AFG ಮ್ಯಾಚಲ್ಲೂ ಕೈಕೊಟ್ಟ ವೈಭವ್ – ಸೂರ್ಯವಂಶಿನೇ TARGET ಮಾಡಿದ್ರಾ?
ಕೆಣಕಿದ ವಿಶೇನ್ ಬಾಲ ಕತ್ತರಿಸಿದ ಲಂಕಾ!

ಕ್ರಿಕೆಟ್ ಜಗತ್ತಿನಲ್ಲಿ ಆತನದೇ ಸುದ್ದಿ.. ಮೈದಾನದಲ್ಲೂ ಅವನದ್ದೇ ಸದ್ದು.. ಸೋಶಿಯಲ್ ಮೀಡಿಯಾದಲ್ಲಂತೂ ಆತನೇ ಸೆನ್ಸೇಷನಲ್ ಸ್ಟಾರ್. ವಂಡರ್ ಕಿಡ್, ಬಾಸ್ ಬೇಬಿಯಾಗಿ ಆಲ್ರೆಡಿ ಟ್ರೆಂಡ್ ಸೆಟ್ ಮಾಡಿರೋ ವೈಭವ್ ಸೂರ್ಯವಂಶಿ ಈಗ ಏನೇ ಮಾಡಿದ್ರೂ ಬಿಗ್ ಬ್ರೇಕಿಂಗ್ ನ್ಯೂಸ್. ಐಪಿಎಲ್ ವೇಳೆ ಬ್ಯಾಟಿಂಗ್ನಲ್ಲೇ ಬೆಂಕಿ ಉಗುಳಿ ಭಾರತ ಎ ತಂಡದ ಪರ ಕಣಕ್ಕಿಳಿದ ಸೂರ್ಯವಂಶಿ ಕಳೆದ ನಾಲ್ಕು ಮ್ಯಾಚ್ಗಳಲ್ಲಿ ಸ್ವಲ್ಪ ಡಲ್ ಆಗಿದ್ದಾರೆ. ಆದ್ರೆ ಸೂರ್ಯವಂಶಿಯನ್ನೇ ಟಾರ್ಗೆಟ್ ಮಾಡಿದ್ರಾ ಅನ್ನೋ ಪ್ರಶ್ನೆಯೂ ಮೂಡ್ತಿದೆ.
ಇದನ್ನೂ ಓದಿ : ಭಾರತಕ್ಕಿಲ್ಲ ALL-FORMAT ಅಸ್ತ್ರ – 2 ದಶಕದ ಸಕ್ಸಸ್ ಮಂತ್ರ ಬಿಟ್ಟಿದ್ದೇಕೆ?
ಭಾರತ, ಅಫ್ಘಾನಿಸ್ತಾನ ಹಾಗೇ ಶ್ರೀಲಂಕಾ ತಂಡಗಳ ನಡುವೆ ನಡೆಯುತ್ತಿರೋ ಎ ತಂಡಗಳ ತ್ರಿಕೋನ ಏಕದಿನ ಸರಣಿಯಲ್ಲಿ ಆನ್ ಫೀಲ್ಡ್, ಆಫ್ ದಿ ಫೀಲ್ಡ್ನಲ್ಲಿ ವೈಭವ್ ಸೂರ್ಯವಂಶಿ ಹೆಸರು ಹಲ್ಚಲ್ ಎಬ್ಬಿಸಿದೆ. ಐಪಿಎಲ್ನಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡ್ತಿದ್ದ ಸೂರ್ಯವಂಶಿ ಭಾರತದ ಪರ ಎ ತಂಡದಲ್ಲಿ ನಾಲ್ಕು ಮ್ಯಾಚ್ ಆಡಿದ್ದಾರೆ. ಆದ್ರೆ ನಾಲ್ಕೂ ಪಂದ್ಯಗಳಲ್ಲೂ ಎಕ್ಸ್ಪೆಕ್ಟೇಷನಲ್ ರನ್ಸ್ ಬಂದಿಲ್ಲ.
ಜೀವದಾನ ಸಿಕ್ಕರೂ ಬೇಗನೇ ಔಟ್ ಆದ ಸೂರ್ಯವಂಶಿ!
