2027ರ ವಿಶ್ವಕಪ್ ರೇಸ್ ಗೆ ಕಿಶನ್ – ಸೆಂಚುರಿಯಲ್ಲೇ SLOT ಕೇಳಿದ್ರಾ?
ಯಾರಿಗೆ ಗೇಟ್ ಪಾಸ್ ಕೊಡುತ್ತೆ BCCI?

2027ರ ವಿಶ್ವಕಪ್ ರೇಸ್ ಗೆ ಕಿಶನ್ – ಸೆಂಚುರಿಯಲ್ಲೇ SLOT ಕೇಳಿದ್ರಾ?ಯಾರಿಗೆ ಗೇಟ್ ಪಾಸ್ ಕೊಡುತ್ತೆ BCCI?

2026ರ ವರ್ಷ ಇಶಾನ್ ಕಿಶನ್ ಪಾಲಿಗೆ ಅಕ್ಷರಶಃ ಗೋಲ್ಡರ್ ಇಯರ್. ಯಾಕಂದ್ರೆ ಬಿದ್ದ ನೆಲದಲ್ಲೇ ಎದ್ದು ನಿಂತಿರೋ ಕಿಶನ್ ಈಗ ನಡೆದಿದ್ದೇ ದಾರಿಯಾಗಿದೆ. ಸಿಕ್ಕ ಅವಕಾಶಗಳನ್ನ ಎರಡೂ ಕೈಯಿಂದ ಬಾಚಿಕೊಂಡು ತನ್ನದೇ ಟ್ರೇಡ್​ಮಾರ್ಕ್ ಸೆಟ್ ಮಾಡ್ತಿದ್ದಾರೆ. ಅದ್ರಲ್ಲೂ ಬ್ಯಾಟಿಂಗ್​ನಲ್ಲಿ ಅವ್ರ ಕನ್ಸಿಸ್ಟೆನ್ಸಿಯನ್ನ ಮೆಚ್ಚಲೇಬೇಕು. ಈಗ ಅಫ್ಘಾನಿಸ್ತಾನ ವಿರುದ್ಧದ ಮ್ಯಾಚಲ್ಲೂ ಬಿರುಗಾಳಿ ಎಬ್ಬಿಸಿರೋ ಪಾಕೆಟ್ ಡೈನಮೋ 2027ರ ಏಕದಿನ ವಿಶ್ವಕಪ್​ನಲ್ಲಿ ನನಗೂ ಚಾನ್ಸ್ ಕೊಡ್ಬೇಕು ಅನ್ನೋ ಬಿಗ್ ಮೆಸೇಜ್ ಕೊಟ್ಟಿದ್ದಾರೆ.

ಇದನ್ನೂ ಓದಿ : 2027ರ ವಿಶ್ವಕಪ್ ರೇಸ್ ಗೆ ಕಿಶನ್ – ಸೆಂಚುರಿಯಲ್ಲೇ SLOT ಕೇಳಿದ್ರಾ?

ಅಫ್ಘಾನಿಸ್ತಾನ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 170 ರನ್​ಗಳ ಬಿಗ್ ಮಾರ್ಜಿನ್​ನಿಂದ ಗೆದ್ದು ಸರಣಿ ಕೈವಶ ಮಾಡ್ಕೊಂಡಿದೆ. ಌಂಡ್ ಈ ಮ್ಯಾಚಲ್ಲಿ ಶುಭ್​ಮನ್ ಗಿಲ್ ಹಾಗೂ ಇಶಾನ್ ಕಿಶನ್ ಸೆಂಚುರಿ ಸಿಡಿಸಿದ್ದು ವಿಶೇಷವಾಗಿತ್ತು. ಈ ಇನ್ನಿಂಗ್ಸ್ ಬಳಿಕ ಇಶಾನ್ ಕಿಶನ್ ಅಂತೂ ಫುಲ್ ಟ್ರೆಂಡಿಂಗ್​ನಲ್ಲಿದ್ದಾರೆ. 2027ರ ಏಕದಿನ ವಿಶ್ವಕಪ್ ತಂಡದಲ್ಲಿ ಕಿಶನ್​ರನ್ನು ಆಡಿಸಲೇಬೇಕು ಅನ್ನೋ ಕೂಗು ಎದ್ದಿದೆ. ಯಾಕಂದ್ರೆ ಸಿಕ್ಕಿರೋ ಅವಕಾಶವನ್ನ ಕಿಶನ್ ಬಳಸಿಕೊಳ್ತಿರೋ ರೀತಿಯೇ ಅದ್ಭುತವಾಗಿದೆ.

ಕೊಹ್ಲಿಗೆ ಇಂಜುರಿ.. ಅವಕಾಶ ಪಡೆದ ಕಿಶನ್ ಬಿರುಗಾಳಿ!

