ಅಫ್ಘಾನ್ ಹೆಡೆಮುರಿ ಕಟ್ಟಿ ಫೈನಲ್‌ಗೆ ಎಂಟ್ರಿಕೊಟ್ಟ ಭಾರತ A

ಅಫ್ಘಾನ್ ಹೆಡೆಮುರಿ ಕಟ್ಟಿ ಫೈನಲ್‌ಗೆ ಎಂಟ್ರಿಕೊಟ್ಟ ಭಾರತ A

ಭಾರತ ಎ ತಂಡ ಅಂತೂ ಇಂತೂ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇಂದು ನಡೆದ ಅಫ್ಘಾನ್ Vs ಟೀಂ ಇಂಡಿಯಾ A  ಪಂದ್ಯ ಎರಡೂ ತಂಡಕ್ಕೂ ನಿರ್ಣಾಯಕವಾಗಿತ್ತು. ಆದ್ರೆ ಇವತ್ತು ನಮ್ಮ ಟೀಂ ಇಂಡಿಯಾ A ಅಫ್ಘಾನ್‌ನನ್ನ 101 ರನ್‌ಗಳಿಂದ ಸೋಲಿಸಿ, ಉತ್ತಮ ರನ್‌ ರೇಟ್ ಮೂಲಕ ಅಧಿಕೃತವಾಗಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಇದನ್ನೂ ಓದಿ:ಟೀಂ ಇಂಡಿಯಾ ಹೊಡಿಬಡಿ ಆಟಕ್ಕೆ ಅಫ್ಘಾನ್ ಸುಸ್ತು – 403ರನ್‌ಗಳ ಬಿಗ್ ಟಾರ್ಗೆಟ್ ನೀಡಿದ ಗಿಲ್ ಪಡೆ

ಅಂದಹಾಗೇ ಶ್ರೀಲಂಕಾದ ದಂಬಲ್ಲಾದಲ್ಲಿ ನಡೆದ ತ್ರಿಕೋನ ಸರಣಿಯ 5ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ಎ ಹಾಗೂ ಭಾರತ ಎ ತಂಡಗಳು ಮುಖಾಮುಖಿಯಾಗಿದ್ದವು. ಫೈನಲ್​ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ಉಭಯ ತಂಡಗಳಿಗೆ ಈ ಪಂದ್ಯದಲ್ಲಿನ ಗೆಲುವು ಅತ್ಯವಶ್ಯಕವಾಗಿತ್ತು. ಅದರಲ್ಲೂ ಸತತ ಎರಡು ಪಂದ್ಯಗಳನ್ನು ಸೋತಿದ್ದ ಭಾರತ ಎ ತಂಡ ಫೈನಲ್ ರೇಸ್​ನಲ್ಲಿ ಉಳಿಯಬೇಕೆಂದರೆ ಈ ಪಂದ್ಯವನ್ನು ಗೆಲ್ಲಲೇಬೇಕಿತ್ತು. ಅದರಂತೆ ಈ ನಿರ್ಣಾಯಕ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ ಎ ತಂಡ 101 ರನ್​ಗಳಿಂದ ಅಫ್ಘಾನಿಸ್ತಾನ ಎ ತಂಡವನ್ನು ಸೋಲಿಸುವ ಮೂಲಕ ಹಿಂದಿನ ಸೋಲಿಗೆ ಸೇಡು ತೀರಿಸಿಕೊಂಡಿದ್ದಲ್ಲದೆ ಅಧಿಕೃತವಾಗಿ ಫೈನಲ್​ಗೂ ಟಿಕೆಟ್ ಪಡೆದುಕೊಂಡಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಎ 319 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಅಫ್ಘನ್ ಎ ಕೇವಲ218 ರನ್​ಗಳಿಗೆ ಆಲೌಟ್ ಆಯಿತು. ವೈಭವ್ ಸೂರ್ಯವಂಶಿ 28 ಬಾಲ್‌ಗೆ 38 ರನ್‌ ಹೊಡೆದಿದ್ದಾರೆ.

Kishor KV

Leave a Reply

Your email address will not be published. Required fields are marked *