ಶ್ರೀಲಂಕಾದ ರಂಗಿರಿ ದಂಬುಲ್ಲಾ ಅಂತಾರಾಷ್ಟ್ರೀಯ ಸ್ಟೇಡಿಯಮ್ನಲ್ಲಿ ತ್ರಿಕೋನ ಏಕದಿನ ಸರಣಿ ನಡೀತಿದೆ. ಭಾರತ ತನ್ನ ನಾಲ್ಕನೇ ಮ್ಯಾಚ್ನಲ್ಲಿ ಅಫ್ಘಾನಿಸ್ತಾನ ಎ ತಂಡದ ವಿರುದ್ಧ ಕಣಕ್ಕಿಳಿದಿದೆ. ಬಟ್ ನಾಲ್ಕನೇ ಮ್ಯಾಚಲ್ಲೂ ವೈಭವ್ ಕಡೆಯಿಂದ ಬಿಗ್ ಇನ್ನಿಂಗ್ಸ್ ಬಂದಿಲ್ಲ. ಈ ಪಂದ್ಯದಲ್ಲೂ ಓಪನರ್ ಆಗಿ ಕಣಕ್ಕಿಳಿದ ವೈಭವ್ ಆರಂಭದಲ್ಲೇ ಅಗ್ರೆಸ್ಸಿವ್ ಆಗಿ ಸ್ಟಾರ್ಟ್ ಮಾಡಿದ್ರು. ಕೇವಲ 27 ಎಸೆತಗಳಲ್ಲಿ 38 ರನ್ ಬಾರಿಸಿದ್ದರು. ಆದ್ರೆ ಇನ್ನಿಂಗ್ಸ್‌ನ 8ನೇ ಓವರ್‌ನಲ್ಲಿ ಬಿಗ್ ಹಿಟ್ಗೆ ಕೈಹಾಕಿ ಬೌಲರ್ ಫರಿದೂನ್ ಎಸೆದ ಶಾರ್ಟ್ ಪಿಚ್ ಚೆಂಡನ್ನು ಪುಲ್ ಶಾಟ್ ಆಡಲು ಟ್ರೈ ಮಾಡಿ ಕ್ಯಾಚ್ ಕೊಟ್ರು. ಌಕ್ಚುಲಿ ಈ ಮ್ಯಾಚಲ್ಲಿ ಆರಂಭದಲ್ಲೇ ಸೂರ್ಯವಂಶಿ ಔಟ್ ಆಗ್ಬೇಕಿತ್ತು. ಕಟ್ ಶಾಟ್ ಹೊಡೆಯೋಕೆ ಹೋಗಿ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಕ್ಯಾಚ್ ನೀಡಿದ್ದರು. ಆನ್-ಫೀಲ್ಡ್ ಅಂಪೈರ್ ಔಟ್ ಕೂಡ ಕೊಟ್ಟಿದ್ರು. ಖಾತೆಯನ್ನೂ ತೆರೆಯದೆ ಸೂರ್ಯವಂಶಿ ಕೂಡ ಪೆವಿಲಿಯನ್ನತ್ತ ಹೆಜ್ಜೆ ಹಾಕ್ತಿದ್ರು. ಆದ್ರೆ ಥರ್ಡ್ ಅಂಪೈರ್ ಮತ್ತೆ ಚೆಕ್ ಮಾಡಿದಾಗ ಫೀಲ್ಡರ್ ಚೆಂಡನ್ನು ನೆಲಕ್ಕೆ ಮುಟ್ಟಿಸಿರುವುದು ಗೊತ್ತಾಗಿ ನಾಟ್ಔಟ್ ಅಂತಾ ಕೊಟ್ರು. ಹೀಗಿದ್ರೂ 38 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದ್ರು. ಸದ್ಯ ಈ ಸರಣಿಯ ನಾಲ್ಕು ಪಂದ್ಯಗಳಿಂದ ಒಟ್ಟು 117 ರನ್ ಕಲೆಹಾಕಿದ್ದಾರೆ. ಆದ್ರೆ ಇಲ್ಲಿ ಒಂದು ವಿಚಾರವನ್ನ ಗಮನಿಸಬೇಕು. ಐಪಿಎಲ್ನಲ್ಲಿ ಸಿಡಿಲಬ್ಬರದ ಪ್ರದರ್ಶನ ನೀಡಿದ್ದ ವೈಭವ್ ಸೂರ್ಯವಂಶಿಯನ್ನ ಟಾರ್ಗೆಟ್ ಮಾಡ್ತಿದ್ದಾರಾ ಅನ್ನೋ ಪ್ರಶ್ನೆ ಮೂಡ್ತಿದೆ. ಹಾಗೇ ಕಾಲು ಕೆರ್ಕೊಂಡು ಬಂದು ವೈಭವ್ ಜೊತೆ ಜಗಳ ಮಾಡಿದ್ದ ಲಂಕಾ ಪ್ಲೇಯರ್ ಬಾಲ ಕತ್ತರಿಸಲಾಗಿದೆ.
