫ್​ಐಆರ್ ದಾಖಲಾತಿಗೆ ಪೊಲೀಸರು ಕೋರ್ಟ್ ಅನುಮತಿ ಕೇಳಿದ್ದು, ಕೋರ್ಟ್ ಅನುಮತಿ ನೀಡಿದ್ರೆ ಪೊಲೀಸರು ಎಫ್​ಐಆರ್ ದಾಖಲಿಸಿ ವಿಚಾರಣೆ ನಡೆಸಲಿದ್ದಾರೆ. ಸದ್ಯ ಕೋರ್ಟ್ ಅನುಮತಿಗಾಗಿ ಪೊಲೀಸರು ಕಾಯ್ತಿದ್ದಾರೆ.

ಈ ವಿಚಾರದ ಬಗ್ಗೆ ಸಂಧ್ಯಾ ಪವಿತ್ರ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ.  ಪವಿತ್ರಾ ಗೌಡಗೆ ರಾಜಾತಿಥ್ಯ ಸಿಗ್ತಾ ಇದೆ ಎನ್ನುವ ನನ್ನ ಆರೋಪಕ್ಕೆ ಈಗಲೂ ಬದ್ಧ ಎಂದು ಹೇಳಿದ್ದಾರೆ. ನನ್ನ ಮೇಲೆ NCR ದಾಖಲು ಮಾಡಿದ್ದಾರೆ, ನಾನು ಪ್ರಕರಣ ಎದುರಿಸುತ್ತೇನೆ, ನಾನು ಸತ್ಯವನ್ನ ಹೇಳಿರೋದು, ಮೂರು ತಿಂಗಳು ನಾನು ಜೈಲಲ್ಲಿದ್ದಾಗ ನಡೆದಿರೋದನ್ನ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

Sulekha

Leave a Reply

Your email address will not be published. Required fields are marked *