ಚಿರತೆಯಂತೆ ಹಾರಿ ಕ್ಯಾಚ್ ಹಿಡಿದ ವೈಭವ್ ಸೂರ್ಯವಂಶಿ – ಸೂರ್ಯವಂಶಿ ಅದ್ಭುತ ಡೈವಿಂಗ್‌ಗೆ ಫ್ಯಾನ್ಸ್ ಫಿದಾ

ಅಫ್ಘಾನಿಸ್ತಾನ ಎ ವಿರುದ್ಧದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಬ್ಯಾಟಿಂಗ್‌ನಿಂದ ಮ್ಯಾಜಿಕ್ ಮಾಡಿಲ್ಲ. ಆದರೆ, ಫೀಲ್ಡಿಂಗ್‌ನಲ್ಲಿ ವೈಭವ್ ಜಾದೂ ಮಾಡಿದ್ದಾರೆ. ಅದರಲ್ಲೂ ಸೂರ್ಯವಂಶಿ ಹಿಡಿದ ಸ್ಟನ್ನಿಂಗ್ ಕ್ಯಾಚ್ ಅಂತೂ ಬೇರೆ ಲೆವೆಲ್‌ನಲ್ಲಿತ್ತು.
ಇದನ್ನೂ ಓದಿ:ಅಫ್ಘಾನ್ ಹೆಡೆಮುರಿ ಕಟ್ಟಿ ಫೈನಲ್‌ಗೆ ಎಂಟ್ರಿಕೊಟ್ಟ ಭಾರತ A
ಅಫ್ಘಾನಿಸ್ತಾನ ಎ ತಂಡದ ವಿರುದ್ಧದ ಪಂದ್ಯದಲ್ಲಿ ಭಾರತ ಎ ತಂಡ ಭರ್ಜರಿ ಜಯ ಸಾಧಿಸಿದೆ. ಜೊತೆಗೆ ಫೈನಲ್‌ಗೂ ಎಂಟ್ರಿಕೊಟ್ಟಿದೆ. ಈ ಬಾರಿ ವೈಭವ್ ಸೂರ್ಯವಂಶಿ ಬ್ಯಾಟಿಂಗ್‌ನಲ್ಲಿ ಸೌಂಡ್ ಮಾಡಿಲ್ಲ. ಫೀಲ್ಡಿಂಗ್‌ನಲ್ಲಿ ಸದ್ದು ಮಾಡಿದ್ದಾರೆ. ಈ ಪಂದ್ಯದಲ್ಲಿ ಅವರು ಹಿಡಿದ ಒಂದು ಅದ್ಭುತ ಡೈವಿಂಗ್ ಕ್ಯಾಚ್‌ನ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಫ್ಘಾನಿಸ್ತಾನ ಇನ್ನಿಂಗ್ಸ್‌ನ ಆರನೇ ಓವರ್‌ನಲ್ಲಿ ಈ ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ಭಾರತದ ಬೌಲರ್ ಅಂಶುಲ್ ಕಂಬೋಜ್ ಎಸೆದ ಚೆಂಡನ್ನು ಅಫ್ಘಾನ್ ಬ್ಯಾಟರ್ ಖಾಲಿದ್ ತಾನಿಪಾಲ್ ಲೆಗ್ ಸೈಡ್‌ಗೆ ಬಾರಿಸಿದರು. ಆಗ ಶಾರ್ಟ್ ಮಿಡ್-ವಿಕೆಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸೂರ್ಯವಂಶಿ ಬಳಿ ಬಾಲ್ ಹೋಯ್ತು. ಆದರೆ, ಮೊದಲ ಪ್ರಯತ್ನದಲ್ಲಿ ಅವರಿಗೆ ಸರಿಯಾಗಿ ಕ್ಯಾಚ್ ಹಿಡಿಯಲು ಆಗಲಿಲ್ಲ. ಕೈಯಿಂದ ಜಾರಿದ ಚೆಂಡು ನೆಲಕ್ಕೆ ಬೀಳುವ ಮುನ್ನವೇ, ಸೂರ್ಯವಂಶಿ ಸ್ವಲ್ಪವೂ ಧೈರ್ಯ ಕಳೆದುಕೊಳ್ಳದೆ, ಗಾಳಿಯಲ್ಲಿ ಪಕ್ಕಕ್ಕೆ ಹಾರಿ ತಮ್ಮ ಬಲಗೈಯಲ್ಲಿ ಚೆಂಡನ್ನು ಹಿಡಿದುಬಿಟ್ಟರು. ಈ ಅದ್ಭುತ ಕ್ಯಾಚ್‌ನಿಂದಾಗಿ, 13 ರನ್ ಗಳಿಸಿದ್ದ ತಾನಿಪಾಲ್ ಪೆವಿಲಿಯನ್‌ಗೆ ಮರಳಬೇಕಾಯ್ತು. ಬಿಸಿಸಿಐ ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸೂರ್ಯವಂಶಿ ಬ್ಯಾಟಿಂಗ್‌ನಲ್ಲೂ ಭಾರತಕ್ಕೆ ಉತ್ತಮ ಆರಂಭ ನೀಡಿದ್ದರು. ಆದರೆ, ಇನ್ನಿಂಗ್ಸ್‌ನ ಆರಂಭದಲ್ಲಿ ಅವರಿಗೆ ಅದೃಷ್ಟ ಕೂಡ ಕೈಹಿಡಿದಿತ್ತು. ಖಾತೆ ತೆರೆಯುವ ಮುನ್ನವೇ ಪಾಯಿಂಟ್‌ನಲ್ಲಿ ಅವರು ನೀಡಿದ ಕ್ಯಾಚ್ ಅನ್ನು ಫೀಲ್ಡರ್ ಕೈಚೆಲ್ಲಿದರು. ಇದಾದ ನಂತರ, ಅಫ್ಘಾನ್ ಫೀಲ್ಡರ್‌ಗಳು ಇನ್ನೂ ಎರಡು ಬಾರಿ ಸೂರ್ಯವಂಶಿಯ ಕ್ಯಾಚ್‌ಗಳನ್ನು ಬಿಟ್ಟರು. ಸಿಕ್ಕ ಈ ಜೀವದಾನಗಳನ್ನು ಚೆನ್ನಾಗಿ ಬಳಸಿಕೊಂಡ ಸೂರ್ಯವಂಶಿ, ಕೇವಲ 28 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 38 ರನ್ ಹೊಡೆದಿದ್ದರು. ನಂತರ ಫೀಲ್ಡಿಂಗ್ ನಲ್ಲೂ ಕಮಾಲ್ ಮಾಡಿದರು.

ನೋಡಿರಿ