ಸೂರ್ಯವಂಶಿಗೆ ಸ್ಲೆಡ್ಜಿಂಗ್ ಕಾಟ!
ಭಾರತ ಎ ಮತ್ತು ಶ್ರೀಲಂಕಾ ಎ ತಂಡಗಳ ನಡುವಿನ ಮ್ಯಾಚಲ್ಲಿ ಗಲಾಟೆ
ಪಂದ್ಯ ಮುಗಿದ ನಂತರ ಶ್ರೀಲಂಕಾ ಆಟಗಾರರು ಅಗ್ರೆಸ್ಸಿವ್ ಸೆಲೆಬ್ರೇಷನ್
ಲಂಕಾ ಆಟಗಾರರಿಂದ ವೈಭವ್ ರನ್ನ ಟ್ರಿಗರ್ ಮಾಡೋ ಥರ ಮಾತು
ದಿಸ್ ಈಸ್ ನಾಟ್ ಎ ಐಪಿಎಲ್.. ಗೋ ಬ್ಯಾಕ್ ಹೋಂ ಎಂದು ಅಣಕ
ಲಂಕಾ ಆಟಗಾರ ವಿಶೇನ್ ಹಲಂಬಗೆ ಅವ್ರ ಅಧಿಕ ಪ್ರಸಂಗವೇ ಕಾರಣ ಅ
ಆನ್-ಫೀಲ್ಡ್ ಅಂಪೈರ್ ಗಳು ನೀಡಿದ ವರದಿಯ ಆಧಾರದ ಮೇಲೆ ತನಿಖೆ
ವಿಶೇನ್ ಹಲಂಬೆಗೆ ದಂ, ಜಗಳ ತಡೆಯಲು ಅಡ್ಡ ಬಂದಿದ್ದ ಡಿಕ್ವೆಲ್ಲಾಗೂ ದಂಡ
ವೈಭವ್ಗೆ ಯಾವುದೇ ದಂಡ ವಿಧಿಸಿಲ್ಲ ಅಥವಾ ವಾರ್ನಿಂಗ್ ಕೊಟ್ಟಿಲ್ಲ ಎಂದ ಸೈಕಿಯಾ
ಇನ್ನು ಇದೆಲ್ಲದ್ರ ನಡುವೆ ಸೂರ್ಯವಂಶಿ ಬಗ್ಗೆ ಸ್ಲೆಡ್ಜಿಂಗ್ ಅಸ್ತ್ರ ಪ್ರಯೋಗಿಸ್ತಿದ್ದಾರಾ ಅನ್ನೋ ಚರ್ಚೆಗಳೂ ನಡೀತಿವೆ. ವಿಶೇನ್ ಹಲಂಬಗೆ ಮೊದಲ ಪಂದ್ಯದಿಂದಲೂ ವೈಭವ್ ಸೂರ್ಯವಂಶಿ ಅವರ ಕಾನ್ಸಂಟ್ರೇಷನ್ ಹಾಳು ಮಾಡೋ ಉದ್ದೇಶದಿಂದಲೇ ಸ್ಲೆಡ್ಜಿಂಗ್ ಮಾಡುತ್ತಿದ್ದರು ಅನ್ನೋದು ಗೊತ್ತಾಗಿದೆ. ಶ್ರೀಲಂಕಾ ‘ಎ’ ತಂಡದ ಕೆಲವು ಹಿರಿಯ ಆಟಗಾರರು ವಿಶೇನ್ ಹುಚ್ಚಾಟಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂದ್ಯದ ಬಳಿಕ ಶ್ರೀಲಂಕಾದ ಡ್ರೆಸ್ಸಿಂಗ್ ಕೋಣೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಕೆಲವು ಹಿರಿಯ ಆಟಗಾರರು ವೈಭವ್ ಸೂರ್ಯವಂಶಿಯನ್ನು ಭೇಟಿಯಾಗಿ ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ. ಒಟ್ನಲ್ಲಿ ವೈಭವ್ ಸೂರ್ಯವಂಶಿಯನ್ನ ಕಟ್ಟಿ ಹಾಕೋಕೆ ಎದುರಾಳಿ ಆಟಗಾರರು ಅಡ್ಡದಾರಿ ಹಿಡಿಯುತ್ತಿರೋದು ಇಲ್ಲಿ ಕ್ಲಿಯರ್ ಆಗಿ ಗೊತ್ತಾಗ್ತಿದೆ.

ನೋಡಿರಿ