ಏಕದಿನ ಮಾದರಿಯಲ್ಲಿ ಇಶಾನ್ ಕಿಶನ್ ಗೆ ಚಾನ್ಸ್ ಸಿಕ್ಕಿದ್ದೇ ಇಂಟ್ರೆಸ್ಟಿಂಗ್. ಅಫ್ಘಾನಿಸ್ತಾನ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿ ಇಂಜುರಿಕಾರಣಕ್ಕೆ ರೂಲ್ಡ್ ಔಟ್ ಆಗಿದ್ರು. ಹೀಗಾಗಿ ಇಶಾನ್ ಕಿಶನ್ ಗೆ ಅವಕಾಶ ನೀಡಿ ನಂಬರ್ 3 ಸ್ಲಾಟ್ ನಲ್ಲಿ ಬ್ಯಾಟಿಂಗ್ ಗೆ ಅವಕಾಶವನ್ನೂ ನೀಡ್ಲಾಗಿದೆ. ಮೊದಲ ಮ್ಯಾಚಲ್ಲಿ 34 ರನ್ ಗಳಿಸಿ ಔಟ್ ಆಗಿದ್ದ ಇಶಾನ್ ಕಿಶನ್ ಎರಡನೇ ಪಂದ್ಯದಲ್ಲಿ ಶತಕ ಬಾರಿಸಿದ್ರು. 79 ಎಸೆತಗಳಲ್ಲಿ 125 ರನ್ಸ್ ಗಳಿಸಿ ಔಟ್ ಆದ್ರು. ನಾಯಕ ಗಿಲ್ ಜೊತೆ 224 ರನ್​ಗಳ ಜೊತೆಯಾಟವೂ ಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲೂ ಏಕದಿನ ಪಂದ್ಯಗಳಲ್ಲಿ ಅವಕಾಶ ಕೊಡ್ಬೇಕು ಅನ್ನೋ ಬಗ್ಗೆ ಚರ್ಚೆಯಾಗ್ತಿದೆ. ಇಲ್ಲಿ ಕಿಶನ್ ಒಡಿಐಗೆ ಕಂ ಬ್ಯಾಕ್ ಮಾಡಿರೋದೇ 3 ವರ್ಷಗಳ ಬಳಿಕ. ಇದೇ ವರ್ಷ ಜನವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿ ಮೂಲಕ ಟೀಂ ಇಂಡಿಯಾಗೆ ಕಂ ಬ್ಯಾಕ್ ಮಾಡಿದ್ದ ಇಶಾನ್ ಕಿಶನ್ ಐಸಿಸಿ ಟಿ20 ವಿಶ್ವಕಪ್ ನಲ್ಲೂ ಆಡಿದ್ದರು. ಐಪಿಎಲ್ ನಲ್ಲೂ 500+ ರನ್ಸ್ ಕಲೆ ಹಾಕಿದ್ರು. ಹೀಗಾಗಿ 3 ವರ್ಷದ ಬಳಿಕ ಅವರಿಗೆ ಏಕದಿನ ತಂಡದಲ್ಲೂ ಸ್ಥಾನ ಸಿಕ್ಕಿತ್ತು. 2023ರಲ್ಲಿ ಅಫ್ಘಾನಿಸ್ತಾನದ ವಿರುದ್ಧವೇ ಅವರು ಕೊನೆಯ ಬಾರಿಗೆ ಏಕದಿನ ತಂಡದಲ್ಲಿ ಕಾಣಿಸಿಕೊಂಡಿದ್ದರು.ಈಗ ಅಫ್ಘನ್ ವಿರುದ್ಧದ ಸರಣಿ ಮೂಲಕವೇ ಕಂ ಬ್ಯಾಕ್ ಮಾಡಿದ್ದಾರೆ. ಕಂ ಬ್ಯಾಕ್ ಬಳಿಕ ಅವ್ರ ಇಂಟೆಂಟ್ ಅಂತೂ ಕ್ಲಿಯರ್ ಆಗಿದೆ. 2027ರ ಏಕದಿನ ವಿಶ್ವಕಪ್​ನಲ್ಲಿ ನಾನೂ ಆಡ್ತೀನಿ ಅವಕಾಶ ಕೊಡ್ಬೇಕು ಅನ್ನೋ ಸಂದೇಶ ರವಾನಿಸಿದ್ದಾರೆ.

ಕಿಶನ್ ಬಿಗ್ ಮೆಸೇಜ್!

ವಿರಾಟ್ ಕೊಹ್ಲಿ ಸ್ಥಾನದಲ್ಲಿ ಏಕದಿನ ತಂಡದಲ್ಲಿ ಕಿಶನ್ ಗೆ ಅವಕಾಶ

ನಂಬರ್ 3ನಲ್ಲಿ ಬ್ಯಾಟಿಂಗ್ ಮೂಲಕ ಕಿಶನ್ ಕನ್ಸಿಸ್ಟೆನ್ಸಿ ಪ್ರದರ್ಶನ

ಅದ್ಭುತ ಫಾರ್ಮ್ ನಲ್ಲಿದ್ದು 2027ರ ವಿಶ್ವಕಪ್ ತಂಡದಲ್ಲೂ ನಿರೀಕ್ಷೆ

ಡೊಮೆಸ್ಟಿಕ್, ವಿಶ್ವಕಪ್, ಐಪಿಎಲ್ ನಲ್ಲೂ ಅದ್ಭುತ ಪ್ರದರ್ಶನ

ಕಿಶನ್ ಗೆ ಅವಕಾಶ ಕೊಡಲೇಬೇಕು ಎನ್ನುವಂತೆ ಬ್ಯಾಟಿಂಗ್ ಖದರ್

ಕಿಶನ್ ಆಡಿಸಬೇಕು ಅಂದ್ರೆ ಪ್ಲೇಯಿಂಗ್ 11ನಿಂದ ಯಾರನ್ನ ಹೊರಗಿಡ್ತಾರೆ?

ವಿಕೆಟ್ ಕೀಪರ್ ಬ್ಯಾಟರ್ ಆಗಿರೋದ್ರಿಂದ ಹೆಚ್ಚಿನ ಅಡ್ವಾಂಟೇಜ್!

Shantha Kumari

Leave a Reply

Your email address will not be published. Required fields are marked *