ಮುಂಗಾರಿನ ಕೊರತೆಯಿಂದ ಕಂಗೆಟ್ಟ ರೈತರು – ಉಪಗ್ರಹ ಚಿತ್ರಗಳಲ್ಲಿ ಮೋಡಗಳು ಸುಳಿವೇ ಇಲ್ಲ!

ಮುಂಗಾರಿನ ಕೊರತೆಯಿಂದ ಕಂಗೆಟ್ಟ ರೈತರು – ಉಪಗ್ರಹ ಚಿತ್ರಗಳಲ್ಲಿ ಮೋಡಗಳು ಸುಳಿವೇ ಇಲ್ಲ!

ಈ ವರ್ಷ ಮಳೆ ಕೊರತೆ ಇದೆ ಅನ್ನೋದನ್ನು ಉಪಗ್ರಹಗಳು ಕೂಡಾ ಖಚಿತ ಪಡಿಸಿವೆ. ಭಾರತೀಯ ಹವಾಮಾನ ಇಲಾಖೆಯಿಂದ ಬಂದ ಹೊಸ ಉಪಗ್ರಹ ಚಿತ್ರಗಳು ಭಾರತದಲ್ಲಿ ಮಾನ್ಸೂನ್ ವಿರಳ ಅನ್ನೋದನ್ನು ತೋರಿಸಿಕೊಟ್ಟಿದೆ.

ಇದನ್ನೂ ಓದಿ:ಮಳೆಯ ಅಭಾವದಿಂದ ಕಂಗೆಟ್ಟ ಕರ್ನಾಟಕ – ದೇಶದಾದ್ಯಂತ 200 ಜಿಲ್ಲೆಗಳಲ್ಲಿ ಮುಂಗಾರು ಕೊರತೆ

ಯುರೋಪಿಯನ್ ಮತ್ತು ಅಮೆರಿಕನ್ ಹವಾಮಾನ ಸಂಸ್ಥೆಗಳಿಂದ ರಿಲೀಸ್ ಆಗಿರುವ ಉಪಗ್ರಹ ಚಿತ್ರಗಳು ಭಾರತದ ನೈಋತ್ಯ ಮಾನ್ಸೂನ್ ಚಿತ್ರವನ್ನು ಬಿಡುಗಡೆ ಮಾಡಿದೆ. ಜೂನ್ ಮಧ್ಯಭಾಗದಲ್ಲಿ ದೇಶದ ಹೆಚ್ಚಿನ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಕಾಣಿಸಿಕೊಂಡಿದ್ದು, ನಂತರ ಮಳೆ ಮೋಡಗಳು ಕಾಣಿಸುತ್ತಿಲ್ಲ. NOAA ಹವಾಮಾನ ಉಪಗ್ರಹವಾದ ಇಯುಎಮ್ಇಟಿಎಸ್ಎಟಿ  ನಿರ್ವಹಿಸುವ ಯುರೋಪಿಯನ್ ಹವಾಮಾನ ಉಪಗ್ರಹ ಎಮ್ಇಟಿಇಒಎಸ್ಎಟಿ ಇಂಡಿಯನ್ ಓಷಿಯನ್ ಡಾಟಾ ಕವರೇಜ್  ಮತ್ತು ಇಸ್ರೋದ ಇನ್ಸಾಟ್-3DS ಮಂಗಳವಾರ ಸೆರೆಹಿಡಿದ ಚಿತ್ರಗಳು ಭಾರತದ ಮಧ್ಯ, ಪಶ್ಚಿಮ ಮತ್ತು ಪೇನಿನ್ಸುಲರ್ ಪ್ರದೇಶಗಳು ಸಾಮಾನ್ಯವಾಗಿ ಸಕ್ರಿಯ ಮಾನ್ಸೂನ್ ಗೆ ಸಂಬಂಧಿಸಿದ ದಟ್ಟವಾದ ಮೋಡದ ಪಟ್ಟಿಗಳಿಂದ ದೂರವಿರುವುದನ್ನು ತೋರಿಸುತ್ತದೆ.

ಭಾರತದ ಹೆಚ್ಚಿನ ಭಾಗವು ಒಣಗಿದಂತೆ ಕಾಣುತ್ತದೆ. ಬಂಗಾಳಕೊಲ್ಲಿಯ ಕೆಲವು ಭಾಗಗಳು ಮತ್ತು ಪೂರ್ವ ಪ್ರದೇಶಗಳಲ್ಲಿ ಚದುರಿದ ತುಂಡುಗಳು ಮಾತ್ರ ಕಾಣಿಸುತ್ತದೆ. ಹವಾಮಾನ ತಜ್ಞರು ಹೇಳಿದಂತೆ ಈ ಪರಿಸ್ಥಿತಿಯು ಮಾನ್ಸೂನ್ ದುರ್ಬಲತೆಯನ್ನು ತೋರಿಸುತ್ತದೆ. ದೇಶದ ಬಹುತೇಕ ಭಾಗಗಳಲ್ಲಿ ಶಾಖವು ಹೆಚ್ಚಾಗಿದೆ. ಮಾನ್ಸೂನ್ ಎಂಜಿನ್ ನ ಮತ್ತೊಂದು ನಿರ್ಣಾಯಕ ಅಂಶವಾದ ಅಡ್ಡ- ಇಕ್ವೇಟರ್ ಹರಿವು ಕೂಡ ದುರ್ಬಲವಾಗಿದೆ. ಪಶ್ಚಿಮ ಇಂಡಿಯನ್ ಓಶಿಯನ್ ಮೇಲೆ ಒಣ ಗಾಳಿಯನ್ನು ಸ್ಯಾಟಿಲೈಟ್ ಚಿತ್ರ ತೋರಿಸುತ್ತಿದೆ. ತೇವಾಂಶ ನಕ್ಷೆಯಲ್ಲಿ ದೊಡ್ಡ ಕಂದು ಪ್ರದೇಶಗಳು ಕಾಣಿಸುತ್ತಿವೆ. ಅರೇಬಿಯನ್ ಸಮುದ್ರದ ಮುಂಗಾರು ದುರ್ಬಲವಾಗಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.

ಇನ್ನೊಂದು ಸಮಾಧಾನದ ವಿಚಾರವೇನೆಂದರೆ, ಮುಂದಿನ ವಾರಗಳಲ್ಲಿ ಮಾನ್ಸೂನ್ ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂಬರುವ ದಿನಗಳಲ್ಲಿ ಗಾಳಿಯಲ್ಲಿನ ಆರ್ದ್ರತೆಯ ಪ್ರಮಾಣಹೆಚ್ಚಾಗುವ ಸಾಧ್ಯತೆಯಿದೆ. ಜೂನ್ ಅಂತ್ಯದ ವೇಳೆಗೆ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

Sulekha

Leave a Reply

Your email address will not be published. Required fields are marked *