ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಶಾಕ್ – 20 ಶಾಲೆಗಳಲ್ಲಿ ಝೀರೋ ಅಡ್ಮಿಷನ್
ಸುಳ್ಯ ತಾಲೂಕಿನ 7 ಸರ್ಕಾರಿ ಶಾಲೆಗಳಲ್ಲಿ ಅಡ್ಮಿಷನ್ ಸೊನ್ನೆ..!

ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಶಾಕ್ – 20 ಶಾಲೆಗಳಲ್ಲಿ ಝೀರೋ ಅಡ್ಮಿಷನ್ಸುಳ್ಯ ತಾಲೂಕಿನ 7 ಸರ್ಕಾರಿ ಶಾಲೆಗಳಲ್ಲಿ ಅಡ್ಮಿಷನ್ ಸೊನ್ನೆ..!

ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರುವುದಿಲ್ಲ ಅನ್ನೋ ಆತಂಕ ಮತ್ತೊಮ್ಮೆ ಎದುರಾಗಿದೆ. ಯಾಕೆಂದರೆ, ದಕ್ಷಿಣಕನ್ನಡ ಜಿಲ್ಲೆ ಒಂದರಲ್ಲೇ 20 ಶಾಲೆಗಳಿಗೆ ಅಡ್ಮಿಷನ್ ಆಗಿಲ್ಲ.

ಇದನ್ನೂ ಓದಿ:ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಇನ್ಮುಂದೆ ಈ ಮಾರ್ಗದಲ್ಲಿ 7 ನಿಮಿಷಕ್ಕೊಂದು ರೈಲು ಸಂಚಾರ!

ಹೊಸ ಶೈಕ್ಷಣಿಕ ವರ್ಷ ಶುರುವಾಗಿದೆ. ಶಾಲೆ ಆರಂಭವಾಗಿ ಈಗಾಗಲೇ 18 ದಿನಗಳಾಗಿವೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಕಾರ, ಈ ಶೈಕ್ಷಣಿಕ ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುಮಾರು 20 ಸರ್ಕಾರಿ ಶಾಲೆಗಳಲ್ಲಿ ಒಂದೇ ಒಂದು ಅಡ್ಮಿಷನ್ ಕೂಡಾ ಆಗಿಲ್ಲ. 20 ಸರ್ಕಾರಿ ಶಾಲೆಗಳು ಶೂನ್ಯ ದಾಖಲಾತಿಯನ್ನು ದಾಖಲಿಸಿವೆ. ಜೂನ್ ಅಂತ್ಯದವರೆಗೆ ದಾಖಲಾತಿ ಪ್ರಕ್ರಿಯೆ ಚಾಲನೆಯಲ್ಲಿದ್ದು, ಝೀರೋ ಅಡ್ಮಿಷನ್  ಚಿಂತೆಗೆ ಕಾರಣವಾಗಿದೆ.

ಇನ್ನೂ ಒಂದು ಶಾಕಿಂಗ್ ವಿಚಾರ ಏನೆಂದರೆ, ಸೊನ್ನೆ ದಾಖಲಾತಿ ಹೊಂದಿರುವ ಅತಿ ಹೆಚ್ಚು ಸರ್ಕಾರಿ ಶಾಲೆಗಳು ಸುಳ್ಯ ತಾಲೂಕಿನಲ್ಲಿವೆ. ಸುಳ್ಯ ವ್ಯಾಪ್ತಿಯಲ್ಲಿ ಬರುವ ಏಳು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯೇ ಆಗಿಲ್ಲ. ಮಂಗಳೂರು ಉತ್ತರದಲ್ಲಿ ನಾಲ್ಕು ಶಾಲೆಗಳು ಒಂದೇ ಒಂದು ದಾಖಲಾತಿ ಹೊಂದಿಲ್ಲ. ಮಂಗಳೂರು ದಕ್ಷಿಣದಲ್ಲಿ ಮೂರು ಶಾಲೆಗಳಿವೆ. ಮೂಡಬಿದಿರೆ ಮತ್ತು ಪುತ್ತೂರು ವ್ಯಾಪ್ತಿಯಲ್ಲಿ ತಲಾ ಎರಡು ಶಾಲೆಗಳಿವೆ.

ಸಮಗ್ರ ಶಿಕ್ಷಾ ಕರ್ನಾಟಕ (ಎಸ್‌ಎಸ್‌ಕೆ) ಉಪ ಯೋಜನಾ ಸಂಯೋಜಕಿ ಸುಮಂಗಲಾ ಎಸ್ ನಾಯಕ್, ಈ ಆತಂಕಕಾರಿ ವಿಚಾರ ತಿಳಿಸಿದ್ದಾರೆ. ಶೂನ್ಯ ದಾಖಲಾತಿ ಹೊಂದಿರುವ ಶಾಲೆಗಳ ಫೈನಲ್ ಲಿಸ್ಟ್ ಜೂನ್ 30 ರೊಳಗೆ ಅಂತಿಮಗೊಳಿಸಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಕಳೆದ ಐದು ವರ್ಷಗಳ ಜಿಲ್ಲಾ ಅಂಕಿಅಂಶಗಳನ್ನು ನೋಡಿದರೆ ಒಟ್ಟು 90 ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳು ಶೂನ್ಯ ದಾಖಲಾತಿಯನ್ನು ದಾಖಲಿಸಿವೆ. ನಂತರ ಅವುಗಳನ್ನು ಮುಚ್ಚಲಾಯಿತು, ಇದರಲ್ಲಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳು ಸೇರಿವೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

Sulekha

Leave a Reply

Your email address will not be published. Required fields are marked *